ಯಶವಂತಪುರ-ವಾಸ್ಕೋ ಎಕ್ಸ್ ಪ್ರೆಸ್ ರೈಲಿಗೆ ನಾಳೆ ಹಸಿರು ನಿಶಾನೆ

ಕೊಂಕಣ ರೈಲ್ವೆ ನಿಗಮವು(ಕೆಆರ್‌ಸಿಎಲ್) ರೈಲ್ವೆ ಸಚಿವಾಲಯದೊಂದಿಗೆ ಪ್ರಸ್ತಾವಿಸಿರುವ ಕಾರವಾರ ಮಾರ್ಗದ ಮೂಲಕ ನೂತನ ಯಶವಂತಪುರ-ವಾಸ್ಕೋ ಡ ಗಾಮಾ ಎಕ್ಸ್‌ಪ್ರೆಸ್ ಗೆ ಶನಿವಾರ ಹಸಿರು ನಿಶಾನೆ ತೋರಲಾಗುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಗಳೂರು: ಕೊಂಕಣ ರೈಲ್ವೆ ನಿಗಮವು(ಕೆಆರ್‌ಸಿಎಲ್) ರೈಲ್ವೆ ಸಚಿವಾಲಯದೊಂದಿಗೆ ಪ್ರಸ್ತಾವಿಸಿರುವ ಕಾರವಾರ ಮಾರ್ಗದ ಮೂಲಕ ನೂತನ ಯಶವಂತಪುರ-ವಾಸ್ಕೋ ಡ ಗಾಮಾ ಎಕ್ಸ್‌ಪ್ರೆಸ್ ಗೆ ಶನಿವಾರ ಹಸಿರು ನಿಶಾನೆ ತೋರಲಾಗುತ್ತಿದೆ.

ಈ ಸಂಬಂಧ ಇಂದು ರೇಲ್ವೆ ಇಲಾಖೆ ಪ್ರಕಟಣೆ ಬಿಡುಗಡೆ ಮಾಡಿದ್ದು, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು ಯಶವಂತಪುರದಲ್ಲಿ ಹೊಸ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ.

ಈ ವಿಶೇಷ ರೈಲಿನ ಅಗತ್ಯತೆಯ ಬಗ್ಗೆ ಸಚಿವರಾದ ಕೋಟಾ ಶ್ರೀನಿವಾಸ್ ಪೂಜಾರಿ, ಸಂಸದರಾದ ಶೋಭಾ ಕರಂದ್ಲಾಜೆ ಮತ್ತು ಅನಂತ್ ಕುಮಾರ್ ಹೆಗ್ಡೆ ಮತ್ತು ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಪ್ರಸ್ತಾಪಿಸಿದ್ದರು. ಈ ಪ್ರಸ್ತಾವನೆಗೆ ಬೆಂಬಲವಾಗಿ ನಿಂತ ಸುರೇಶ್ ಅಂಗಡಿಯವರು ಕೊನೆಗೂ ಕ್ರಮ ಕೈಗೊಂಡು ಬಹುದಿನಗಳ ಬೇಡಿಕೆ ಈಡೇರಿಸಿದ್ದಾರೆ. 

ಬೆಂಗಳೂರಿನ ಯಶವಂತಪುರದಿಂದ ಹೊರಡುವ ರೈಲು ಗೋವಾದ ವಾಸ್ಕೋ ತನಕ ಸಂಚಾರ ನಡೆಸುತ್ತದೆ. ಹಲವು ವರ್ಷಗಳಿಂದ ಬೆಂಗಳೂರು-ವಾಸ್ಕೋ ನಡುವಿನ ನೇರ ರೈಲಿಗಾಗಿ ಬೇಡಿಕೆ ಇಡಲಾಗಿತ್ತು. ಉಭಯ ನಗರಗಳನ್ನು ರೈಲು 16 ಗಂಟೆಗಳಲ್ಲಿ ಕ್ರಮಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com