ಕಮಲ್ ನಾಥ್ ಸರ್ಕಾರಕ್ಕೂ 'ಆಪರೇಷನ್ ಕಮಲ'ಕಂಟಕ?: ಮಧ್ಯ ಪ್ರದೇಶದ 17 ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ
ಹೆಚ್ ಎಎಲ್ ವಿಮಾನ ನಿಲ್ದಾಣದಲ್ಲಿ ಕಳೆದ ಅಪರಾಹ್ನ ಡಸ್ಸೌಲ್ಟ್ ಫಾಲ್ಕನ್ 2000ಎಲ್ಎಕ್ಸ್ ವಿಮಾನ ಬಂದಿಳಿಯುತ್ತಿದ್ದಂತೆ ದೂರದ ಮಧ್ಯ ಪ್ರದೇಶದಲ್ಲಿ ತೀವ್ರ ರಾಜಕೀಯ ಚಟುವಟಿಕೆಗಳು ನಡೆದವು. ಈ ವಿಮಾನದಲ್ಲಿ ಕಾಂಗ್ರೆಸ್ ಶಾಸಕರು ಇದ್ದರು. ಅವರೆಲ್ಲರೂ ಪಕ್ಷದ ಬಂಡಾಯ ನಾಯಕ ಜ್ಯೋತಿರಾಧಿತ್ಯ ಸಿಂಧ್ಯಾ ಅವರ ನಿಷ್ಠಾವಂತ ಶಾಸಕರು.
Published: 10th March 2020 08:40 AM | Last Updated: 10th March 2020 08:40 AM | A+A A-

17 ಕಾಂಗ್ರೆಸ್ ಶಾಸಕರನ್ನು ಹೊತ್ತು ತಂದ ವಿಮಾನ
ಬೆಂಗಳೂರು: ಹೆಚ್ ಎಎಲ್ ವಿಮಾನ ನಿಲ್ದಾಣದಲ್ಲಿ ಕಳೆದ ಅಪರಾಹ್ನ ಡಸ್ಸೌಲ್ಟ್ ಫಾಲ್ಕನ್ 2000ಎಲ್ಎಕ್ಸ್ ವಿಮಾನ ಬಂದಿಳಿಯುತ್ತಿದ್ದಂತೆ ದೂರದ ಮಧ್ಯ ಪ್ರದೇಶದಲ್ಲಿ ತೀವ್ರ ರಾಜಕೀಯ ಚಟುವಟಿಕೆಗಳು ನಡೆದವು. ಈ ವಿಮಾನದಲ್ಲಿ ಕಾಂಗ್ರೆಸ್ ಶಾಸಕರು ಇದ್ದರು. ಅವರೆಲ್ಲರೂ ಪಕ್ಷದ ಬಂಡಾಯ ನಾಯಕ ಜ್ಯೋತಿರಾಧಿತ್ಯ ಸಿಂಧ್ಯಾ ಅವರ ನಿಷ್ಠಾವಂತ ಶಾಸಕರು.
ಟಾರ್ಟೆರ್ಡ್ ವಿಮಾನದಲ್ಲಿ ಎರಡೂವರೆ ಗಂಟೆ ಪ್ರಯಾಣ ಮಾಡಿ ಬಂದಿಳಿದ ಶಾಸಕರನ್ನು ಬೆಂಗಳೂರು ಸಮೀಪ ವೈಟ್ ಫೀಲ್ಡ್-ಮಾದವಪುರ ಬಳಿಯಿರುವ ರೆಸಾರ್ಟ್ ವೊಂದಕ್ಕೆ ಕರೆದೊಯ್ಯಲಾಯಿತು. ಮಧ್ಯ ಪ್ರದೇಶದಲ್ಲಿ ಕಮಲ್ ನಾಥ್ ಸರ್ಕಾರವನ್ನು ಉರುಳಿಸಲು ಆಪರೇಷನ್ ಕಮಲ ನಡೆಸುವ ಜವಾಬ್ದಾರಿ ಮಹದೇವಪುರ ಶಾಸಕ ಮತ್ತು ಮಾಜಿ ಸಚಿವ ಅರವಿಂದ್ ಲಿಂಬಾವಳಿ ಹಾಗೂ ಇತರ ಬಿಜೆಪಿ ನಾಯಕರಿಗೆ ಜವಬ್ದಾರಿ ವಹಿಸಿಕೊಡಲಾಗಿದೆ.
ಬೆಂಗಳೂರಿಗೆ ತಲುಪಿದ 17 ಶಾಸಕರಲ್ಲಿ ಬಹುತೇಕರು ಸಚಿವರಾಗಿದ್ದಾರೆ. ಇನ್ನು ಇಬ್ಬರು ಶಾಸಕರಾದ ರಘುರಾಜ್ ಕನ್ಸನ ಮತ್ತು ಹೆಚ್ ಎಸ್ ದಂಗ್ ಕಳೆದ ವಾರದಿಂದ ನಗರದಲ್ಲಿದ್ದರು.
ನಿನ್ನೆ ರಾತ್ರಿ ಭೋಪಾಲ್ ನಲ್ಲಿ 28 ಸಚಿವರಲ್ಲಿ 20 ಮಂದಿ ಸಚಿವರು ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಸಾಮೂಹಿಕ ರಾಜೀನಾಮೆ ನೀಡಿದ್ದು 14 ತಿಂಗಳ ಸರ್ಕಾರದಲ್ಲಿ ಉಂಟಾಗಿರುವ ತೀವ್ರ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಮುಖ್ಯಮಂತ್ರಿಗಳು ಇದೀಗ ಮತ್ತೆ ಸಚಿವ ಸಂಪುಟ ಪುನಾರ್ರಚನೆ ಮಾಡಬೇಕಿದೆ. ನಿನ್ನೆ ನಡೆದ ತುರ್ತು ಸಚಿವ ಸಂಪುಟ ಸಭೆಯಲ್ಲಿ 20 ಸಚಿವರು ಮುಖ್ಯಮಂತ್ರಿ ಕಮಲ್ ನಾಥ್ ಗೆ ತಮ್ಮ ರಾಜೀನಾಮೆಯನ್ನು ನೀಡಿದರು.
ಇನ್ನು ಇಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರಿಗೆ ಅಲ್ಲಿಂದ ಬಂದವರ ಬಗ್ಗೆ ಯಾವುದೇ ನಡೆ ತೆಗೆದುಕೊಳ್ಳದಂತೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುವಂತೆ ತಿಳಿಸಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿವೆ. ಬಂಡಾಯ ಶಾಸಕರ ಬಳಿ ಹೋಗಿ ಮಾತನಾಡಬೇಕೆಂದು ಹೈಕಮಾಂಡ್ ನಿಂದ ಆದೇಶ ಬಂದರೆ ಸಿದ್ದರಾಮಯ್ಯನವರಿಗೆ ನೆರವಾಗುವಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಸಹ ಹೇಳಲಾಗಿದೆ.