ತ್ರಿಸ್ಟಾರ್ ಹೋಟೆಲ್ ಅನ್ನು ಕೊರೋನಾ ವಾರಿಯರ್ಸ್ ಗೆ ಉಚಿತವಾಗಿ ನೀಡಿ ಮಾನವೀಯತೆ ಮೆರೆದ ಸೊಗಡು ಶಿವಣ್ಣ

ರಾಜ್ಯಾದ್ಯಂತ ಮುಂದುವರಿಯುತ್ತಿರುವ ಕೊರೋನಾ ಅಟ್ಟಹಾಸದಿಂದ ಜನರು ತತ್ತರಿಸುತ್ತಿದ್ದಾರೆ, ಇದೇ ವೇಳೆ ಮಾಜಿ ಸಚಿವ ಸೊಗಡು ಶಿವಣ್ಣ ಒಂದು ಹೆಜ್ಜೆ ಮುಂದೆ ಹೋಗಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಸೊಗಡು ಶಿವಣ್ಣ
ಸೊಗಡು ಶಿವಣ್ಣ

ತುಮಕೂರು: ರಾಜ್ಯಾದ್ಯಂತ ಮುಂದುವರಿಯುತ್ತಿರುವ ಕೊರೋನಾ ಅಟ್ಟಹಾಸದಿಂದ ಜನರು ತತ್ತರಿಸುತ್ತಿದ್ದಾರೆ, ಇದೇ ವೇಳೆ ಮಾಜಿ ಸಚಿವ ಸೊಗಡು ಶಿವಣ್ಣ ಒಂದು ಹೆಜ್ಜೆ ಮುಂದೆ ಹೋಗಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ತುಮಕೂರಿನಲ್ಲಿರುವ ತಮ್ಮ ತ್ರಿಸ್ಟಾರ್ ಎಸ್ ಎಸ್ ರೆಸಿಡೆನ್ಸಿ ಹೋಟೆಲ್ ಅನ್ನು ಕೊರೋನಾ ವಾರಿಯರ್ಸ್ ಗಾಗಿ ಗೆಸ್ಟ್ ಹೌಸ್ ಆಗಿ ಪರಿವರ್ತಿಸಿದ್ದಾರೆ. 33 ಕೊಠಡಿಗಳಿರುವ ಈ ಸ್ಟಾರ್ ಹೋಟೆಲ್ ನಲ್ಲಿ ಎಲ್ಲಾ ಸೌಲಭ್ಯಗಳ ಜೊತೆಗೆ ರೆಸ್ಟೋರೆಂಟ್ ಕೂಡ ಇದೆ, ಈಗಾಗಲೇ ನಾಲ್ಕು ವೈದ್ಯರು ಹಲವು ವಾರಗಳಿಂದ ಇದೇ ಹೋಟೆಲ್ ನಲ್ಲಿ ಉಳಿದುಕೊಂಡಿದ್ದಾರೆ.

ನಾವು ಸೊಗಡು ಶಿವಣ್ಣ ಅವರಿಗೆ ಆಭಾರಿಯಾಗಿದ್ದೇವೆ, ನಾವು ದಿನದ 24 ಗಂಟೆ ಕೆಲಸ ಮಾಡುತ್ತಿದ್ದೇನೆ, ಇಲ್ಲಿ ಬಂದು ವಿಶ್ರಾಂತಿ ಪಡೆಯುತ್ತೇನೆ ಎಂದು ಅರಿವಳಿಕೆ ತಜ್ಞ ಡಾ.ಚಂದ್ರಶೇಖರ್ ಹೇಳಿದ್ದಾರೆ. ದಿನ ತಪ್ಪಿ ದಿನ ಮನೆಗೆ ತೆರಳಿ ಮನೆಯಿಂದ ಹೊರೆಗೆ ಕಾರ್ ಶೆಡ್ ನಲ್ಲಿ ಕುಳಿತುಕೊಂಡು ಒಂದು ಕಾಫಿ  ಕುಡಿದು, ವಾಪಾಸ್ ಆಸ್ಪತ್ರೆಗೆ ಬರುತ್ತೇನೆ ಎಂದು ಹೇಳಿದ್ದಾರೆ.

ವಯಸ್ಸಾದ ಪೋಷಕರು, ಸಣ್ಣ ಮಕ್ಕಳು ಮತ್ತು ಅಸ್ವಸ್ಥತೆಯಿಂದಿರುವ ಕೆಲವು ವೈದ್ಯರು ಪ್ರತಿದಿನ ಮನೆಗೆ ಹೋಗುವುದನ್ನು ತ್ಯಾಗ ಮಾಡಿದ್ದಾರೆ ಮತ್ತು ಹೊಸ ವಸತಿ ಸೌಕರ್ಯಗಳು ಅವರ ಸ್ಥೈರ್ಯವನ್ನು ಹೆಚ್ಚಿಸಿವೆ.

ಈ ಸಂಬಂಧ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಸೊಗಡು ಶಿವಣ್ಣ  ಉಚಿತವಾಗಿ ತಮ್ಮ ಹೊಟೆಲ್ ಅನ್ನು ಕ್ವಾರಂಟೈನ್ 
ಸೌಲಭ್ಯಕ್ಕಾಗಿ ನೀಡಿರುವುದಾಗಿ ಅದನ್ನು ಬಳಸಿಕೊಳ್ಳಬೇಕೆಂದು ತಿಳಿಸಿದ್ದಾರೆ, 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com