ಸುಪ್ರೀಂ ಕೋರ್ಟ್ ಬಗ್ಗೆ ಅಪರೂಪದ ಮಾಹಿತಿಯನ್ನೊಳಗೊಂಡ ಪುಸ್ತಕ ಬರೆದ 21 ವರ್ಷದ ಕಾನೂನು ವಿದ್ಯಾರ್ಥಿ 

ಸುಪ್ರೀಂ ಕೋರ್ಟ್ ನ ಕಾನೂನು ಚಟುವಟಿಕೆಗಳು, ಮೂಲಸೌಕರ್ಯ, ಪ್ರಾಯೋಗಿಕ ಪ್ರಕ್ರಿಯೆಗಳ ಕುರಿತು ಅಲಯನ್ಸ್ ಸ್ಕೂಲ್ ಆಫ್ ಲಾ ನಲ್ಲಿ ಬಿಬಿಎ.ಎಲ್ಎಲ್ ಬಿ 4 ನೇ ಸೆಮಿಸ್ಟರ್ ಅಧ್ಯಯನ ಮಾಡುತ್ತಿರುವ ಗಾಲವ ಗೌಡ ಪುಸ್ತಕ ಬರೆದಿದ್ದಾರೆ. 
ಗಾಲವ ಗೌಡ
ಗಾಲವ ಗೌಡ

ಸುಪ್ರೀಂ ಕೋರ್ಟ್ ನ ಕಾನೂನು ಚಟುವಟಿಕೆಗಳು, ಮೂಲಸೌಕರ್ಯ, ಪ್ರಾಯೋಗಿಕ ಪ್ರಕ್ರಿಯೆಗಳ ಕುರಿತು ಅಲಯನ್ಸ್ ಸ್ಕೂಲ್ ಆಫ್ ಲಾ ನಲ್ಲಿ ಬಿಬಿಎ.ಎಲ್ಎಲ್ ಬಿ 4 ನೇ ಸೆಮಿಸ್ಟರ್ ಅಧ್ಯಯನ ಮಾಡುತ್ತಿರುವ ಗಾಲವ ಗೌಡ ಪುಸ್ತಕ ಬರೆದಿದ್ದಾರೆ. 

ಕ್ರಾಲ್ ಟುವರ್ಡ್ಸ್ ಸುಪ್ರೀಮ್ ಕೋರ್ಟ್ ಆಫ್ ಇಂಡಿಯಾ ಎಂಬ ಹೆಸರಿನಲ್ಲಿ ಈ ಪುಸ್ತಕ ಹೊರಬಂದಿದೆ. 

ಇಂಟರ್ನ್ಶಿಪ್ ಮುಕ್ತಾಯಗೊಳಿಸಿದ ಬಳಿಕ ಗಾಲವ್ ಗೌಡ 112 ಪುಟಗಳಷ್ಟು ಗಾತ್ರದ ಈ ಪುಸ್ತಕವನ್ನು ಲಾಕ್ ಡೌನ್ ಅವಧಿಯಲ್ಲಿ ಬರೆದು ಮುಗಿಸಿದ್ದಾರೆ. 

ಸುಪ್ರೀಂ ಕೋರ್ಟ್ ನ ಸಂಪನ್ಮೂಲ, ಮುಖ್ಯ ಫೋಟೋಗ್ರಾಫ್ ಗಳ ಬಗ್ಗೆ ಸಾರ್ವಜನಿಕರಿಗೆ ಹಾಗು ಕಾನೂನು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವುದು ಈ ಪುಸ್ತಕದ ಉದ್ದೇಶವಾಗಿದೆ. 

ಸುಪ್ರೀಂ ಕೋರ್ಟ್ ನ ವ್ಯಾಪ್ತಿ, ಅಧಿಕಾರ, ಕಾರ್ಯನಿರ್ವಹಣೆ, ಆರ್ಟಿಕಲ್ ಗಳ ಬಗ್ಗೆ ತಿಳಿಸುವುದಕ್ಕಾಗಿ ಹಲವಾರು ಪುಸ್ತಕಗಳು ಲಭ್ಯವಿದೆ ಆದರೆ ಮೂಲಸೌಕರ್ಯ, ಇತಿಹಾಸ, ದಿನ ನಿತ್ಯದ ಪ್ರಕ್ರಿಯೆಗಳು ಹೇಗೆ ನಡೆಯುತ್ತದೆ ಎಂಬ ಬಗ್ಗೆ ಮಾಹಿತಿ ನೀಡುವ ಯಾವುದೇ ಪುಸ್ತಕಗಳು ಲಭ್ಯವಿಲ್ಲದೆ ಇರುವುದನ್ನು ಮನಗಂಡ ಗಾಲವ್ ಗೌಡ ಈ ಪುಸ್ತಕ ಬರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com