ವಸತಿ ಶಾಲಾ-ಕಾಲೇಜುಗಳ ಆರಂಭಕ್ಕೆ ಉತ್ಸುಕವಾಗಿರುವ ಕರ್ನಾಟಕ ಸರ್ಕಾರ: ಗೃಹ ಸಚಿವಾಲಯಕ್ಕೆ ಪತ್ರ

ಗೃಹ ಸಚಿವಾಲಯದ ಅನುಮತಿ ಸಿಕ್ಕಿದರೆ ವಸತಿ ಶಾಲೆಗಳು ಮತ್ತು ಕಾಲೇಜುಗಳನ್ನು ಮರು ಆರಂಭ ಮಾಡಲು ಸಮಾಜ ಕಲ್ಯಾಣ ಇಲಾಖೆ ಯೋಜನೆ ನಡೆಸುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಗೃಹ ಸಚಿವಾಲಯದ ಅನುಮತಿ ಸಿಕ್ಕಿದರೆ ವಸತಿ ಶಾಲೆಗಳು ಮತ್ತು ಕಾಲೇಜುಗಳನ್ನು ಮರು ಆರಂಭ ಮಾಡಲು ಸಮಾಜ ಕಲ್ಯಾಣ ಇಲಾಖೆ ಯೋಜನೆ ನಡೆಸುತ್ತಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ಪೌಷ್ಟಿಕಯುಕ್ತ ಆಹಾರಗಳನ್ನು ಮತ್ತು ವಸತಿಗಳನ್ನು ಒದಗಿಸಬಹುದು ಎಂದು ಇಲಾಖೆ ಈ ಯೋಜನೆಗೆ ಮುಂದಾಗಿದ್ದು ಬೇರೆ ಶಾಲೆಗಳು ಆರಂಭವಾಗುವ ಮುನ್ನ ಇದನ್ನು ಆರಂಭಿಸಲು ಮುಂದಾಗಿದೆ.

ವಸತಿ ಶಾಲೆಗಳೆಂದರೆ ಮನೆಯಿದ್ದಂತೆ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಬೇಕಾಗಿಲ್ಲ. ವಸತೆ ಶಾಲೆಯ ಆವರಣದೊಳಗೆ ಒಂದು ಬಾರಿ ಬಂದುಬಿಟ್ಟರೆ ಸಾಕು ನಂತರ ನಮ್ಮ ಜವಾಬ್ದಾರಿ. ಶಿಕ್ಷಕರು ಮತ್ತು ಇತರ ಸಿಬ್ಬಂದಿ ನಿತ್ಯವೂ ಹಗಲಿರುಳು ಅವರ ಜೊತೆಗಿರುತ್ತಾರೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ಸಮಾಜ ಕಲ್ಯಾಣ ಇಲಾಖೆಯಡಿ ರಾಜ್ಯದಲ್ಲಿ 819 ವಸತಿ ಶಾಲೆಗಳು ಮತ್ತು ಕಾಲೇಜುಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಇತರ ಹಿಂದುಳಿದ ವರ್ಗಗಳ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇದೆ. ಅವುಗಳಲ್ಲಿ ಮೊರಾರ್ಜಿ ದೇಸಾಯಿ ಶಾಲೆಗಳು, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ,ಅಟಲ್ ಬಿಹಾರಿ ವಾಜಪೇಯಿ, ಎಸ್.ಸಿ/ಎಸ್ ಟಿ ವರ್ಗಗಳ ಪ್ರತಿಭಾನ್ವಿತ ಹೆಣ್ಣು ಮಕ್ಕಳು, ಬಿ ಆರ್ ಅಂಬೇಡ್ಕರ್, ಇಂದಿರಾ ಗಾಂಧಿ ವಸತಿ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿವೆ. ಈ ಎಲ್ಲಾ ಶಾಲಾ-ಕಾಲೇಜುಗಳು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಸೊಸೈಟಿ ಅಡಿಯಲ್ಲಿ ಬರುತ್ತದೆ.

ಈ ಶಾಲಾ ಕಾಲೇಜುಗಳಲ್ಲಿ ದಾಖಲಾಗುವ ಬಹುತೇಕ ಮಕ್ಕಳು ಆರ್ಥಿಕವಾಗಿ ದುರ್ಬಲರು. ವಸತಿ ಶಾಲೆಯಲ್ಲಿದ್ದರೆ ಅವರಿಗೆ ಸಂಪೂರ್ಣವಾಗಿ ಉಚಿತ ಆಹಾರ ಮತ್ತು ವಸತಿ ಸಿಗುತ್ತದೆ. ಅವರ ಮನೆಯಲ್ಲಿ ಅವರಿಗೆ ಈ ಸೌಕರ್ಯ ಸಿಗುವುದಿಲ್ಲ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಗೃಹ ಸಚಿವಾಲಯಕ್ಕೆ ಮನವಿ ಮಾಡಿ ಶಾಲಾ ಕಾಲೇಜುಗಳನ್ನು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಪುನರಾರಂಭಿಸಲು ಕೇಳುತ್ತೇವೆ. ಗುಣಮಟ್ಟ ಕಾರ್ಯವಿಧಾನ ಶಿಷ್ಟಾಚಾರಗಳನ್ನು ಪಾಲಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com