ನಕಲಿ ಅಂಕಪಟ್ಟಿ ಸಲ್ಲಿಸಿ ಉದ್ಯೋಗ: 11 ನೌಕರರ ವಜಾ ಆದೇಶ ಎತ್ತಿಹಿಡಿದ ಹೈಕೋರ್ಟ್

ನಕಲಿ ಅಂಕಪಟ್ಟಿ ಸಲ್ಲಿಸಿ ಬೀದರ್ ನ್ಯಾಯಾಲಯದಲ್ಲಿ ಉದ್ಯೋಗ ಪಡೆದಿದ್ದ 11 'ಡಿ’ ಗ್ರೂಪ್‌ ನೌಕರರನ್ನು ವಜಾಗೊಳಿಸಿದ್ದ ಜಿಲ್ಲಾ ಪ್ರಧಾನ ನ್ಯಾಯಾಧೀಶರ ಆದೇಶವನ್ನು ಹೈಕೋರ್ಟ್ ಬುಧವಾರ ಎತ್ತಿಹಿಡಿದಿದೆ.

Published: 10th June 2020 04:25 PM  |   Last Updated: 10th June 2020 04:25 PM   |  A+A-


High court of karnataka

ಕರ್ನಾಟಕ ಹೈಕೋರ್ಟ್

Posted By : Lingaraj Badiger
Source : UNI

ಬೆಂಗಳೂರು: ನಕಲಿ ಅಂಕಪಟ್ಟಿ ಸಲ್ಲಿಸಿ ಬೀದರ್ ನ್ಯಾಯಾಲಯದಲ್ಲಿ ಉದ್ಯೋಗ ಪಡೆದಿದ್ದ 11 'ಡಿ’ ಗ್ರೂಪ್‌ ನೌಕರರನ್ನು ವಜಾಗೊಳಿಸಿದ್ದ ಜಿಲ್ಲಾ ಪ್ರಧಾನ ನ್ಯಾಯಾಧೀಶರ ಆದೇಶವನ್ನು ಹೈಕೋರ್ಟ್ ಬುಧವಾರ ಎತ್ತಿಹಿಡಿದಿದೆ.

ವಜಾಗೊಂಡ ನೌಕರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ನರೇಂದರ್ ಹಾಗೂ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಈ ನೌಕರರು 7ನೇ ತರಗತಿಯ ನಕಲಿ ಅಂಕಪಟ್ಟಿ ನೀಡಿ ಕೆಲಸಕ್ಕೆ ಸೇರಿರುವುದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಂಕಪಟ್ಟಿ ಪರಿಶೀಲನೆ ವೇಳೆ ದೃಢಪಟ್ಟಿತ್ತು. ಇದರ ಆಧಾರದ ಮೇಲೆ ಇವರನ್ನು ವಜಾಗೊಳಿಸಲಾಗಿತ್ತು. ಈ 11 ಮಂದಿ 2011ರಲ್ಲಿ ಬೀದರ್ ನ್ಯಾಯಾಲಯದಲ್ಲಿ ಉದ್ಯೋಗ ಪಡೆದಿದ್ದರು.

Stay up to date on all the latest ರಾಜ್ಯ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp