ರಾಜ್ಯದ ನಾಲ್ಕು ಪಾರಂಪರಿಕ ನಗರಗಳನ್ನು ಸ್ಮಾರ್ಟ್ ಸಿಟಿ ಅಡಿ ತರಲು ಪ್ರಸ್ತಾವನೆ

ರಾಜ್ಯದ ನಾಲ್ಕು ಪ್ರಸಿದ್ದ ನಗರಗಳನ್ನು ಸ್ಮಾರ್ಟ್ ಸಿಟಿ ಯೋಜನೆಗೆ ಸೇರ್ಪಡೆ ಮಾಡಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಸಚಿವ ಭೈರತಿ ಬಸವರಾಜ್ ಅವರು ತಿಳಿಸಿದ್ದಾರೆ.

Published: 01st June 2020 09:10 AM  |   Last Updated: 01st June 2020 09:10 AM   |  A+A-


Mysuru palace

ಮೈಸೂರು ಅರಮನೆ

Posted By : Shilpa D
Source : The New Indian Express

ಬೆಂಗಳೂರು: ರಾಜ್ಯದ ನಾಲ್ಕು ಪ್ರಸಿದ್ದ ನಗರಗಳನ್ನು ಸ್ಮಾರ್ಟ್ ಸಿಟಿ ಯೋಜನೆಗೆ ಸೇರ್ಪಡೆ ಮಾಡಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಸಚಿವ ಭೈರತಿ ಬಸವರಾಜ್ ಅವರು ತಿಳಿಸಿದ್ದಾರೆ.

ಕಲಬುರಗಿ, ವಿಜಯಪುರ, ಮೈಸೂರು, ಬಳ್ಳಾರಿ ಸ್ಮಾರ್ಟ್ ಸಿಟಿ ಆಗಬೇಕು ಎಂದು ಹೇಳಿರುವ ಅವರು, ಈ ಹಿನ್ನೆಲೆಯಲ್ಲಿ ಶೀಘ್ರವೇ  ದೆಹಲಿಗೆ ತೆರಳಿ ಚರ್ಚಿಸುವುದಾಗಿ ತಿಳಿಸಿದ್ದಾರೆ.

ಒಡೆಯರ ಆಡಳಿತದಿಂದ ಮೈಸೂರು, ಗೋಲ್ ಗುಂಬಜ್ ನಿಂದ ವಿಜಯಪುರ,ಬಹಮನಿ ಸುಲ್ತಾನರ ಆಡಳಿತದಿಂದ ಕಲಬುರಗಿ ಮತ್ತು ವಿಜಯನಗರ ಸಾಮ್ರಾಜ್ಯರ ಆಡಳಿತದಿಂದ ಬಳ್ಳಾರಿ ಜಿಲ್ಲೆಗಳು ಶ್ರೀಮಂತ ಇತಿಹಾಸ ಹೊಂದಿವೆ. ಜೊತೆ ಈ ಜಿಲ್ಲೆಗಳಲ್ಲಿ ಶತಮಾನಗಳಿಂದಲೂ ಐತಿಹಾಸಿಕ ಸ್ಮಾರಕಗಳಿವೆ.

ಬೆಂಗಳೂರು, ತುಮಕೂರು, ಮಂಗಳೂರು, ಶಿವಮೊಗ್ಗ, ಬೆಳಗಾವಿ, ದಾವಣಗೆರೆ, ಹಾಗೂ ಹುಬ್ಬಳ್ಳಿ-ದಾರವಾಡ ನಗರಗಳು ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಹೊಂದಿವೆ, ನಮ್ಮ ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಒಪ್ಪಿದರೇ ಬೆಂಗಳೂರಿನ ನಂತರದ ರಾಜ್ಯದ ಎಲ್ಲಾ ಪ್ರಮುಖ 10 ನಗರಗಳು ರಾಷ್ಟ್ರೀಯ ಯೋಜನೆಯಡಿ ಬರಲಿದ್ದು, ಇದು ನಗರ ಸಮೂಹಗಳನ್ನು "ಬಳಕೆದಾರ ಸ್ನೇಹಿ" ವಾಸಸ್ಥಳಗಳಾಗಿ ಪರಿವರ್ತಿಸುವ ಗುರಿಯನ್ನು ಹೊಂದಿರುವುದಾಗಿ ಹೇಳಿದ್ದಾರೆ.

ಈ ಸಂಬಂಧ ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದಿದ್ದಾರೆ. ನಗರಳನ್ನು ಮತ್ತಷ್ಟು ಸುಂದರವಾಗಿಸುವ ಕನಸು ಹೊತ್ತಿದ್ದಾರೆ.

ಈ ನಗರಗಳ ಮೂಲಭೂತ ಸೌಕರ್ಯಗಳನ್ನು ಮೇಲ್ದರ್ಜೇಗೇರಿಸಿ ಬಳಕೆದಾರರ ಸ್ನೇಹಿ ಮಾಡಲಾಗುವುದು, ರಸ್ತೆ, ಫುಟ್ ಪಾತ್, ಸಾರ್ವಜನಿಕ ಸಾರಿಗೆ, ಪಾರ್ಕ್, ಬೀದಿ ದೀಪ ಸೇರಿದಂತೆ ನಗರದ  ಭೂ ದೃಶ್ಯವನ್ನು ಸುಧಾರಿಸಲಾಗುವುದು ಎಂದು ತಿಳಿಸಿದ್ದಾರೆ.

ಸಮಗ್ರ ಯೋಜನೆ ಹೊಂದಬೇಕೆಂಬ ಆಲೋಚನೆ ಇದ್ದು, ಕೆನಡಾದ  ವ್ಯಾನ್ ಕೋವರ್ ನಗರ ಉತ್ತಮ ಉದಾಹರಣೆಯಾಗಿದೆ. ಇಡೀ ನಗರವನ್ನೇ ಉತ್ತಮ ಪ್ಲಾನ್ ನೊಂದಿಗೆ ಪುನರ್ ಅಭಿವೃದ್ಧಿಗೊಳಿಸಲಾಗಿದೆ ಎಂದು ಮಾಜಿ ನಗರಾಭಿವೃದ್ಧಿ ಕಾರ್ಯದರ್ಶಿ ಅಂಜುಮ್ ಫರ್ವೇಜ್ ಹೇಳಿದ್ದಾರೆ.

ನಗರವು ಅಭಿವೃದ್ಧಿ ಹೊಂದಿದೆಯೆಂದು ಮತ್ತು ಪ್ರಮುಖ ಐತಿಹಾಸಿಕ ಸ್ಮಾರಕಗಳನ್ನು ಈ ಯೋಜನೆಯು ಖಚಿತಪಡಿಸುತ್ತದೆ, ಅವುಗಳಲ್ಲಿ ಕೆಲವು ಐದು-ಆರು ಶತಮಾನಗಳ ಹಿಂದಿನವುಗಳಾಗಿವೆ, ಅವುಗಳು ಇಂದಿಗೂ ಆಕರ್ಷಣೆಯ ಕೇಂದ್ರ ಬಿಂದುವಾಗಿವೆ. 

Stay up to date on all the latest ರಾಜ್ಯ news
Poll
Parliament_House1

ಕೋವಿಡ್-19 ಹರಡುವಿಕೆ ಕಾರಣ ಸಂಸತ್ತಿನ ಮುಂಗಾರು ಅಧಿವೇಶನ ಅವಧಿಯನ್ನು ಅರ್ಧಕ್ಕೆ ಮೊಟಕುಗೊಳಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp