ಹಣ ದುಪ್ಪಟ್ಟಾಗಿಸುವದಾಗಿ ಹೇಳಿ ನೂರಾರು ಮಂದಿಗೆ ವಂಚನೆ, ಹಣಕಾಸು ಕಂಪನಿಯ ಸಿಇಒಗಾಗಿ ಸಿಸಿಬಿ ಶೋಧ

ಹೂಡಿಕೆದಾರರ ಹಣವನ್ನು ದುಪ್ಪಟ್ತಾಗಿಸುವ ಭರವಸೆ ಕೊಟ್ಟು ನೂರಾರು ಮಂದಿಯ ಹಣ ಪಡೆದು ವಂಚಿಸಿದ ಪೊಂಜಿ ಯೋಜನೆ ರೂಪಿಸಿದ ಹಣಕಾಸು ಕಂಪನಿಯ ಸಿಇಒ ಶೋಧನಾಕಾರ್ಯದಲ್ಲಿ ಬೆಂಗಳೂರು ಸಿಸಿಬಿ ಪೋಲೀಸರು ನಿರತವಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಹೂಡಿಕೆದಾರರ ಹಣವನ್ನು ದುಪ್ಪಟ್ತಾಗಿಸುವ ಭರವಸೆ ಕೊಟ್ಟು ನೂರಾರು ಮಂದಿಯ ಹಣ ಪಡೆದು ವಂಚಿಸಿದ ಪೊಂಜಿ ಯೋಜನೆ ರೂಪಿಸಿದ ಹಣಕಾಸು ಕಂಪನಿಯ ಸಿಇಒ ಶೋಧನಾಕಾರ್ಯದಲ್ಲಿ ಬೆಂಗಳೂರು ಸಿಸಿಬಿ ಪೋಲೀಸರು ನಿರತವಾಗಿದ್ದಾರೆ.

ಧನಂಜಯ ಬಿ (42) ಮತ್ತು ಅವರ ಸ್ನೇಹಿತ ಸಲ್ಲಿಸಿದ ದೂರಿನ ಆಧಾರದ ಮೇಲೆ ರಾಜಾಜಿನಗರದ ವರ್ಲ್ಡ್ ಟ್ರೇಡ್ ಸೆಂತರ್ ನಲ್ಲಿದ್ದ ಕಂಪನಿಯ ಪ್ರಧಾನ ಕಚೇರಿಯ ಮೇಲೆ ಸಿಸಿಬಿ ಅಧಿಕಾರಿಗಳು ಶನಿವಾರ ದಾಳಿ ಕೈಗೊಂಡಿದ್ದರು.ಈ ವೇಳೆ ಕೆಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ವೆವೆಟೋಸ್ ವೆಲ್ನೆಸ್ ಸೆಂಟರ್ ಪ್ರೈವೇಟ್ ಲಿಮಿಟೆಡ್  ಎಂಬ ಹೆಸರಿನ ಖಾಸಗಿ ಕಂಪನಿಯ ಸಿಇಒ ಗಾಗಿ ಪೋಲೀಸರು ಬಲೆ ಬೀಸಿದ್ದಾರೆ. ಈತ ಹಾಗೂ ಆತನ ಸ್ನೇಹಿತ ಸೇರಿ ನೂರಾರು ಮಂದಿಗೆ ಅಧಿಕ ಆದಾಯದ ಭರವಸೆ ನೀಡಿ ವಂಚಿಸಿದ್ದಾರೆ ಎಂದು ದೂರು ದಾಖಲಾಗಿದೆ. ಧನಂಜಯ ಅವರಿಗೆ ಕಳೆದ ಫೆಬ್ರವರಿಯಲ್ಲಿ ಕಂಪನಿಯ ಸದಸ್ಯರಾಗಲು ಆಹ್ವಾನ ಬಂದಿದೆ.  ಸಿಇಒ ಲಾಜರಸ್ ಯಾಬ್ಸ್ ಮತ್ತು ಉಪಾಧ್ಯಕ್ಷ ಸ್ಯಾಮ್ ವಿಜಯ್ ಪ್ರವೀಣ್ ಎನ್ನುವವರು ತಮಗೆ ವಂಚಿಸಿದ್ದಾರೆ ಎಂದು ಧನಂಜಯ ಆರೋಪಿಸಿದ್ದಾರೆ. ಧನಂಜಯ . ಧನಜಯ್ 15,000 ರೂ ಪಾವತಿಸಿ 5,000 ಹೊಸ ಸದಸ್ಯರನ್ನು ಕಂಪನಿಗೆ ಪರಿಚಯಿಸಿದ್ದರು.

ಆದರೆ ಕಳೆದ ಮೂರು ವಾರಗಳಲ್ಲಿ, ಕಂಪನಿಯು ಹೊಸ ಸದಸ್ಯರ ನೊಂದಣಿಗಾಗಿನ ಕಮಿಷನ್ ಆತನಿಗೆ ಸಿಕ್ಕಿಲ್ಲ.  ಧನಜಯ ಯಾಬ್ಸ್ ಮತ್ತು ಪ್ರವೀಣ್ ಅವರನ್ನು  ಸಂಪರ್ಕಿಸಲು ಯತ್ನಿಸಿದಾಗ ಅದು ಸಾಧ್ಯವಾಗಿಲ್ಲ. . ಕಚೇರಿಗೆ ಭೇಟಿ ನೀಡಿದಾಗ, ಅದಾಗಲೇ ಕಂಪನಿ ಬಂದ್ ಆಗಿರುವುದು ತಿಳಿದಿದೆ. 

ಬೆಂಗಳೂರು ವಿವಿ ಆವರಣದಲ್ಲಿ ಬೆಂಕಿ

 ಬೆಂಗಳೂರು ವಿಶ್ವವಿದ್ಯಾಲಯ ಆವರಣದ ಶನಿವಾರ ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿದೆ. ಜ್ಞಾನ ಭಾರತಿ ಆವರಣದ ನಾಲ್ಕು ಎಕರೆ ಭೂಮಿಯಲ್ಲಿದ್ದ ಒಣ ಹುಲ್ಲಿಗೆ ಬೆಂಕಿ ತಗುಲಿದೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲು ನಾಲ್ಕು ಗಂಟೆ ಬೇಕಾಯಿತು.ಧೂಮಪಾನ ಂಆಡಿ ಬಿಸಾಡಿದ ಸಿಗರೇಟ್ ತುಂಡು ಈ ಅನಾಹುತಕ್ಕೆ ಕಾರಣವೆನ್ನಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com