ಲಾಕ್ ಡೌನ್ ಎಫೆಕ್ಟ್: ಶೇ.25ರಷ್ಟು ಹೊಟೇಲ್, ರೆಸ್ಟೋರೆಂಟ್ ಗಳಿಗೆ ಬಾಗಿಲು ತೆರೆಯುವ ಸೌಭಾಗ್ಯವೇ ಇಲ್ಲ!

ಕೊರೋನಾ ಲಾಕ್ ಡೌನ್ ನಂತರ ಆರ್ಥಿಕ ದುಸ್ಥಿತಿಯಿಂದ ಅನೇಕ ಹೊಟೇಲ್, ರೆಸ್ಟೋರೆಂಟ್ ಗಳಿಗೆ ಬಾಗಿಲು ಹಾಕುವ ಪರಿಸ್ಥಿತಿ ಬಂದಿದೆ. ಮೊನ್ನೆ ಸೋಮವಾರದಿಂದ ಹೊಟೇಲ್, ರೆಸ್ಟೋರೆಂಟ್ ತೆರೆಯುವಿಕೆಗೆ ಸರ್ಕಾರ ಅವಕಾಶ ನೀಡಿದರೂ ಕೂಡ ಕೆಲವರಿಗೆ ಆರ್ಥಿಕ ದುಸ್ಥಿತಿಯಿಂದ ತೆರೆಯಲು ಸಾಧ್ಯವಾಗುತ್ತಿಲ್ಲ, ಇನ್ನು ಕೆಲವು ಹೊಟೇಲ್ ಗಳನ್ನು ನವೀಕರಿಸಬೇಕೆಂದು ತೆರೆಯುತ್ತಿಲ್ಲ.
ಲಾಕ್ ಡೌನ್ ನಿಂದ ಆರ್ಥಿಕ ಸಂಕಷ್ಟಕ್ಕೀಡಾಗಿ ತೆರೆಯದೆ ಇರುವ ಒಂದು ಹೊಟೇಲ್
ಲಾಕ್ ಡೌನ್ ನಿಂದ ಆರ್ಥಿಕ ಸಂಕಷ್ಟಕ್ಕೀಡಾಗಿ ತೆರೆಯದೆ ಇರುವ ಒಂದು ಹೊಟೇಲ್

ಬೆಂಗಳೂರು: ಕೊರೋನಾ ಲಾಕ್ ಡೌನ್ ನಂತರ ಆರ್ಥಿಕ ದುಸ್ಥಿತಿಯಿಂದ ಅನೇಕ ಹೊಟೇಲ್, ರೆಸ್ಟೋರೆಂಟ್ ಗಳಿಗೆ ಬಾಗಿಲು ಹಾಕುವ ಪರಿಸ್ಥಿತಿ ಬಂದಿದೆ. ಮೊನ್ನೆ ಸೋಮವಾರದಿಂದ ಹೊಟೇಲ್, ರೆಸ್ಟೋರೆಂಟ್ ತೆರೆಯುವಿಕೆಗೆ ಸರ್ಕಾರ ಅವಕಾಶ ನೀಡಿದರೂ ಕೂಡ ಕೆಲವರಿಗೆ ಆರ್ಥಿಕ ದುಸ್ಥಿತಿಯಿಂದ ತೆರೆಯಲು ಸಾಧ್ಯವಾಗುತ್ತಿಲ್ಲ, ಇನ್ನು ಕೆಲವು ಹೊಟೇಲ್ ಗಳನ್ನು ನವೀಕರಿಸಬೇಕೆಂದು ತೆರೆಯುತ್ತಿಲ್ಲ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೊಟೇಲ್ ಸಂಘದ ಅಂಕಿಅಂಶ ಪ್ರಕಾರ, ಶೇಕಡಾ 25ರಷ್ಟು ಹೊಟೇಲ್, ರೆಸ್ಟೋರೆಂಟ್ ಗಳು ತೆರೆಯುವುದಿಲ್ಲ. ಕೋರಮಂಗಲ, ಇಂದಿರಾನಗರ, ಹೆಚ್ ಎಸ್ ಆರ್ ಲೇಔಟ್, ಔಟರ್ ರಿಂಗ್ ರೋಡ್ ನಂತಹ ಕಡೆ ಅನೇಕ ಸಾಫ್ಟ್ ವೇರ್ ಕಚೇರಿಗಳು ಮತ್ತು ಪಿಜಿ ಕೇಂದ್ರಗಳು ಇರುವಲ್ಲಿ ಸಹ ಸಣ್ಣಪುಟ್ಟ ಹೊಟೇಲ್ ಗಳು, ದರ್ಶಿನಿಗಳು ತೆರೆದಿಲ್ಲ.
ಹೊಟೇಲ್ ಸಂಘದ ಅಧ್ಯಕ್ಷ ಪಿ ಸಿ ರಾವ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿ, ಆತಿಥ್ಯ ಕ್ಷೇತ್ರ ತೀವ್ರ ಸಮಸ್ಯೆಗೀಡಾಗಿವೆ. ಶೇಕಡಾ 25ರಷ್ಟು ಹೊಟೇಲ್ ಗಳು, ರೆಸ್ಟೋರೆಂಟ್ ಗಳಲ್ಲಿ ಬಾಡಿಗೆ, ವೇತನ ನೀಡಲಾಗದೆ ಮಾಲೀಕರು ತೆರೆಯುವ ಪರಿಸ್ಥಿತಿಯಲ್ಲಿಲ್ಲ ಎನ್ನುತ್ತಾರೆ.

ಕೋರಮಂಗಲದಲ್ಲಿ ಗೃಹ ತಿನಿಸುಗಳ ಸಣ್ಣ ಹೊಟೇಲ್ ನಡೆಸುತ್ತಿರುವ ಶಾಂತಿ ಕೆ, ವ್ಯಾಪಾರವಿಲ್ಲದೆ ಮುಚ್ಚಿದ್ದರು. ಈಗ ವ್ಯಾಪಾರವಿಲ್ಲದೆ, ಅಧಿಕ ಬಾಡಿಗೆಯಿಂದಾಗಿ ನಾವು ತೆರೆಯಲು ಸಾಧ್ಯವಾಗುತ್ತಿಲ್ಲ. ನಮ್ಮ ಸಹಾಯಕರು ಕೂಡ ಊರಿಗೆ ಹೋಗಿದ್ದಾರೆ ಎಂದರು.

ಸರ್ಜಾಪುರದಲ್ಲಿ ಕೆಫೆ ನಡೆಸುತ್ತಿರುವ ಡೇವಿಡ್, ನಮ್ಮ ಕೆಫೆಗೆ ವಿದ್ಯಾರ್ಥಿಗಳು ಮತ್ತು ಯುವ ವೃತ್ತಿಪರರು ಬರುತ್ತಿದ್ದರು. ಆದರೆ ಈಗ ಅವರಿಲ್ಲದೆ ವ್ಯಾಪಾರವಿಲ್ಲ. ಮನೆಗೆ ತಿನಿಸುಗಳನ್ನು ತೆಗೆದುಕೊಂಡು ಹೋಗುವವರು ಕೂಡ ಇಲ್ಲದೆ ವ್ಯಾಪಾರವೇ ಇಲ್ಲದಾಗಿದೆ ಎಂದರು. ಇದು ಕೇವಲ ಬೆಂಗಳೂರಿನದ್ದು ಮಾತ್ರವಲ್ಲ, ಇಡೀ ರಾಜ್ಯದ ಪರಿಸ್ಥಿತಿ ಹೀಗಿದೆ.

ಇನ್ನೊಂದೆಡೆ ಕೊರೋನಾಗೆ ಮುನ್ನ ಕೈತುಂಬಾ ಸಂಪಾದಿಸುತ್ತಿದ್ದವರು ಈಗ ಸಣ್ಣಪುಟ್ಟ ತಿನಿಸಿನ ಕೇಂದ್ರಗಳನ್ನು ಆರಂಭಿಸಿ ಸ್ವಂತ ಉದ್ಯಮ ನಡೆಸಲು ಪ್ರಯತ್ನಿಸುತ್ತಿದ್ದಾರಂತೆ. ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಿಗೆ ಹೋಗಿ ಅಲ್ಲಿ ಸಣ್ಣ ಹೊಟೇಲ್ ಆರಂಭಿಸುವ ಮನಸ್ಸು ಮಾಡಿದ್ದಾರಂತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com