ಮೈಸೂರಿನ ಜೆಕೆ ಟೈರ್ಸ್ ಫ್ಯಾಕ್ಟರಿಯಲ್ಲಿ 107 ಜನರಿಗೆ ಕೊರೋನಾ ಸೋಂಕು ಪತ್ತೆ: ಆಸ್ಪತ್ರೆಗೆ ದಾಖಲು

ಕೊರೋನಾ ಫ್ಯಾಕ್ಟರಿ ಆಗಿದ್ದ ನಂಜನಗೂಡಿನ ಜುಬಿಲೆಂಟ್ಸ್ ಕಾರ್ಖಾನೆ ಆಗಿತ್ತು. ಆದರೀಗ ಕೊರೋನಾ ಫ್ಯಾಕ್ಟರಿಯಾಗಿ ಮೈಸೂರಿನ ಪ್ರಸಿದ್ದ ಜೆ.ಕೆ.ಟೈಯರ್ಸ್‌ ಕಾರ್ಖಾನೆ ಕಳಂಕ ತಗುಲಿದೆ. 
ಜೆಕೆ ಟೈಯರ್ಸ್
ಜೆಕೆ ಟೈಯರ್ಸ್

ಮೈಸೂರು: ಕೊರೋನಾ ಫ್ಯಾಕ್ಟರಿ ಆಗಿದ್ದ ನಂಜನಗೂಡಿನ ಜುಬಿಲೆಂಟ್ಸ್ ಕಾರ್ಖಾನೆ ಆಗಿತ್ತು. ಆದರೀಗ ಕೊರೋನಾ ಫ್ಯಾಕ್ಟರಿಯಾಗಿ ಮೈಸೂರಿನ ಪ್ರಸಿದ್ದ ಜೆ.ಕೆ.ಟೈಯರ್ಸ್‌ ಕಾರ್ಖಾನೆ ಕಳಂಕ ತಗುಲಿದೆ. 

ಕಾರ್ಖಾನೆಯಲ್ಲಿನ 107 ಮಂದಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದ್ದು ಜುಬಿಲೆಂಟ್ಸ್ ಕಾರ್ಖಾನೆಯನ್ನು ಮೀರಿಸಿದೆ. ಜೆ.ಕೆ‌ ಟೈರ್ಸ್ ಕಾರ್ಖಾನೆಯಲ್ಲಿ ಒಟ್ಟು 107ಮಂದಿ ನೌಕರರಿಗೆ ಸೋಂಕು ದೃಢಪಟ್ಟಿದೆ. 

ಮೊನ್ನೆಯಷ್ಟೇ 40ಕ್ಕೂ ಹೆಚ್ಚು ಕಾರ್ಮಿಕರಿಗೆ ಕೊರೋನಾ ಕಾಣಿಸಿಕೊಂಡಿದ್ದರೂ ವಿಚಾರ ಮುಚ್ಚಿಟ್ಟಿ ದ್ದರು. ಜೊತೆಗೆ ಕಾರ್ಖಾನೆಯ ಆಡಳಿತ ಮಂಡಳಿ ಕಾರ್ಖಾನೆಯನ್ನು ಸೀಲ್ಡೌನ್  ಮಾಡಿರಲಿಲ್ಲ. ಆದರೆ ಇಂದು ಮತ್ತೆ 60ಕ್ಕೂ ಹೆಚ್ಚು ಕಾರ್ಮಿಕರಿಗೆ ಸೋಂಕು ದೃಢವಾಗಿರೋದು ಕಾರ್ಖಾನೆಯ ಸಿಬ್ಬಂದಿಗಳಿಗೆ ಮಾಹಿತಿ ಬಂದಿದೆ.

ಸಾಮೂಹಿಕ ಕೋವಿಡ್ ಪರೀಕ್ಷೆ ಸಂದರ್ಭದಲ್ಲಿ 107 ಮಂದಿಗೆ ಸೋಂಕು ಇರೋದು ತಿಳಿದು ಬಂದಿದ್ದು, ಜೆ.ಕೆ.ಟೈರ್ಸ್‌ನ ಇತರೆ ಮೂರು ಘಟಕದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com