ದೇಶದ್ರೋಹ ಕೇಸು: ಅಮೂಲ್ಯ ಲಿಯೊನಾ ಬಂಧನ ಅವಧಿ ಮಾ.5ರವರೆಗೆ ವಿಸ್ತರಣೆ 

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ರ್ಯಾಲಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿ ಬಂಧಿತರಾಗಿರುವ ವಿದ್ಯಾರ್ಥಿನಿ ಅಮೂಲ್ಯ ಲಿಯೊನಾರ ನ್ಯಾಯಾಂಗ ಬಂಧನ ಅವಧಿ ಮಾರ್ಚ್ 5ರವರೆಗೆ ವಿಸ್ತರಣೆಯಾಗಿದೆ.
ದೇಶದ್ರೋಹ ಕೇಸು: ಅಮೂಲ್ಯ ಲಿಯೊನಾ ಬಂಧನ ಅವಧಿ ಮಾ.5ರವರೆಗೆ ವಿಸ್ತರಣೆ 

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ರ್ಯಾಲಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿ ಬಂಧಿತರಾಗಿರುವ ವಿದ್ಯಾರ್ಥಿನಿ ಅಮೂಲ್ಯ ಲಿಯೊನಾರ ನ್ಯಾಯಾಂಗ ಬಂಧನ ಅವಧಿ ಮಾರ್ಚ್ 5ರವರೆಗೆ ವಿಸ್ತರಣೆಯಾಗಿದೆ.


ದೇಶದ್ರೋಹ ಕೇಸಿನಡಿ ಅಮೂಲ್ಯ ಲಿಯೊನಾರನ್ನು ಬಂಧಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಬೆಂಗಳೂರಿನ ಕೋರ್ಟ್ ಆದೇಶ ನೀಡಿತ್ತು. ಈಕೆಯ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 124ಎ(ದೇಶದ್ರೋಹ), 153ಎ ಮತ್ತು ಬಿ(ವಿಭಿನ್ನ ಗುಂಪುಗಳು ಮತ್ತು ಪ್ರಚೋದನೆಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು, ರಾಷ್ಟ್ರೀಯ ಏಕೀಕರಣಕ್ಕೆ ಪೂರ್ವಾಗ್ರಹ ಪೀಡಿತವಾಗಿ ವರ್ತಿಸುವುದು)ಅಡಿಯಲ್ಲಿ ಕೇಸು ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com