ಆನಂದ್ ಸಿಂಗ್, ಕಂಪ್ಲಿ ಗಣೇಶ್ ಖುದ್ದು ಹಾಜರಾಗಲೇಬೇಕು: ಹೈಕೋರ್ಟ್ ಆದೇಶ

ಬೆಂಗಳೂರು; ಬಿಡದಿಯ ಈಗಲ್‌ಟನ್ ರೆಸಾರ್ಟ್‌ನಲ್ಲಿ ನಡೆದ ಹಲ್ಲೆ ಪ್ರಕರಣವನ್ನು ಪರಸ್ಪರ ರಾಜಿ-ಸಂಧಾನದ ಮೂಲಕ ಬಗೆಹರಿಸಿಕೊಂಡಿರುವ ಶಾಸಕರಾದ ಆನಂದ್ ಸಿಂಗ್ ಮತ್ತು ಜೆ.ಎನ್. ಗಣೇಶ್ ಖುದ್ದು ಹಾಜರಾಗಿ ಹೇಳಿಕೆ ನೀಡಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ. 
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು; ಬಿಡದಿಯ ಈಗಲ್‌ಟನ್ ರೆಸಾರ್ಟ್‌ನಲ್ಲಿ ನಡೆದ ಹಲ್ಲೆ ಪ್ರಕರಣವನ್ನು ಪರಸ್ಪರ ರಾಜಿ-ಸಂಧಾನದ ಮೂಲಕ ಬಗೆಹರಿಸಿಕೊಂಡಿರುವ ಶಾಸಕರಾದ ಆನಂದ್ ಸಿಂಗ್ ಮತ್ತು ಜೆ.ಎನ್. ಗಣೇಶ್ ಖುದ್ದು ಹಾಜರಾಗಿ ಹೇಳಿಕೆ ನೀಡಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.

ಪ್ರಕರಣ ರದ್ದು ಕೋರಿ ಗಣೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎ.ಪಾಟೀಲ್ ಅವರಿದ್ದ ಏಸಕದಸ್ಯ ಪೀಠ ಈ ಆದೇಶ ನೀಡಿದೆ.

ಮಂಗಳವಾರ ಅರ್ಜಿ ವಿಚಾರಣೆಗೆ ಬಂದಾಗ, ಆನಂದ್ ಸಿಂಗ್ ಪರ ವಕೀಲರು, ಸಿಂಗ್ ಪರವಾಗಿ ಪ್ರಮಾಣಪತ್ರ ಸಲ್ಲಿಸಿದರು.  ಅಲ್ಲದೆ, ಮಾತುಕತೆ ಮೂಲಕ ಜಗಳ ಪರಿಹರಿಸಿಕೊಳ್ಳಲಾಗುವುದು,ತಾವು ದೂರು ಮುಂದುವರಿಸಲು ಬಯಸುವುದಿಲ್ಲ ಎಂದರು.

ಆಗ ನ್ಯಾಯಪೀಠ, ದೂರುದಾರರು ಹಾಗೂ ಪ್ರತಿವಾದಿ ಇಬ್ಬರೂ ಹಾಜರಿದ್ದಾರೆಯೇ ಎಂದು ಕೇಳಿತು. ಗಣೇಶ್‌ ಪರ ವಕೀಲರು, ಇಲ್ಲ, ಆದರೆ ದೂರುದಾರರೇ ಅಫಿಡವಿಟ್‌ ಸಲ್ಲಿಸಿದ್ದಾರೆ ಎಂದರು. ಆದನ್ನು ಒಪ್ಪದ ನ್ಯಾಯಪೀಠ, ಅಫಿಡವಿಟ್‌ ಒಪ್ಪಲು ಸಾಧ್ಯವಿಲ್ಲ, ಇಬ್ಬರೂ ಖುದ್ದು ಹಾಜರಾಗಲೇಬೇಕು, ಅಫಿಡವಿಟ್‌ಗೆ ಅವರೇ ಸಹಿ ಹಾಕಿದ್ದಾರೆನ್ನುವುದಕ್ಕೆ ಖಾತ್ರಿ ಏನು ಎಂದು ಕೇಳಿದರು.

ಗಣೇಶ್‌ ಪರ ವಕೀಲ ಶ್ಯಾಮ್‌ ಸುಂದರ್‌, ಶಾಸಕರೇ ಖುದ್ದು ಸಹಿ ಹಾಕಿದ್ದಾರೆ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಈ ಕಾಲದಲ್ಲಿ ಏನು ಬೇಕಾದರೂ ಆಗಬಹುದು? ಯಾವುದನ್ನೂ ನಂಬಲು ಸಾಧ್ಯವಿಲ್ಲ , ಹಾಗಾಗಿ ಸೋಮವಾರವೇ ನಾನು ಇಬ್ಬರನ್ನೂ ಖುದ್ದು ಹಾಜರುಪಡಿಸಬೇಕು ಎಂದು ಹೇಳಿದ್ದೆ, ಈಗಲೂ ಅದನ್ನೇ ಹೇಳುತ್ತಿದ್ದೇನೆ ಮತ್ತು ಜಂಟಿ ಮೆಮೋ ಸಲ್ಲಿಸಬೇಕು, ಆಗ ಮಾತ್ರ ರಾಜಿಗೆ ಒಪ್ಪಿಗೆ ನೀಡಲಾಗುವುದು ಎಂದು ಹೇಳಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com