ಇಂಧನ ಕ್ಷಮತೆಗಾಗಿ ಕೆಎಸ್‌ಆರ್‌ಟಿಸಿಯ ಸುಳ್ಯ, ಪಾವಗಡ ಮತ್ತು ಅರಸೀಕೆರೆ ಘಟಕಗಳಿಗೆ ಪ್ರಶಸ್ತಿ

ಈ ಬಾರಿ ಇಂಧನ ಕ್ಷಮತೆಗಾಗಿ ಕೆಎಸ್‌ಆರ್‌ಟಿಸಿಯ ಸುಳ್ಯ, ಪಾವಗಡ ಮತ್ತು ಅರಸೀಕೆರೆ ಘಟಕಗಳಿಗೆ ಪ್ರಶಸ್ತಿ ಸಂದಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೇಂದ್ರ ಸರ್ಕಾರದ ಪೆಟ್ರೊಲಿಯಂ ಮತ್ತು ನೈಸಗಿಕ ಅನಿಲ ಸಚಿವಾಲಯದಡಿ ಕರ್ತವ್ಯ ನಿರ್ವಹಿಸುವ ಸಂಸ್ಥೆ ಹಾಗೂ ಪೆಟ್ರೋಲಿಯಂ ಸಂರಕ್ಷಣಾ ಸಂಶೋಧನಾ ಸಂಸ್ಥೆಯು ಪ್ರತಿ ವರ್ಷ ದೇಶದಾದ್ಯಂತ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಇಂಧನ ಕ್ಷಮತಾ ಮಹೋತ್ಸವ ಕಾರ್ಯಕ್ರಮ ಏರ್ಪಡಿಸುತ್ತಿದೆ. 

ಈ ಬಾರಿ ಇಂಧನ ಕ್ಷಮತೆಗಾಗಿ ಕೆಎಸ್‌ಆರ್‌ಟಿಸಿಯ ಸುಳ್ಯ, ಪಾವಗಡ ಮತ್ತು ಅರಸೀಕೆರೆ ಘಟಕಗಳಿಗೆ ಪ್ರಶಸ್ತಿ ಸಂದಿದೆ. 

ಅಕ್ಟೋಬರ್ - ೨೦೧೮ ರಿಂದ ಸೆಪ್ಟೆಂಬರ್-೨೦೧೯ ರ ಅವಧಿಯಲ್ಲಿ ಇಂಧನ ಕ್ಷಮತೆ ಸಾಧಿಸಿದ ಈ ಘಟಕಗಳಿಗೆ ಪ್ರಶಸ್ತಿ ಲಭಿಸಿದ್ದು, ಕಬ್ಬನ್ ಪಾರ್ಕ್ ನ ಜವಾಹರ್ ಬಾಲಭವನದಲ್ಲಿ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಈ ಘಟಕಗಳಿಗ ಪ್ರಶಸ್ತಿ ಪ್ರದಾನ ಮಾಡಲಾಯಿತು.   

ನಿಗಮದ ಸುಳ್ಯ, ಪಾವಗಡ ಮತ್ತು ಅರಸೀಕೆರೆ ಘಟಕಗಳು ಕೆಎಂಪಿಎಲ್ ನಲ್ಲಿ ಉತ್ತಮ ಸಾಧನೆ ಮಾಡಿರುವ ಹಿನ್ನಲೆಯಲ್ಲಿ ಇಂಧನ ಕ್ಷಮತೆಗಾಗಿ ರಾಜ್ಯ ಮಟ್ಟದಲ್ಲಿ ಕೆಎಸ್‌ಆರ್‌ಟಿಸಿ ಯ ಮೂರು ಘಟಕಗಳಿಗೆ ಅತ್ಯುತ್ತಮ ಘಟಕಗಳ ಪ್ರಶಸ್ತಿ ಹಾಗೂ ತಲಾ 50 ಸಾವಿರ ರೂ ನಗದು ಬಹುಮಾನ, ಪ್ರಶಸ್ತಿ ಫಲಕಕ್ಕೆ ಪಾತ್ರವಾಗಿವೆ ಎಂದು ಕೆ.ಎಸ್ಅರ್.ಟಿ.ಸಿ. ಪ್ರಕಟಣೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com