ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದುತ್ತಿರುವ ಎಸ್.ಸಿ/ಎಸ್.ಟಿ ವಿದ್ಯಾರ್ಥಿಗಳ ಸಂಖ್ಯೆ ಶೇ.50ರಷ್ಟು ಮಾತ್ರ!

ಕಳೆದ ವರ್ಷಕ್ಕೆ ಹೋಲಿಸಿದರೆ ಮತ್ತು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಹೋಲಿಸಿದರೆ ಈ ವರ್ಷ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳ ಸಾಧನೆ ಕಳಪೆಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಳೆದ ವರ್ಷಕ್ಕೆ ಹೋಲಿಸಿದರೆ ಮತ್ತು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಹೋಲಿಸಿದರೆ ಈ ವರ್ಷ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳ ಸಾಧನೆ ಕಳಪೆಯಾಗಿದೆ.

ಈ ವರ್ಷ ಬೋರ್ಡ್ ಪರೀಕ್ಷೆ ಬರೆದ 1.2 ಲಕ್ಷ ಪರಿಶಿಷ್ಟ ಜಾತಿ ಅಭ್ಯರ್ಥಿಗಳ ಪೈಕಿ ಶೇಕಡಾ 50ಕ್ಕಿಂತ ಕಡಿಮೆ ತೇರ್ಗಡೆ ಹೊಂದಿದ್ದಾರೆ. 42 ಸಾವಿರ ಪರಿಶಿಷ್ಟ ಪಂಗಡ ಅಭ್ಯರ್ಥಿಗಳ ಪೈಕಿ ಶೇಕಡಾ 50ಕ್ಕಿಂತ ಸ್ವಲ್ಪ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಸಾಮಾನ್ಯ ವರ್ಗದ 64 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳ ಪೈಕಿ ಶೇಕಡಾ 71.60ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಬೇರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಿಭಾಗದಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳ ಸಂಖ್ಯೆ ಈ ವರ್ಷ ಶೇಕಡಾ 69 ಆಗಿದೆ.
ಎಸ್.ಸಿ/ಎಸ್.ಟಿ  ವಿದ್ಯಾರ್ಥಿಗಳ ಬಹುಮುಖ್ಯ ಸಮಸ್ಯೆ ರಾಜ್ಯ ಖಜಾನೆಯದ್ದು. ಕಲಿಕೆಯ ಸಾಮರ್ಥ್ಯ ಕಡಿಮೆ. ಇದು ಪ್ರಾಥಮಿಕ ಹಂತದ ವಿದ್ಯಾಭ್ಯಾಸದಿಂದ ವಿಶ್ವವಿದ್ಯಾಲಯ ಮಟ್ಟದವರೆಗೆ ಇದೆ ಎನ್ನುತ್ತಾರೆ ಮಾರ್ಗ ಎನ್ ಜಿಒದ ಕಾರ್ಯಕಾರಿ ನಿರ್ದೇಶಕ ರಾಜೇಂದ್ರನ್ ಪ್ರಭಾಕರ್.

ಮೊದಲ ಹಂತದ ಕಲಿಕೆಯವರ ಪ್ರೋತ್ಸಾಹ ಕುಗ್ಗಿಸಲಾಗುತ್ತದೆ. ವಿಜಯಪುರ ಜಿಲ್ಲೆಯಲ್ಲಿ ದಲಿತ ಮಕ್ಕಳನ್ನು ಶೌಚಾಲಯ ಸ್ವಚ್ಛಮಾಡಲು ಕಳುಹಿಸಲಾಗುತ್ತದೆ. ಶಾಲೆಗಳಲ್ಲಿ ದಲಿತ ಮಕ್ಕಳನ್ನು ಅವಮಾನ ಮಾಡಲಾಗುತ್ತದೆ. ಗೌರವ ಸಿಕ್ಕಿದರೆ ಎಸ್.ಸಿ, ಎಸ್ .ಟಿ ವಿದ್ಯಾರ್ಥಿಗಳು ಸಹ ಮುಂದುವರಿಯುತ್ತಾರೆ ನಗರದ ಕೊಳಚೆ ಪ್ರದೇಶದ ಮಕ್ಕಳನ್ನು ಸಹ ಶಿಕ್ಷಕರು ಪ್ರೋತ್ಸಾಹಿಸುವುದಿಲ್ಲ. ನೀವ್ಯಾಕೆ ಗ್ಯಾರೇಜ್ ನಲ್ಲಿ ಕೆಲಸಕ್ಕೆ ಹೋಗಬಾರದು ಎಂದು ದಲಿತ ವಿದ್ಯಾರ್ಥಿಗಳಲ್ಲಿ ಕೇಳುತ್ತಾರೆ ಎನ್ನುತ್ತಾರೆ ಪ್ರಭಾಕರ್.

ಸರ್ಕಾರ ಬಜೆಟ್ ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಉದ್ಧಾರಕ್ಕೆ 30 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಡುತ್ತದೆ. ಅವುಗಳಲ್ಲಿ ಶೇಕಡಾ 40ರಷ್ಟನ್ನು ಶಿಕ್ಷಣ ವಲಯಕ್ಕೆ, ಶೇಕಡಾ 40 ಉದ್ಯೋಗ ಕ್ಷೇತ್ರಕ್ಕೆ ಮತ್ತು ಶೇಕಡಾ 20 ಇತರ ಅಭಿವೃದ್ಧಿಗೆ ಮೀಸಲಿಡಲಾಗುತ್ತದೆ. ಆದರೆ ವಾಸ್ತವವಾಗಿ ಶೇಕಡಾ 80ರಷ್ಟನ್ನು ಮೂಲಭೂತ ಸೌಕರ್ಯ, ನಿರ್ಮಾಣಕ್ಕೆ ಮೀಸಲಿಟ್ಟರೆ ಶಿಕ್ಷಣಕ್ಕೆ ಖರ್ಚಾಗುವುದು ಕೇವಲ ಶೇಕಡಾ 20ರಷ್ಟು ಮಾತ್ರ.

ಶಿಕ್ಷಣ ವ್ಯವಸ್ಥೆಯಲ್ಲಿ ಎಸ್.ಸಿ/ಎಸ್.ಟಿ ಸಮುದಾಯಗಳ ಮಕ್ಕಳಿಗೆ ಪ್ರಾಮುಖ್ಯತೆ ನೀಡದೆ ಕಡೆಗಣಿಸಲಾಗುತ್ತದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಸಿಂತಿಯಾ ಸ್ಟೆಫನ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com