ರಾಜ್ಯದ ಮೊದಲ ಪ್ಲಾಸ್ಮಾ ಬ್ಯಾಂಕ್ ಬೆಂಗಳೂರಿನಲ್ಲಿ ಆರಂಭ

ಕೋವಿಡ್-19ನ್ನು ರಾಜ್ಯದಲ್ಲಿ ತಡೆಗಟ್ಟಲು ರಾಜ್ಯ ಸರ್ಕಾರ ಕೋವಿಡ್ ಇಂಡಿಯಾ ಕ್ಯಾಂಪೈನ್ ಮತ್ತು ಹೆಚ್ ಸಿಜಿ ಆಸ್ಪತ್ರೆ ಜೊತೆ ಸೇರಿಕೊಂಡು ಮೊದಲ ಪ್ಲಾಸ್ಮಾ ಬ್ಯಾಂಕ್ ನ್ನು ಬೆಂಗಳೂರಿನಲ್ಲಿ ಆರಂಭಿಸಿದೆ.
ಕೋವಿಡ್-19 ಕರ್ತವ್ಯದಲ್ಲಿರುವ ಆಂಬ್ಯುಲೆನ್ಸ್ ಸಿಬ್ಬಂದಿ
ಕೋವಿಡ್-19 ಕರ್ತವ್ಯದಲ್ಲಿರುವ ಆಂಬ್ಯುಲೆನ್ಸ್ ಸಿಬ್ಬಂದಿ

ಬೆಂಗಳೂರು: ಕೋವಿಡ್-19ನ್ನು ರಾಜ್ಯದಲ್ಲಿ ತಡೆಗಟ್ಟಲು ರಾಜ್ಯ ಸರ್ಕಾರ ಕೋವಿಡ್ ಇಂಡಿಯಾ ಕ್ಯಾಂಪೈನ್ ಮತ್ತು ಹೆಚ್ ಸಿಜಿ ಆಸ್ಪತ್ರೆ ಜೊತೆ ಸೇರಿಕೊಂಡು ಮೊದಲ ಪ್ಲಾಸ್ಮಾ ಬ್ಯಾಂಕ್ ನ್ನು ಬೆಂಗಳೂರಿನಲ್ಲಿ ಆರಂಭಿಸಿದೆ.

ಉಪ ಮುಖ್ಯಮಂತ್ರಿ ಡಾ ಸಿ ಎನ್ ಅಶ್ವಥ ನಾರಾಯಣ ಮತ್ತು ಸಂಸದ ತೇಜಸ್ವಿ ಸೂರ್ಯ ಹೆಚ್ ಸಿಜಿ ಆಸ್ಪತ್ರೆಯಲ್ಲಿ ನಿನ್ನೆ ಪ್ಲಾಸ್ಮಾ ಬ್ಯಾಂಕನ್ನು ಉದ್ಘಾಟಿಸಿದರು.

ಹೆಚ್ ಸಿಜಿ ಗ್ಲೋಬಲ್ ಆಸ್ಪತ್ರೆಯ ಮುಖ್ಯಸ್ಥ ಮತ್ತು ನಿರ್ದೇಶಕ ಡಾ ವಿಶಾಲ್ ರಾವ್, ಕೊರೋನಾ ವೈರಸ್ ವಿರುದ್ಧ ನಾವು ಹೋರಾಡಬೇಕಿದೆ. ಪ್ರಾಯೋಗಿಕ ಪರೀಕ್ಷೆಯಲ್ಲಿ ಪ್ಲಾಸ್ಮಾ ಥೆರಪಿ ಉತ್ತಮ ಫಲಿತಾಂಶ ನೀಡಿದೆ. ಗಂಭೀರ ಪರಿಸ್ಥಿತಿಯಲ್ಲಿರುವ ಕೋವಿಡ್ -19 ರೋಗಿಗಳಿಗೆ ಉತ್ತಮವಾಗಿದೆ. ಕೊರೋನಾದಿಂದ ಗುಣಮುಖ ಹೊಂದಿದ ವ್ಯಕ್ತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬಂದು ಪ್ಲಾಸ್ಮಾ ನೀಡುವಂತೆ ಮನವಿ ಮಾಡಿಕೊಂಡರು.

ಇದುವರೆಗೆ 10 ಮಂದಿ ಮಾತ್ರ ಪ್ಲಾಸ್ಮಾ ನೀಡುವುದಾಗಿ ಮುಂದೆ ಬಂದಿದ್ದಾರೆ. ಅದನ್ನು ಗಂಭೀರ ಸ್ಥಿತಿಯಲ್ಲಿರುವ ಕೋವಿಡ್-19 ರೋಗಿಗಳಿಗೆ ನೀಡಲಾಗುವುದು. ರೋಗಿಗಳು ಆನ್ ಲೈನ್ ನಲ್ಲಿ ಪ್ಲಾಸ್ಮಾಗೆ ಬೇಡಿಕೆ ಇಡಲು ಕೆಲ ದಿನಗಳ ಹಿಂದೆ ಆನ್ ಲೈನ್ ದಾಖಲಾತಿ ಕೂಡ ಆರಂಭಗೊಂಡಿತ್ತು. ಇದುವರೆಗೆ ಪ್ಲಾಸ್ಮಾ ಪಡೆದುಕೊಂಡ 8 ರೋಗಿಗಳಲ್ಲಿ ಐವರು ಗುಣಮುಖರಾಗಿದ್ದಾರೆ. ಮೃತಪಟ್ಟ ಮೂವರ ಪರಿಸ್ಥಿತಿ ಗಂಭೀರವಾಗಿತ್ತು. ದೇಶದಲ್ಲಿ ಸದ್ಯ ನಾಲ್ಕರಿಂದ 5 ಪ್ಲಾಸ್ಮಾ ಬ್ಯಾಂಕ್ ಗಳಿದ್ದು ಮೊದಲ ಬಾರಿಗೆ ದೆಹಲಿಯಲ್ಲಿ ಆರಂಭವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com