ಮೈಸೂರು: ಫ್ರೀ ಕಾಶ್ಮೀರ ಫಲಕ ಹಿಡಿದಿದ್ದ ನಳಿನಿ ಪರ ವಾದಿಸಲು ವಕೀಲರ ನಕಾರ, ರಸ್ತೆಯಲ್ಲಿ ಕುಳಿತು ರಂಪಾಟ!

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನಡೆದಿದ್ದ ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ ಫಲಕ ಪ್ರದರ್ಶಿಸಿದ್ದ ಯುವತಿ ಬಿ. ನಳಿನಿ ಪರವಾಗಿ ವಕಾಲತ್ತು ವಹಿಸದಿರಲು ವಕೀಲರು ಸಂಘದ ಕಾರ್ಯಕಾರಿ ಸಮಿತಿ ಸಭೆ ನಿರ್ಣಯಿಸಿದ್ದು ಈ ಹಿನ್ನೆಲೆಯಲ್ಲಿ ನಳಿನಿ ರಸ್ತೆ ಮಧ್ಯೆ ಕುಳಿತು ರಂಪಾಟ ಮಾಡಿದ್ದಾರೆ.

Published: 14th January 2020 06:25 PM  |   Last Updated: 14th January 2020 06:25 PM   |  A+A-


Naleeni

ನಳಿನಿ

Posted By : Vishwanath S
Source : Online Desk

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನಡೆದಿದ್ದ ಪ್ರತಿಭಟನೆ ವೇಳೆ ಫ್ರೀ ಕಾಶ್ಮೀರ ಫಲಕ ಪ್ರದರ್ಶಿಸಿದ್ದ ಯುವತಿ ಬಿ. ನಳಿನಿ ಪರವಾಗಿ ವಕಾಲತ್ತು ವಹಿಸದಿರಲು ವಕೀಲರು ಸಂಘದ ಕಾರ್ಯಕಾರಿ ಸಮಿತಿ ಸಭೆ ನಿರ್ಣಯಿಸಿದ್ದು ಈ ಹಿನ್ನೆಲೆಯಲ್ಲಿ ನಳಿನಿ ರಸ್ತೆ ಮಧ್ಯೆ ಕುಳಿತು ರಂಪಾಟ ಮಾಡಿದ್ದಾರೆ. 

ಇನ್ನು ನಳಿನಿ ಪರ ವಕಾಲತ್ತು ವಹಿಸಿದ್ದ ವಕೀಲ ಪೃಥ್ವಿ ಸಹ ವೈಯಕ್ತಿಕ ಕಾರಣಗಳನ್ನು ನೀಡಿ ಪ್ರಕರಣದಿಂದ ಹಿಂದೆ ಸರಿದಿದ್ದಾರೆ. ಇದರಿಂದ ಆಕ್ರೋಶಕೊಂಡ ನಳಿನಿ ನೋ ಹ್ಯೂಮಾನಿಟಿ ಎಂದು ಕೋರ್ಟ್ ಆವರಣದಲ್ಲಿ ಕೂಗಾಡಿದ್ದಾಳೆ.

ನಳಿನಿ ಜೊತೆ ಅವರ ತಾಯಿ ಸಹ ಬಂದಿದ್ದು ಧರಣಿ ಮಾಡುತ್ತಿದ್ದ ಮಗಳನ್ನು ಬಲವಂತವಾಗಿ ಹೊರ ಆವರಣದಿಂದ ಆಟೋದಲ್ಲಿ ಮನೆಗೆ ಕರೆದೊಯ್ದಿದ್ದಾರೆ.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp