ಗಂಗಾವತಿ: ನಾಳೆ ವಿರುಪಾಪುರ ಗಡ್ಡೆಯಲ್ಲಿ ಅನಧಿಕೃತ ರೆಸಾರ್ಟ್ ತೆರವು, ನಿಷೇಧಾಜ್ಞೆ ಜಾರಿ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ವಿದೇಶಿಗರ ಮೋಜುಮಸ್ತಿ ತಾಣ ವಿರುಪಾಪುರ ಗಡ್ಡೆಯಲ್ಲಿ ಬಹುತೇಕ ಎಲ್ಲಾ ಅನಧಿಕೃತ ರೆಸಾರ್ಟ್ ತೆರವು ಕಾರ್ಯಚರಣೆಗೆ ಮೂಹೂರ್ತ ಫಿಕ್ಸ್ ಆಗಿದೆ.
ವಿರುಪಾಪುರ ಗಡ್ಡೆ
ವಿರುಪಾಪುರ ಗಡ್ಡೆ

ಗಂಗಾವತಿ: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ವಿದೇಶಿಗರ ಮೋಜುಮಸ್ತಿ ತಾಣ ವಿರುಪಾಪುರ ಗಡ್ಡೆಯಲ್ಲಿ ಬಹುತೇಕ ಎಲ್ಲಾ ಅನಧಿಕೃತ ರೆಸಾರ್ಟ್ ತೆರವು ಕಾರ್ಯಚರಣೆಗೆ ಮೂಹೂರ್ತ ಫಿಕ್ಸ್ ಆಗಿದೆ.

ಈ ಬಗ್ಗೆ ಗಂಗಾವತಿ ತಹಸೀಲ್ದಾರ್ ಎಲ್.ಡಿ. ಚಂದ್ರಕಾಂತ್ ಅಧಿಕೃತ ಆರೋಗ್ಯ, ವಿದ್ಯುತ್ ಹಾಗೂ ಪೊಲೀಸ್ ಇಲಾಖೆಗೆ ಪತ್ರ ಬರೆದು ಸಿಬ್ಬಂದಿ ಒದಗಿಸುವಂತೆ ಕೋರಿದ್ದಾರೆ.

ನಾಳೆ ಬೆಳಗ್ಗೆ ಐದು ಗಂಟೆಗೆ ಗಡ್ಡಿಯಲ್ಲಿ ಸುಪ್ರಿಂ ಕೋರ್ಟ್ ನಿರ್ದೇಶನದ‌ ಮೆರೆಗೆ ತೆರವು ಕಾರ್ಯ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ತಿಳಿಸಿದ್ದಾರೆ.

ಅನಧಿಕೃತ ರೆಸಾರ್ಟ್ ಗಳ ತೆರವು ಕಾರ್ಯಚರಣೆ ನಡೆಸುವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ‌ ನಡೆಯದಂತೆ ಮುಂಜಾಗ್ರತೆ ವಹಿಸಲು ವಿದೇಶಿ ಪ್ರವಾಸಿಗರ ತಾಣದಲ್ಲಿ ನಿಷೆಧಾಜ್ಞೆ ಜಾರಿ ಮಾಡಲಾಗಿದೆ.

ತಹಸೀಲ್ದಾರ್ ಚಂದ್ರಕಾಂತ್, ತಮಗೆ ದತ್ತವಾದ ಅಧಿಕಾರ ಚಲಾಯಿಸಿ ಬೆಳಗ್ಗೆ ನಾಲ್ಕು ಗಂಟೆಯಿಂದ ರಾತ್ರಿ ಹತ್ತು ಗಂಟೆವರೆಗೂ ವಿರುಪಾಪುರ ಗಡ್ಡಿ ಹಾಗೂ ಸುತ್ತಲೂ ಎರಡು ಕಿ.ಮೀ ಸಾರ್ವಜನಿಕ ಓಡಾಟ ನಿಷೇಧಿಸಿದ್ದಾರೆ.

ಕಳೆದ ಕೆಲ ವರ್ಷಗಳ ಹಿಂದೆ ತೆರವು ಕಾರ್ಯಚರಣೆ‌ ನಡೆಸುವ ಸಂದರ್ಭದಲ್ಲಿ  ಕೆಲವರು ಉದ್ದೇಶ ಪೂರ್ವಕವಾಗಿ ತಡೆಗಟ್ಟಲು ಯತ್ನಿಸಿದ ಘಟನೆ ನಡೆದಿವೆ. ಆತ್ಮಹತ್ಯೆಯಂಥ ಘಟನೆಗೂ ಕೆಲವರು ಯತ್ನಿಸಿದ ಹಿನ್ನೆಲೆ ಅದೇ ಮಾದರಿಯ ಯತ್ನಗಳು ಮತ್ತೆ ನಡೆಯುತ್ತವೆ ಎಂಬ ಮಾಹಿತಿ ಮೇರೆಗೆ ತಹಸೀಲ್ದಾರ್ ಈ ಕ್ರಮಕ್ಕೆ ಮುಂದಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com