ಜನವರಿ 9 ರಂದು ಬಿಡಿಎಯಿಂದ ಮೂಲೆ ನಿವೇಶನಗಳ ಹರಾಜು

ಬೆಂಗಳೂರು ಅಭಿವೃದ್ಧಿ ಪ್ರಾಧಿತಾಕ ಜನವರಿ 9 ರಂದು ಬೆಳಗ್ಗೆ 11 ಗಂಟೆಗೆ ವಾಣಿಜ್ಯ ಮತ್ತು ರೆಸಿಡೆನ್ಸಿಯಲ್ ಮೂಲೆ ನಿವೇಶನಗಳ ಹರಾಜು ಪ್ರಕ್ರಿಯೆ ನಡೆಯಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿತಾಕ ಜನವರಿ 9 ರಂದು ಬೆಳಗ್ಗೆ 11 ಗಂಟೆಗೆ ವಾಣಿಜ್ಯ ಮತ್ತು ರೆಸಿಡೆನ್ಸಿಯಲ್ ಮೂಲೆ ನಿವೇಶನಗಳ ಹರಾಜು ಪ್ರಕ್ರಿಯೆ ನಡೆಯಲಿದೆ.

ಬಿಡಿಎ ಜನವರಿ 9 ರಂದು ಬೆಳಗ್ಗೆ 59 ನಿವೇಶನಗಳನ್ನು ಹರಾಜು ಮಾಡಲಿದೆ, ಯಾವ್ಯಾವ ಪ್ರದೇಶಗಳಲ್ಲಿ ನಿವೇಶನಗಳಿವೆಯೋ ಏರಿಯಾ ಮೇಲೆ ಅಲ್ಲಿನ ಬೆಲೆ ನಿಗದಿ ಮಾಡಲಾಗುತ್ತದೆ, ಪ್ರತಿ ಚದರ ಮೀ ಗೆ 35,550 ರು ಹಾಗೂ 1,29,000 ದ ವರೆಗೂ ಇರುತ್ತದೆ, ಎಚ್ಎಸ್ ಆರ್ ಲೇಔಟ್ ಅತಿ ಹೆಚ್ಚಿನ ದರವಾಗಿದೆ.

ಬಿಡಿಎ ನಿವೇಶನಗಳಲ್ಲಿ ಮೂಲೆ ನಿವೇಶನಕ್ಕೆ ಹೆಚ್ಚಿನ ಬೇಡಿಕೆ ಹೆಚ್ಚಿದೆ, ಎಲ್ಲಾ ಕಡೆಯಿಂದಲೂ ಮೂಲ ನಿವೇಶನಗಲಿಗೆ ಅನುಕೂಲವಿರುತ್ತದೆ, ಹೀಗಾಗಿ ಹೆಚ್ಚಿನ ಮಂದಿ ಮೂಲೆ ನಿವೇಶನವನ್ನೇ ಬಯಸುತ್ತಾರೆ,  ಬೇಡಿಕೆ ಹೆಚ್ಚಿರುವುದರಿಂದ ಬಿಡಿಎಗೆ ಹೆಚ್ಚಿನ ಆದಾಯ ಹರಿದು ಬರಲಿದೆ. ಜನವರಿ 9ರಿಂದ ಜನವರಿ 21ರ ಸಂಜೆ ಆರು ಗಂಟೆವರೆಗೂ ಬಿಡ್  ನಡೆಯಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com