ಮೆಟ್ರೊ ಟಿಬಿಎಂ ಕಾಮಗಾರಿಗೆ ಚೀನಾದ ತಜ್ಞ ಎಂಜಿನಿಯರ್ ಗಳೇ ಬೇಕು, ಅಲ್ಲಿಯವರೆಗೆ ಕೆಲಸ ಸ್ಥಗಿತ!

ಕೊರೋನಾ ವೈರಸ್ ನಿಂದಾಗಿ ಅಂತಾರಾಷ್ಟ್ರೀಯ ವಿಮಾನ ಹಾರಾಟ ನಿಲ್ಲಿಸಿರುವುದು ಮೆಟ್ರೊ ಎರಡನೇ ಹಂತದ ಕಾಮಗಾರಿಯ ಸುರಂಗ ಮಾರ್ಗದ ಕೆಲಸಕ್ಕೆ ಅಡ್ಡಿಯುಂಟಾಗಿದೆ. 
ಶಿವಾಜಿನಗರ ಮೆಟ್ರೊ ಸ್ಟೇಷನ್ ಕೇಂದ್ರದಲ್ಲಿ ಸುರಂಗ ಕೊರೆಯುವ ಯಂತ್ರ
ಶಿವಾಜಿನಗರ ಮೆಟ್ರೊ ಸ್ಟೇಷನ್ ಕೇಂದ್ರದಲ್ಲಿ ಸುರಂಗ ಕೊರೆಯುವ ಯಂತ್ರ

ಬೆಂಗಳೂರು: ಕೊರೋನಾ ವೈರಸ್ ನಿಂದಾಗಿ ಅಂತಾರಾಷ್ಟ್ರೀಯ ವಿಮಾನ ಹಾರಾಟ ನಿಲ್ಲಿಸಿರುವುದು ಮೆಟ್ರೊ ಎರಡನೇ ಹಂತದ ಕಾಮಗಾರಿಯ ಸುರಂಗ ಮಾರ್ಗದ ಕೆಲಸಕ್ಕೆ ಅಡ್ಡಿಯುಂಟಾಗಿದೆ. ಮಣ್ಣಿನೊಳಗೆ 65 ಅಡಿ ಆಳದಲ್ಲಿ ಸುರಂಗ ಮಾರ್ಗ ಕೊರೆಯುವುದು ಅತ್ಯಂತ ಕಠಿಣ ಕೆಲಸವಾಗಿದ್ದು ನಾಲ್ಕು ಸುರಂಗ ಕೊರೆಯುವ ಯಂತ್ರಕ್ಕೆ(ಟಿಬಿಎಂ) ಚೀನಾದ ತಜ್ಞರ ಅವಶ್ಯಕತೆಯಿರುತ್ತದೆ ಎಂದು ಈ ಯೋಜನೆಯನ್ನು ನಿಭಾಯಿಸುತ್ತಿರುವ ಹಿರಿಯ ಅಧಿಕಾರಿಗಳು ಹೇಳುತ್ತಾರೆ.

ಮೂರು ಯಂತ್ರಗಳನ್ನು ಚೀನಾದ ಎಂಜಿನಿಯರ್ ಗಳ ಸಹಾಯದಿಂದ ಕೊರೋನಾಗೆ ಮೊದಲೇ ಜೋಡಿಸಲಾಗಿತ್ತು.ಇದೀಗ ನಾಲ್ಕನೇ ಯಂತ್ರವನ್ನು ಇನ್ನೂ ಜೋಡಿಸಿಲ್ಲ. ಒಂದು ವೇಳೆ ಟಿಬಿಎಂನ್ನು ಜೋಡಣೆ ಮಾಡಿದರೂ ಕೂಡ ಕೊರೆಯುವ ಕೆಲಸ ಕೊರೋನಾದಿಂದ ಆರಂಭಿಸಲು ಸಾಧ್ಯವಾಗುವುದಿಲ್ಲ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ಯೋಜನಾ ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಹೇಳಿದ್ದಾರೆ.

ಸುರಂಗ ಮಾರ್ಗ ಕೊರೆಯಲು ಚೀನಾ ರೈಲು ನಿರ್ಮಾಣ ಭಾರೀ ಕೈಗಾರಿಕೆ(ಸಿಆರ್ ಸಿಎಚ್ಐ)ಯಿಂದ ತಜ್ಞರ ಅವಶ್ಯಕತೆಯಿದೆ. ಕಂಟೋನ್ಮೆಂಟ್ ನಲ್ಲಿ ಯಂತ್ರದ ಹಿಂದಿನ ಭಾಗ ಜೂನ್ ಕೊನೆಯ ವೇಳೆಗೆ ಸಿದ್ದವಾಗಲಿದೆ. ಅಂತಾರಾಷ್ಟ್ರೀಯ ವಿಮಾನ ಸಂಚಾರ ಆರಂಭವಾದರೆ ಎಂಜಿನಿಯರ್ ಗಳು ಅಲ್ಲಿಂದ ಬರಬಹುದು. ಇಲ್ಲದಿದ್ದರೆ ಸುರಂಗ ಮಾರ್ಗ ನಿರ್ಮಾಣ ಕಾರ್ಯ ವಿಳಂಬವಾಗುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com