ಬೆಳ್ತಂಗಡಿ ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆ ಶಿಕ್ಷಕಿ ಮೇಲೆ ಜಾತಿ ತಾರತಮ್ಯ ಆರೋಪ: ಕೇಸು ದಾಖಲು 

ದಲಿತ ವಿದ್ಯಾರ್ಥಿಗಳ ಮೇಲೆ ಜಾತಿ ತಾರತಮ್ಯ ತೋರಿದ ಆರೋಪದ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಿ ಶಾಲೆಯ ಶಿಕ್ಷಕಿ ಮೇಲೆ ಕೇಸು ದಾಖಲಾಗಿದೆ. 
ಬೆಳ್ತಂಗಡಿ ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆ ಶಿಕ್ಷಕಿ ಮೇಲೆ ಜಾತಿ ತಾರತಮ್ಯ ಆರೋಪ: ಕೇಸು ದಾಖಲು 

ಮಂಗಳೂರು: ದಲಿತ ವಿದ್ಯಾರ್ಥಿಗಳ ಮೇಲೆ ಜಾತಿ ತಾರತಮ್ಯ ತೋರಿದ ಆರೋಪದ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಿ ಶಾಲೆಯ ಶಿಕ್ಷಕಿ ಮೇಲೆ ಕೇಸು ದಾಖಲಾಗಿದೆ. 


ಬೇರೆ ವಿದ್ಯಾರ್ಥಿಗಳ ಜೊತೆ ದಲಿತ ವಿದ್ಯಾರ್ಥಿಗಳನ್ನು ಊಟಕ್ಕೆ ಕರೆದುಕೊಂಡು ಹೋಗದೆ ಜಾತಿ ತಾರತಮ್ಯ ತೋರಿಸಿದರು ಎಂದು ಬೆಳ್ತಂಗಡಿ ಸಮೀಪ ಲೈಲಾ ಉನ್ನತ ಪ್ರಾಥಮಿಕ ಶಾಲೆಯ ಶಿಕ್ಷಕಿ ಉಮಾ ರಾವ್ ವಿರುದ್ಧ ಕೇಸು ದಾಖಲಾಗಿದೆ.


ಇದೇ ರೀತಿ ಈ ಹಿಂದೆ ಇದೇ ತಾಲ್ಲೂಕಿನ ಸರ್ಕಾರಿ ಶಾಲೆಯಲ್ಲಿ ದಲಿತ ವಿದ್ಯಾರ್ಥಿಗಳ ಮೇಲೆ ಶಿಕ್ಷಕರು ಜಾತಿ ತಾರತಮ್ಯ ತೋರಿಸಿದ್ದರು ಎಂದು ಪೋಷಕರು ಆರೋಪಿಸಿದ್ದು ಸುದ್ದಿಯಾಗಿತ್ತು. ಮೇಲ್ಜಾತಿಯ ವಿದ್ಯಾರ್ಥಿಯೊಬ್ಬನ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ದಲಿತ ವಿದ್ಯಾರ್ಥಿಗಳನ್ನು ಶಿಕ್ಷಕರು ಕರೆದುಕೊಂಡು ಹೋಗಿರಲಿಲ್ಲ.


ಈ ಘಟನೆ ಕಳೆದ ತಿಂಗಳು 26ರಂದು ನಡೆದಿತ್ತು. ಸಣ್ಣವರಿರುವಾಗಲೇ ಮಕ್ಕಳಲ್ಲಿ ಜಾತಿ ತಾರತಮ್ಯವನ್ನು ಶಿಕ್ಷಕರು ಬಿತ್ತುತ್ತಿದ್ದಾರೆ ಎಂದು ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಮೂವರು ಶಿಕ್ಷಕರ ವಿರುದ್ಧ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com