ಬೆಂಗಳೂರಿನಲ್ಲಿ ಒಂದು ವಾರ ಲಾಕ್ ಡೌನ್: ದಾಖಲೆಯ ಮದ್ಯ ಮಾರಾಟ

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಬೆಂಗಳೂರು ನಗರದಲ್ಲಿ ಕಳೆದ ರಾತ್ರಿಯಿಂದ ಒಂದು ವಾರ ಲಾಕ್ ಡೌನ್ ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ಮದ್ಯದಂಗಡಿಗಳು ತೆರೆದಿರುವುದಿಲ್ಲವೆಂದು ಮದ್ಯಪ್ರಿಯರು ಒಂದು ವಾರಕ್ಕೆ ಬೇಕಾಗುವಷ್ಟು ಮದ್ಯ ಖರೀದಿಸಿ ಸಂಗ್ರಹಿಸಿಟ್ಟುಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಬೆಂಗಳೂರು ನಗರದಲ್ಲಿ ಕಳೆದ ರಾತ್ರಿಯಿಂದ ಒಂದು ವಾರ ಲಾಕ್ ಡೌನ್ ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ಮದ್ಯದಂಗಡಿಗಳು ತೆರೆದಿರುವುದಿಲ್ಲವೆಂದು ಮದ್ಯಪ್ರಿಯರು ಒಂದು ವಾರಕ್ಕೆ ಬೇಕಾಗುವಷ್ಟು ಮದ್ಯ ಖರೀದಿಸಿ ಸಂಗ್ರಹಿಸಿಟ್ಟುಕೊಂಡಿದ್ದಾರೆ.

ನಿನ್ನೆ ಮತ್ತು ಮೊನ್ನೆ ದಾಖಲೆಯ ಮಟ್ಟದಲ್ಲಿ ಮದ್ಯ ಮಾರಾಟವಾಗಿದ್ದು ಲಾಕ್ ಡೌನ್ ಹೇರಿಕೆ ತೆಗೆದುಹಾಕಿದ ನಂತರ ಇಷ್ಟೊಂದು ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದ್ದು ನಿನ್ನೆಯೇ. ಬೆಂಗಳೂರು ನಗರದಲ್ಲಿ ಕಳೆದೆರಡು ದಿನಗಳಲ್ಲಿ 4.89 ಲಕ್ಷ ಐಎಂಎಲ್ ಗಳು ಮಾರಾಟವಾಗಿ 215.55 ಕೋಟಿ ರೂಪಾಯಿ, 0.83 ಲಕ್ಷ 14.83 ಕೋಟಿ ರೂಪಾಯಿಯ ಬೀರ್ ಗಳು ಮಾರಾಟವಾಗಿದೆ. ನಿನ್ನೆ ಸಾಯಂಕಾಲ 5 ಗಂಟೆಯವರೆಗೆ 167.20 ಕೋಟಿ ರೂಪಾಯಿ ಬೆಲೆಯ 3 ಲಕ್ಷದ 88 ಸಾವಿರದ 478 ಕಾರ್ಟನ್ಸ್ ಐಎಂಎಲ್ ಮತ್ತು 12.22 ಕೋಟಿ ರೂಪಾಯಿ ಬೆಲೆಯ 68 ಸಾವಿರದ 653 ಕಾರ್ಟನ್ಸ್ ಬೀರ್ ಮಾರಾಟವಾಗಿದೆ.

ಕಳೆದ ಬಾರಿ ಲಾಕ್ ಡೌನ್ ನಿರ್ಬಂಧ ಸಡಿಲಿಸಿದ ನಂತರ ಕೆಲ ದಿನ ಮದ್ಯ ಮಾರಾಟ ಹೆಚ್ಚಾಗಿತ್ತು. ಮೊನ್ನೆ ಜುಲೈ 13ರವರೆಗೆ 21.15 ಲಕ್ಷ ಕಾರ್ಟನ್ಸ್ ಬಾಕ್ಸ್ ಐಎಂಎಲ್ (873.58 ಕೋಟಿ ರೂಪಾಯಿ) ಮತ್ತು 5.14 ಲಕ್ಷ ಕಾರ್ಟನ್ ಬಾಕ್ಸ್ ಬೀರ್ (89.97 ಕೋಟಿ) ಮಾರಾಟವಾಗಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com