ನೀರು ನಾಯಿ
ನೀರು ನಾಯಿ

ಲಾಕ್ ಡೌನ್ ಎಫೆಕ್ಟ್: ಹಂಪಿ ಬಳಿ ತುಂಗಭದ್ರ ನದಿಯಲ್ಲಿ ನೀರುನಾಯಿಗಳ ಸ್ವಚ್ಚಂದ ವಿಹಾರ!

ವಿಶ್ವ ವಿಖ್ಯಾತ ಹಂಪಿ ಬಳಿಯ ತುಂಗಭದ್ರ ನದಿಯಲ್ಲಿ ಈ ಹಿಂದೆ ಎಲ್ಲೋ ಒಂದು ಕಡೆ ಭಯದಲ್ಲಿ ಅವಿತುಕೊಳ್ಳುತ್ತಿದ್ದ ನೀರುನಾಯಿಗಳು ಹಿಂಡು ಈಗ ಸ್ವಚ್ಚಂದವಾಗಿ ಸಂಚರಿಸುವುದಕ್ಕೆ ಆರಂಭಿಸಿವೆ.

ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿ ಬಳಿಯ ತುಂಗಭದ್ರ ನದಿಯಲ್ಲಿ ಈ ಹಿಂದೆ ಎಲ್ಲೋ ಒಂದು ಕಡೆ ಭಯದಲ್ಲಿ ಅವಿತುಕೊಳ್ಳುತ್ತಿದ್ದ ನೀರುನಾಯಿಗಳು ಹಿಂಡು ಈಗ ಸ್ವಚ್ಚಂದವಾಗಿ ಸಂಚರಿಸುವುದಕ್ಕೆ ಆರಂಭಿಸಿವೆ.
 
ಕಾರಣ ಕಳೆದ ಎರಡುವರೆ ತಿಂಗಳಿನಿಂದ ಕೊರೊನಾ ಹಾವಳಿ ಹಿನ್ನೆಲೆ ಪ್ರವಾಸಿಗರು ಹಂಪಿಗೆ ಬರುವುದಕ್ಕೆ ನಿಷೇದ ಹೇರಲಾಗಿದೆ, ಹಾಗಾಗಿ ಹಂಪಿಯ ಪಕ್ಕದಲ್ಲಿ ಹರಿಯುವ ತುಂಗಭದ್ರ ನದಿಯಲ್ಲಿನ ಈ ಜಲಚರಗಳಿಗೆ ಯಾವುದೇ ಕಾಟ ಇಲ್ಲದೆ ಸ್ವಚ್ಚಂದವಾಗಿ ತಮ್ಮಿಚ್ಚೆಯ ಪ್ರಕಾರ ಎಲ್ಲಿಬೇಕೆಂದರಲ್ಲಿ ಸಂಚಾರ ನಡೆಸಿವೆ.

ಇನ್ನು ನೀವೀಗ ನೋಡುತ್ತಿರುವ ದೃಶ್ಯ ಹಂಪಿಯ ಕೋದಂಡರಾಮ ದೇವಸ್ಥಾನ ಮುಂಭಾಗದಲ್ಲಿ ಹರಿಯುವ ನದಿಯಲ್ಲಿ ಕಂಡಬಂದದ್ದು. ಬೆಳಗ್ಗೆ ಆರು ಗಂಟೆಯಿಂದ ಹತ್ತು ಗಂಟೆಯ ವರೆಗೆ ಸುಮಾರು ಇಪ್ಪತ್ತು ಕಿಲೋಮಿಟರ್ ಸಂಚರಿಸುವ ನೀರುನಾಯಿಗಳು ನೀರಿನಲ್ಲಿ ಮೀನುಗಳನ್ನ ಬೇಟೆಯಾಡಿ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತವೆ.

ಅದಾದ ಬಳಿಕ ಮರಳು ಮತ್ತು ಕಲ್ಲು ಬಂಡೆಗಳ ಮೇಲೆ ಬಿಸಿಲಿಗೆ ಮೈಯೊಡ್ಡಿ ಮಲಗಿ ಮತ್ತೆ ಸಂಜೆ ನಾಲ್ಕು ಗಂಟೆಯ ನಂತರ ತಮ್ಮ ಬೇಟೆಯನ್ನ ಪ್ರಾರಂಭಿಸಿ ಹೊಟ್ಟೆ ತುಂಬಿಸಿಕೊಳ್ಳುತ್ತವೆ, ಹೀಗಿದ್ದರೂ ಮನುಷ್ಯನ ಕಣ್ಣಿಗೆ ಈ ಜಲಚರ ಪ್ರಾಣಿ ಕಾಣಸಿಗುವುದು ತುಂಬಾ ಅಪರೂಪ, ಇನ್ನು ಹೊಸಪೇಟೆ ಬಳಿಯ ತುಂಗಭದ್ರ ಜಲಾಶಯದಿಂದ ಕಂಪ್ಲಿಯ ವರೆಗೆ ಇರುವ ಸುಮಾರು ಇಪ್ಪತ್ತೈದು ಕಿಲೋಮಿಟರ್ ಪ್ರದೇಶದಲ್ಲಿ ಹರಿಯುವ ಈ ನದಿ, ವಿಶಿಷ್ಟ ಜೀವ ಸಂಕುಲಗಳ ತಾಣವಾಗಿದೆ. ನೀರುನಾಯಿ ಮತ್ತು ಮೊಸಳೆಗಳು ಈ ಭಾಗದಲ್ಲಿ ಹೆಚ್ಚಾಗಿ ವಾಸಿಸುತ್ತವೆ, ಅಲ್ಲದೆ ಹಲವು ಜಾತಿಯ ಪಕ್ಷಿ ಪ್ರಬೇದಗಳು ಇಲ್ಲಿಗೆ ಬಂದು ಸಂತಾನ ಅಭಿವ್ರದ್ದಿ ಪಡಿಸಿಕೊಳ್ಳುವುದು ಸರ್ವೇಸಾಮಾನ್ಯವಾಗಿದೆ.

ಅದರ ಜೊತೆಗೆ ವಿಶಿಷ್ಟ ಜಾತಿಯ ಆಮೆ, ಮೀನು, ಹಾವು ಮತ್ತು ಚಿರತೆ, ಕರಡಿಗಳ ಆವಾಸ ತಾಣವಾಗಿರುವ ಈ ಪ್ರದೇಶವನ್ನ ನೀರುನಾಯಿ ಸಂರಕ್ಷಿತ ಪ್ರದೇಶ ಎಂದೇ ಇಲ್ಲಿನ ಅರಣ್ಯ ಇಲಾಖೆ ಘೋಷಣೆ ಕೂಡ ಮಾಡಿದೆ. ಅದಕ್ಕೆ ಕಾರಣ ತುಂಗಭದ್ರ ನದಿಯಲ್ಲಿ ಕಾಣಸಿಗುವ ಈ ಪ್ರಾಣಿ ಬೇರೆಡೆ ಕಾಣಸಿಗುವುದಿಲ್ಲ, ಇತ್ತೀಚೆಗೆ ಈ ಪ್ರದೇಶಕ್ಕೆ ಬೇಕಾದ ಒಂದು ವಿಭಾಗವನ್ನ ಸ್ಥಾಪಿಸಿದ್ದು ಆರ್.ಎಫ್.ಓ. ಮತ್ತು ಕಾವಲಿಗೆ ಬೇಕಾದ ಕೆಲವು ಸಿಬ್ಬಂದಿಗಳ್ಳನ್ನು ಕೂಡ ನೇಮಕ ಮಾಡಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com