ಅಗ್ರಹಾರ ಕೃಷ್ಣಮೂರ್ತಿ ವಿರುದ್ಧದ ಮೇಲ್ಮನವಿ ಹಿಂಪಡೆಯಲು ಸಾಹಿತಿಗಳು, ಹೋರಾಟಗಾರರ ಒತ್ತಾಯ 

ಅಗ್ರಹಾರ ಕೃಷ್ಣಮೂರ್ತಿ ಅವರ ವಿರುದ್ಧ ಸಲ್ಲಿಸಿರುವ ಮೇಲ್ಮನವಿ ಹಿಂಪಡೆದು ಅವರಿಗೆ ಸಲ್ಲಬೇಕಾದ ನಿವೃತ್ತಿ ಸೌಲಭ್ಯಗಳನ್ನು ಕೊಡಲೇ ನೀಡಬೇಕು ಎಂದು ಒತ್ತಾಯಿಸಿ ಕನ್ನಡದ ಹಿರಿಯ ಸಾಹಿತಿಗಳು, ಹೋರಾಟಗಾರರು ಮತ್ತು ಚಿಂತಕರು ಕೇಂದ್ರ ಸಾಹಿತ್ಯ ಅಕಾಡಮಿ ಅಧ್ಯಕ್ಷ ಚಂದ್ರಶೇಖರ್ ಕಂಬಾರ ಅವರಿಗೆ ಪತ್ರ ಬರೆದಿದ್ದಾರೆ.

Published: 31st July 2020 12:31 PM  |   Last Updated: 31st July 2020 01:09 PM   |  A+A-


agrahara krishnamurthy

ಅಗ್ರಹಾರ ಕೃಷ್ಣಮೂರ್ತಿ

Posted By : Shilpa D
Source : UNI

ಬೆಂಗಳೂರು: ಅಗ್ರಹಾರ ಕೃಷ್ಣಮೂರ್ತಿ ಅವರ ವಿರುದ್ಧ ಸಲ್ಲಿಸಿರುವ ಮೇಲ್ಮನವಿ ಹಿಂಪಡೆದು ಅವರಿಗೆ ಸಲ್ಲಬೇಕಾದ ನಿವೃತ್ತಿ ಸೌಲಭ್ಯಗಳನ್ನು ಕೊಡಲೇ ನೀಡಬೇಕು ಎಂದು ಒತ್ತಾಯಿಸಿ ಕನ್ನಡದ ಹಿರಿಯ ಸಾಹಿತಿಗಳು, ಹೋರಾಟಗಾರರು ಮತ್ತು ಚಿಂತಕರು ಕೇಂದ್ರ ಸಾಹಿತ್ಯ ಅಕಾಡಮಿ ಅಧ್ಯಕ್ಷ ಚಂದ್ರಶೇಖರ್ ಕಂಬಾರ ಅವರಿಗೆ ಪತ್ರ ಬರೆದಿದ್ದಾರೆ.

ಕನ್ನಡದ ಸಾಹಿತಿ ಚಿಂತಕ ಕೇಂದ್ರ ಸಾಹಿತ್ಯ ಅಕಾಡಮಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅಗ್ರಹಾರ ಕೃಷ್ಣಮೂರ್ತಿ ಅವರು ಎಂಟು ವರ್ಷಗಳ ಹಿಂದೆ ಸೇವೆಯಿಂದ ನಿವೃತ್ತರಾದರು. ಈ ಸಂದರ್ಭದಲ್ಲಿ ಅಕಾಡಮಿಯು ಅವರ ಮೇಲೆ ಕೆಲವು ಆರೋಪಗಳನ್ನು ಹೊರಿಸಿ ನಿವೃತ್ತಿ ಸೌಲಭ್ಯಗಳನ್ನು ತಡೆಹಿಡಿದಿತ್ತು. ಕೃಷ್ಣಮೂರ್ತಿ ಅವರು ಅಕಾಡೆಮಿಯ ಆರೋಪಗಳನ್ನು ಪ್ರಶ್ನಿಸಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. 

ಸುದೀರ್ಘ ನ್ಯಾಯಾಂಗ ಹೋರಾಟದಲ್ಲಿ ಅಗ್ರಹಾರ ಕೃಷ್ಣಮೂರ್ತಿ ಅವರಿಗೆ ನ್ಯಾಯ ಸಿಕ್ಕಿದೆ. ಉಚ್ಚ ನ್ಯಾಯಾಲಯವು ಕೃಷ್ಣಮೂರ್ತಿ ಅವರ ಮೇಲಿದ್ದ ಆರೋಪಗಳನ್ನು ತಳ್ಳಿಹಾಕಿದೆ. ಇದರಿಂದ ಅಗ್ರಹಾರ ಕೃಷ್ಣಮೂರ್ತಿ ಅವರು ದೋಷಮುಕ್ತರಾಗಿದ್ದಾರೆ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

ಕೃಷ್ಣಮೂರ್ತಿ ಅವರು ತಮ್ಮ ಮೇಲೆ ಹೊರಿಸಲ್ಪಟ್ಟ ಆರೋಪಗಳ ವಿಚಾರವಾಗಿ ಏಳು ವರ್ಷಗಳ ಕಾಲ ಮಾನಸಿಕ ನೋವು ಅನುಭವಿಸಿದ್ದರು. ಈ ಸಂಬಂಧ ಅವರ ಆರೋಗ್ಯ ಕೆಟ್ಟು ದೈಹಿಕವಾಗಿ ಜರ್ಜರಿತರಾದರು. ನಿವೃತ್ತಿಯ ನಂತರದ ಸೌಲಭ್ಯಗಳು ಬಾರದೆ ಇದ್ದುದರಿಂದ ಆರ್ಥಿಕವಾಗಿಯೂ ಸಂಕಷ್ಟಕ್ಕೆ ಸಿಲುಕಿದ್ದರು. ಸಾಹಿತ್ಯ ಅಕಾಡಮಿಯ ಉನ್ನತ ಹುದ್ದೆಯಲ್ಲಿದ್ದ ಅಗ್ರಹಾರ ಕೃಷ್ಣಮೂರ್ತಿ ಅವರ ಮೇಲಿದ್ದ ಆರೋಪಗಳ ಕಾರಣ ನಿವೃತ್ತಿಯ ನಂತರ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಸ್ವಾಯತ್ತ ಸಂಸ್ಥೆಗಳಲ್ಲಿ ತಮ್ಮ ಸೇವೆ ಮುಂದುವರಿಸಬಹುದಾದ ಬಹುದೊಡ್ಡ ಅವಕಾಶಗಳಿಂದಲೂ ವಂಚಿತರಾದರು. ಮಾನಸಿಕವಾಗಿ, ದೈಹಿಕವಾಗಿ ಜರ್ಜರಿತರಾದರು.

ನಿವೃತ್ತಿಯ ನಂತರದ ಸೌಲಭ್ಯಗಳು ಬಾರದೆ ಇದ್ದುದರಿಂದ ಆರ್ಥಿಕವಾಗಿಯೂ ಸಂಕಷ್ಟಕ್ಕೆ ಸಿಲುಕಿದ್ದರು. ಸಾಹಿತ್ಯ ಅಕಾಡಮಿಯ ಉನ್ನತ ಹುದ್ದೆಯಲ್ಲಿದ್ದ ಅಗ್ರಹಾರ ಕೃಷ್ಣಮೂರ್ತಿ ಅವರ ಮೇಲಿದ್ದ ಆರೋಪಗಳ ಕಾರಣ ನಿವೃತ್ತಿಯ ನಂತರ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಸ್ವಾಯತ್ತ ಸಂಸ್ಥೆಗಳಲ್ಲಿ ತಮ್ಮ ಸೇವೆ ಮುಂದುವರಿಸಬಹುದಾದ ಬಹುದೊಡ್ಡ ಅವಕಾಶಗಳಿಂದಲೂ ವಂಚಿತರಾದರು. ಮಾನಸಿಕವಾಗಿ, ದೈಹಿಕವಾಗಿ ಆರ್ಥಿಕವಾಗಿ ಇಷ್ಟೆಲ್ಲಾ ನೋವುಂಡ ಅಗ್ರಹಾರ ಅವರಿಗೆ ಹೈಕೋರ್ಟ್‌ ನೀಡಿದ ತೀರ್ಪಿನಿಂದ ಒದಗಿದ ನ್ಯಾಯವೂ ಅವರ ಪಾಲಿಗೆ ಇಲ್ಲವಾಯಿತು ಎಂದು ಅವರು ಪತ್ರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಹೈಕೋರ್ಟ್‌ ತೀರ್ಪಿನಿಂದ ಕೇಂದ್ರ ಸಾಹಿತ್ಯ ಅಕಾಡಮಿಯು ಅವರ ನಿವೃತ್ತಿ ಸೌಲಭ್ಯಗಳನ್ನು ನೀಡದೆ ಮತ್ತೆ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತು. ಅದರಿಂದ ಘಾಸಿಕೊಂಡ ಕೃಷ್ಣಮೂರ್ತಿಯವರಿಗೆ ಆರೋಗ್ಯದಲ್ಲಿ ತೀವ್ರ  ಏರುಪೇರಾದ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಕನ್ನಡ ಸಾರಸ್ವತ ಲೋಕದ ಚಿಂತಕರಲ್ಲಿ ಒಬ್ಬರಾದ ಕೃಷ್ಣಮೂರ್ತಿ ಅವರ ವಿಶ್ರಾಂತ ಬದುಕಿನಲ್ಲಿ ಇಂತಹ ನೋವುಣ್ಣುವ ಪರಿಸ್ಥಿತಿ ಅವರ ಪಾಲಿಗೆ ಬಂದಿರುವುದು ನಮಗೆಲ್ಲಾ ಅತ್ಯಂತ ಖೇದ ಮತ್ತು ದುಃಖದ ವಿಷಯವಾಗಿದೆ ಎಂದು ಸಾಹಿತಿಗಳು ಪತ್ರದಲ್ಲಿ ಹೇಳಿದ್ದಾರೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ನಾಡಿನ ಹಿರಿಯ ಕನ್ನಡಿಗರೂ ಆದ ಡಾ.ಚಂದ್ರಶೇಖರ್ ಕಂಬಾರ ಅವರು ಕೇಂದ್ರ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿರುವ ಈ ಸಂದರ್ಭದಲ್ಲಿ ಕನ್ನಡಗಿರೇ ಆದ ಅಗ್ರಹಾರ ಕೃಷ್ಣಮೂರ್ತಿ ಅವರಿಗೆ ಸಿಕ್ಕ ನ್ಯಾಯವನ್ನು ಅಕಾಡಿಮಿ ಮರು ಪ್ರಶ್ನಿಸುವ ಸನ್ನಿವೇಶ ಬರಬಾರದಿತ್ತು. ಆದರೂ ಬಂದಿದೆ. ಇದೀಗ ಕಂಬಾರರು ಹಾಗೂ ಅವರ ಸದಸ್ಯ ವರ್ಗ ಮೇಲ್ಮನವಿ ಸಲ್ಲಿಸಿರುವ ವಿಷಯದ ಬಗ್ಗೆ ಮಾನವೀಯ ಹಿನ್ನೆಲೆಯಲ್ಲಿ ಸತ್ಯ ಸಂಗತಿಗಳ ಮುನ್ನೆಲೆಯಲ್ಲಿ ಈ ಮೇಲ್ಮನವಿಯನ್ನು ಹಿಂಪಡೆದು ಅಗ್ರಹಾರ ಕೃಷ್ಣಮೂರ್ತಿ ಅವರಿಗೆ ಸಲ್ಲಬೇಕಾದ ಎಲ್ಲಾ ಸೌಲಭ್ಯಗಳನ್ನು ಕೊಡಬೇಕು ಎಂದು ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ, ಕೆ.ಮರುಳಸಿದ್ದಪ್ಪ,ಡಾ.ಎಲ್. ಹನುಮಂತಯ್ಯ, ಡಾ.ವಿಜಯಮ್ಮ, ಎಚ್.ಎಚ್.ಶಿವಪ್ರಕಾಶ್, ಕಾಳೇಗೌಡ ನಾಗಾವಾರ, ಡಾ.ರಾಜೇಂದ್ರ ಚನ್ನಿ ಸೇರಿದಂತೆಹ ಹಲವು ಗಣ್ಯರು ಒತ್ತಾಯಿಸಿದ್ದಾರೆ.

ಪತ್ರಕ್ಕೆ ಇನ್ನೂ ಹಲವು ಸಾಹಿತಿಗಳು, ಕವಿಗಳು ಕೂಡ ಸಹಿ ಹಾಕಿದ್ದಾರೆ.

Stay up to date on all the latest ರಾಜ್ಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp