ಫೆ.2ರಂದು ಉಪರಾಷ್ಟ್ರಪತಿಯಿಂದ ಬಿಆರ್ ಟಿಎಸ್ ಯೋಜನೆ ಲೋಕಾರ್ಪಣೆ 

ಹುಬ್ಬಳಿ- ಧಾರವಾಡ ಅವಳಿ ನಗರದ ನಡುವಣದ ಬಹು ನಿರೀಕ್ಷಿತ ತ್ವರಿತ  ಬಸ್ ಸಾರಿಗೆ ವ್ಯವಸ್ಥೆ (ಬಿಆರ್ ಟಿಎಸ್ ) ಮುಂದಿನ ತಿಂಗಳು ಅಧಿಕೃತವಾಗಿ ಲೋಕಾರ್ಪಣೆಯಾಗಲಿದೆ.
ಬಿಆರ್ ಟಿಎಸ್ ಯೋಜನೆ
ಬಿಆರ್ ಟಿಎಸ್ ಯೋಜನೆ

ಹುಬ್ಬಳ್ಳಿ: ಹುಬ್ಬಳಿ- ಧಾರವಾಡ ಅವಳಿ ನಗರ ನಡುವಣದ ಬಹು ನಿರೀಕ್ಷಿತ ತ್ವರಿತ  ಬಸ್ ಸಾರಿಗೆ ವ್ಯವಸ್ಥೆ (ಬಿಆರ್ ಟಿಎಸ್ ) ಮುಂದಿನ ತಿಂಗಳು ಅಧಿಕೃತವಾಗಿ ಲೋಕಾರ್ಪಣೆಯಾಗಲಿದೆ.

ಫೆಬ್ರವರಿ 2ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಈ ಯೋಜನೆಯನ್ನು ದೇಶಕ್ಕೆ ಸಮರ್ಪಣೆ ಮಾಡಲಿದ್ದಾರೆ.

22 ಕಿಲೋ ಮೀಟರ್ ಉದ್ದದ ಈ ಕಾರಿಡಾರ್  ನಲ್ಲಿ 33 ನಿಲ್ದಾಣಗಳಿವೆ. ಎರಡನೇ ಹಂತದಲ್ಲಿ  ವೇಗವಾಗಿ ಬೆಳೆಯುತ್ತಿರುವ ಹುಬ್ಬಳ್ಳಿ ವಿಮಾನ ನಿಲ್ದಾಣ ಮತ್ತಿತರ ಭಾಗಗಳಿಗೆ ಈ ಯೋಜನೆಯನ್ನು ವಿಸ್ತರಿಸುವ ಸಾಧ್ಯತೆ ಇದೆ

ಪ್ರಸ್ತುತ ಈ ಕಾರಿಡಾರ್ ನಲ್ಲಿ 102 ಅತ್ಯುತ್ತಮ ದರ್ಜೆಯ ಎಸಿ ಬಸ್ ಗಳು ಸುಮಾರು 1 ಲಕ್ಷ ಪ್ರಯಾಣಿಕರಿಗೆ ಪ್ರತಿದಿನ ಸೇವೆಯನ್ನು ನೀಡುತ್ತಿವೆ.  

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಇಂದು ಬಿಆರ್ ಟಿಎಸ್ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. 

ಒಂದು ತಿಂಗಳೊಳಗೆ ಬಾಕಿ ಉಳಿದಿರುವ ಕಾಮಗಾರಿಗಳು ಪೂರ್ಣಗೊಳ್ಳಲಿದ್ದು, ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಅವರೊಂದಿಗೆ ಚರ್ಚಿಸಿದ ಬಳಿಕ ದಿನಾಂಕವನ್ನು ಅಂತಿಮಗೊಳಿಸಲಾಗಿದೆ  ಎಂದು ಬಿಆರ್ ಟಿಎಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com