ಕುಂದಾಪುರ: ಮಿನಿ ವಿಧಾನಸೌಧದಲ್ಲಿ 'ಪಾಕಿಸ್ತಾನ ಜಿಂದಾಬಾದ್' ಘೊಷಣೆ ಕೂಗಿದ ವ್ಯಕ್ತಿ ಸೆರೆ

ಜನರು ಸಾಮಾನ್ಯವಾಗಿ ತಪ್ಪೆಂದು ಗ್ರಹಿಸುವ ಕೆಲಸವನ್ನೇ ಮಾಡಲು ಹೋಗಿ ಪ್ರಸಿದ್ದರಾಗಲು ನೋಡುತ್ತಾರೆ. ಇದಕ್ಕೆ ಇತ್ತೀಚಿನ ತಾಜಾ ಉದಾಹರಣೆ "ಪಾಕಿಸ್ತಾನ್ ಜಿಂದಾಬಾದ್" ಘೋಷಣೆ ಕೂಗುವುದಾಗಿದೆ.  ಪಾಕಿಸ್ತಾನದ ಪರವಾಗಿ ಘೋಷಣೆಗಳನ್ನು ಕೂಗುವುದು, ಪಾಕ್ ಪರ ಗೋಡೆಗಳ ಮೇಲೆ ಬರೆಯುವುದು ಮಾಡಿದರೆ ಬಲು ಬೇಗ ಪ್ರಸಿದ್ದಿಯಾಗಬಹುದೆಂದು ಜನ ಬಾವಿಸಿದಂತಿದೆ. ಇನ್ನು ಹುಬ್ಬಳ್ಳಿ, ಬೆಂಗ
ರಾಘವೆಂದ್ರ ಗಾಣಿಗ
ರಾಘವೆಂದ್ರ ಗಾಣಿಗ

ಕುಂದಾಪುರ: ಜನರು ಸಾಮಾನ್ಯವಾಗಿ ತಪ್ಪೆಂದು ಗ್ರಹಿಸುವ ಕೆಲಸವನ್ನೇ ಮಾಡಲು ಹೋಗಿ ಪ್ರಸಿದ್ದರಾಗಲು ನೋಡುತ್ತಾರೆ. ಇದಕ್ಕೆ ಇತ್ತೀಚಿನ ತಾಜಾ ಉದಾಹರಣೆ "ಪಾಕಿಸ್ತಾನ್ ಜಿಂದಾಬಾದ್" ಘೋಷಣೆ ಕೂಗುವುದಾಗಿದೆ.  ಪಾಕಿಸ್ತಾನದ ಪರವಾಗಿ ಘೋಷಣೆಗಳನ್ನು ಕೂಗುವುದು, ಪಾಕ್ ಪರ ಗೋಡೆಗಳ ಮೇಲೆ ಬರೆಯುವುದು ಮಾಡಿದರೆ ಬಲು ಬೇಗ ಪ್ರಸಿದ್ದಿಯಾಗಬಹುದೆಂದು ಜನ ಬಾವಿಸಿದಂತಿದೆ. ಇನ್ನು ಹುಬ್ಬಳ್ಳಿ, ಬೆಂಗಳೂರು, ಕಲಬುರಗಿ ಮೊದಲಾದೆಡೆಗಳಲ್ಲಿ ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿದ ನಂತರ ಇದೀಗ ಕರಾವಳಿ ನಗರ ಕುಂದಾಪುರದಲ್ಲಿ ಸಹ ಇಂತಹಾ ಪ್ರಸಂಗ ನಡೆದಿದೆ. 

ಕುಂದಾಪುರದಲ್ಲಿ ಮಾರ್ಚ್  2ಸೋಮವಾರ ಇಂತಹ ಒಂದು ಘಟನೆ ನಡೆದಿದ್ದು  ಬೆಳಿಗ್ಗೆ ವಿವಿಧ ಸರ್ಕಾರಿ ಕಚೇರಿಗಳನ್ನು ಹೊಂದಿರುವ ಮಿನಿ ವಿಧಾನ ಸೌಧಕ್ಕೆ ಪ್ರವೇಶಿಸಿದ ವ್ಯಕ್ತಿಯೊಬ್ಬಪಾಕಿಸ್ತಾನ ಜಿಂದಾಬಾದ್' ಎಂದು ಪದೇ ಪದೇ ಕೂಗಲಾರಂಭಿಸಿದ ಇಂದು ಬೆಳಿಗ್ಗೆ  10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಈ ಘೋಷಣೆಗಳನ್ನು ಕೂಗಿದ  ವ್ಯಕ್ತಿಯನ್ನು ಸ್ಥಳೀಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರನ್ನು ಇಲ್ಲಿಗೆ ಸಮೀಪವಿರುವ ಕೋಡಿ ನಿವಾಸಿ ರಾಘವೇಂದ್ರ ಗಾಣಿಗ (43) ಎಂದು ಗುರುತಿಸಲಾಗಿದೆ.

ರಾಘವೇಂದ್ರ ಗಾಣಿಗ ಸೋಮವಾರ ಬೆಳಿಗ್ಗೆ 9.45 ರ ಸುಮಾರಿಗೆ ಮಿನಿ ವಿಧಾನ ಸೌಧಕ್ಕೆ ಆಗಮಿಸಿ ನಂತರ ಅವರು ಕಟ್ಟಡದ ಮೆಟ್ಟಿಲುಗಳನ್ನು ಏರಿ , 'ಪಾಕಿಸ್ತಾನ ಜಿಂದಾಬಾದ್' ಎಂದು ಪದೇ ಪದೇ ಕೂಗಿದ್ದಾನೆ.ಅಲ್ಲದೆ ವಿಧಾನಸೌಧದ ಕಾರಿಡಾರ್ ಮೂಲಕ ನಡೆಯುತ್ತಾ ತನ್ನ ಘೋಷಣೆಯನ್ನು ಪುನರಾವರ್ತಿಸಿದ್ದಾನೆ. ಇದನ್ನು ಗಮನಿಸಿದ ಕೆಲವು ಸ್ಥಳೀಯರು ಇದನ್ನು ವಿಡಿಯೋದಲ್ಲಿ ರೆಕಾರ್ಡ್ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಈ ಸಂಬಂಧ ಮಾಹಿತಿ ಪಡೆದ ಕುಂದಾಪುರ ತಹಶೀಲ್ದಾರ್ ಆರೋಪಿರುದ್ಧ ಲಿಖಿತ ದೂರು ದಾಖಲಿಸಿದ್ದಾರೆ. ಗಾಣಿಗ ರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಆತನನ್ನು ಪೊಲೀಸ್ ಠಾಣೆಗೆ ಕರೆದೊಯ್ದರು.

ಇನ್ನು ಆರೋಪಿ ಮಾನಸಿಕ ಅಸ್ವಸ್ಥನಾಗಿದ್ದಾನೆ ಎನ್ನುವ ಮಾಹಿತಿ ಇದ್ದು ಈತ ವಿವಾಹವಾಗಿದ್ದು ಓರ್ವ ಮಗಳಿದ್ದಾಳೆ . ಅಲ್ಲದೆ ಆರೋಪಿ ಸುಶಿಕ್ಷಿತನಾಗಿದ್ದು ಕಳೆದ ಎಂಟು ವರ್ಷಗಳ ಹಿಂದೆ  ಪಟ್ಟಣದ ಖಾಸಗಿ ಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ. ಆದರೆ ಇದೀಗ ಆರೋಪಿ  ತನ್ನ ಹೆಂಡತಿ ಮತ್ತು ಮಗುವಿನಿಂದ ಬೇರ್ಪಟ್ಟಿದ್ದಾನೆ, ಮತ್ತು ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದಾನೆ ಎಂದು ಪೋಲೀಸರು ಹೇಳಿದ್ದಾರೆ."ರಾಘವೇಂದ್ರ ಮಾನಸಿಕ ಅಸ್ವಸ್ಥನಾಗಿದ್ದು ಅವರ ತಾಯಿ ಅವರನ್ನು ಇಲ್ಲಿನ ಮಾತಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತಂದಿದ್ದಾರೆ ಎಂದು ಹೇಳಲಾಗಿದೆ. ಅವರು ಅಲ್ಲಿಂದ ತಪ್ಪಿಸಿಕೊಂಡು, ಮಿನಿ ವಿಧಾನ ಸೌಧಾಗೆ ಪ್ರವೇಶಿಸಿ, ಈಗ ಪೊಲೀಸ್ ವಶದಲ್ಲಿದ್ದಾನೆ.

ಕೋಡಿಯ ವಾಸು ಗಾಣಿಗ ದಂಪತಿಗಳಿಗೆ ಯಾವ ಮಾನಸಿಕ ಅಸ್ವಸ್ಥತೆ ಇಲ್ಲ. ಮತ್ತು ಆ ದಂಪತಿಗಳೂ ರಾಘವೇಂದ್ರನನ್ನು ದತ್ತು ಪಡೆಇದ್ದರು.ಎಂದು ತಿಳಿದುಬಂದಿದೆ. ಅವನು ಶಿವಮೊಗ್ಗದಲ್ಲಿ ಹಿಂದಿ ಭಾಷೆಯಲ್ಲಿ ಬಿ.ಎಡ್ ಪದವಿ ವ್ಯಾಂಸಂಗ ಮಾಡಿದ್ದು  ಇಲ್ಲಿ ಖಾಸಗಿ ಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿ ಸೇರಿದ್ದನು. ಆದರೆ ಕಾರಣಾಂತರಗಳಿಂದ ಕೆಲಸ ತೊರೆದಿದ್ದ. ಆರೋಪಿಯ ತಂದೆ ಬಾಡಿಗೆಗಾಗಿ ಕಾರು ಚಲಾಯಿಸುವ ಕಾರು ಚಾಲಕನಾಗಿದ್ದಾರೆ. ಕುಟುಂಬವು ರಾಘವೇಂದ್ರನ ಚಿಕಿತ್ಸೆಗಾಗಿ ಪ್ರತಿ ತಿಂಗಳು ಸುಮಾರು 2,500 ರೂ ಖರ್ಚು ಮಾಡುತ್ತಿದೆ. 

ವಿಶೇಷವೆಂದರೆ ರಾಘವೇಂದ್ರ ಟಿವಿಯಲ್ಲಿ ಪ್ರಸಾರವಾಗಿದ್ದ ಅಮೂಲ್ಯ ಹಾಗೂ ಆರ್ದ್ರಾ ಕುರಿತ ಕಾರ್ಯಕ್ರಮಗಳನ್ನು ಪಟ್ಟುಹಿಡಿದು ನೋಡಿದ್ದನು. ಇದರಿಂದ ಪ್ರಭಾವಿತನಾಗಿ ಅವರ ಸ್ಥಾನದಲ್ಲಿ ತನ್ನನ್ನು ತಾನು ಕಲ್ಪಿಸಿಕೊಂಡು ಈ ಬಗೆಯ ಘೋಷಣೆ ಕೂಗಿದ್ದಾನೆ ಎಂದು ಅವರ ಕುಟುಂಬದ ಸದಸ್ಯರು ಹೇಳಿದ್ದಾರೆ. ಸಧ್ಯ ಆರೋಪಿಯ ಆರೋಗ್ಯ ಸ್ಥಿತಿ ನಿರ್ಧಾರಕ್ಕಾಗಿ  ಪೊಲೀಸರು ಈಗ ಕ್ರಮ ಕೈಗೊಂಡಿದ್ದಾರೆ, ಮತ್ತು ವರದಿ ಬಂದ ನಂತರ ಅವರು ಇತರ ವಿಷಯಗಳ ಬಗ್ಗೆ ತನಿಖೆ ನಡೆಸಲು ಪ್ರಾರಂಭಿಸುತ್ತಾರೆ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಹೇಳಿದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com