ಅತ್ಯಾಚಾರ ಸಂತ್ರಸ್ಥೆಗೆ ಮತಾಂತರ ಬೆದರಿಕೆ: 'ಲವ್ ಜಿಹಾದ್ ಕುರಿತು ಸಿಎಂಗೆ ದೂರಿತ್ತ ಸಂಸದೆ ಶೋಭಾ ಕರಾಂದ್ಲಾಜೆ

ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳು ಅದನ್ನು ವೀಡಿಯೋ ಚಿತ್ರೀಕರಣಗೊಳಿಸಿರುವುದಲ್ಲದೆ ಅದೇ ವೀಡಿಯೋ ಇಟ್ಟುಕೊಂಡು ಅವಳನ್ನು ಮತಾಂತರಕ್ಕೆ ಯತ್ನಿಸಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಈ ಕುರಿತು ಸಂಸದೆ ಶೋಭಾ ಕರಾಂದ್ಲಾಜೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿದ್ದಾರೆ.

Published: 05th January 2020 01:45 PM  |   Last Updated: 05th January 2020 01:48 PM   |  A+A-


ಅತ್ಯಾಚಾರ ಸಂತ್ರಸ್ಥೆಗೆ ಮತಾಂತರ ಬೆದರಿಕೆ: 'ಲವ್ ಜಿಹಾದ” ಕುರಿತು ಸಿಎಂಗೆ ದೂರಿತ್ತ ಸಂಸದೆ ಶೋಭಾ ಕರಾಂದ್ಲಾಜೆ

Posted By : Raghavendra Adiga
Source : Online Desk

ಬೆಂಗಳೂರು: ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗಳು ಅದನ್ನು ವೀಡಿಯೋ ಚಿತ್ರೀಕರಣಗೊಳಿಸಿರುವುದಲ್ಲದೆ ಅದೇ ವೀಡಿಯೋ ಇಟ್ಟುಕೊಂಡು ಅವಳನ್ನು ಮತಾಂತರಕ್ಕೆ ಯತ್ನಿಸಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಈ ಕುರಿತು ಸಂಸದೆ ಶೋಭಾ ಕರಾಂದ್ಲಾಜೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿದ್ದಾರೆ.

ಕರ್ನಾಟಕದ ಗಡಿ ಪ್ರದೇಶವಾಗಿರುವ ಕೇರಳದ ಕಾಸರಗೋಡಿನ ತಂಗೊಳಿಯ ಯುವತಿಯ ಮೇಲೆ ಮುಸ್ಲಿಂ ಯುವಕನೋರ್ವ ಅತ್ಯಾಚಾರ ನಡೆಸಿದ್ದ.  ಆನಂತರ ಅದನ್ನು ವೀಡಿಯೋ ಮಾಡಿ ಯುವತಿಯನ್ನು ಮತಾಂತರಕ್ಕೆ ಒತ್ತಾಯಿಸಲಾಗಿದೆ.

ಘಟನೆ ವಿವರ

ಕಾಸರಗೋಡಿನ ಯುವತಿಗೆ ಸ್ನೇಹದ ನೆಪ ಹೇಳಿ ಮತ್ತು ಬರುವ ಪೌಷಧಿ ಮಿಶ್ರಣದ ಪಾನೀಯ ಕುಡಿಸಿದ್ದ ಯುವಕ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಬಳಿಕ ಸಂತ್ರಸ್ಥೆಯನ್ನು ಮಂಗಳೂರು, ಬೆಂಗಳೂರಿಗೆ ಕರೆತಂದು ಮತ್ತೆ ಮತ್ತೆ ಅತ್ಯಾಚಾರ ನಡೆಸಲಾಗಿದೆ. ಅಲ್ಲದೆ ಆಕೆಯ ಮೇಲೆರಗಿದ ಕಾಮುಕರು ತಮ್ಮ ಕೃತ್ಯವನ್ನು ವೀಡಿಯೋ ಚಿತ್ರೀಕರಣ ಮಾಡಿದ್ದಾರೆ. 

ಈ ವಿಡಿಯೋ ಇಟ್ಟುಕೊಂಡು ಯುವತಿಯನ್ನು ತಮ್ಮ ಇಸ್ಲಾಂ ಧರ್ಮಕ್ಕೆ ಮತಾಂತರವಾಗಬೇಕೆಂದು ಬೆದರಿಕೆ ಹಾಕುತ್ತಿದ್ದ. ಹಾಗೊಮ್ಮೆ ಮತಾಂತರವಾಗದೆ ಹೋದಲ್ಲಿ ವೀಡಿಯೋವನ್ನು ಬಹಿರಂಗಗೊಳಿಸುವುದಾಗಿ ಆತ ಯುವತಿಗೆ ಹೆದರಿಸಿಸಿದ್ದ. ಈ ಸಂಬಂಧ ಯುವತಿ ಕುಟುಂಬ ಕಾಸರಗೋಡು ಪೋಲೀಸರಿಗೆ ದೂರು ಕೊಟ್ಟರೂ ಉಪಯೋಗವಾಗಿಲ್ಲ.

ಆರೋಪಿಗಳು ಬೆಂಗಳೂರಲ್ಲಿ ನೆಲೆಸಿದ್ದ ಕಾರಣ ಯುವತಿಯು ಸಂಸದೆ ಶೋಭಾ ಅವರತ್ತ ತೆರಳಿ ದೂರು ಸಲ್ಲಿಸಿದ್ದಾಳೆ. ಇದೀಗ ಸಂಸದೆ ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪಗೆ ಮಾಹಿತಿ ನೀಡಿರುವುದಲ್ಲದೆ ಸಂತ್ರಸ್ಥೆಯ ಕುಟುಂಬದೊಡನೆ ತೆರಳಿ ಪೊಲೀಸ್ ಕಮಿಷನರ್​ಗೆಸಹ ಅಧಿಕೃತ ದೂರು ಸಲ್ಲಿಸಿದ್ದಾರೆ. ಮತ್ತು ಆರೋಪಿಗಳನ್ನು ಪತ್ತೆ ಮಾಡಿ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ. ದೂರಿನ ಹಿನ್ನೆಲೆ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆದಿದೆ.

 


 

 

 

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp