ಬೆಂಗಳೂರಿನಿಂದ ಬಂದು ಕೋಡಿ ಬೀಚ್ ನಲ್ಲಿ ವಿಷ ಸೇವಿಸಿದ ಭಗ್ನಪ್ರೇಮಿಗಳು, ಇಬ್ಬರ ಸ್ಥಿತಿ ಗಂಭೀರ

ವಿವಾಹಾನಂತರ ಪ್ರೀತಿಸಿದ್ದ ಜೋಡಿಯೊಂದು ಬೆಂಗಳುರಿನಿಂದ ಆಗಮಿಸಿ ಇಲ್ಲಿನ ಕೋಡಿ ಕಡಲ ತೀರದಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಾನುವಾರ ನಡೆದಿದೆ. ಮಾರ್ಚ್ 15 ರ ಭಾನುವಾರದಂದು ಕೋಡಿಯ ಕಡಲತೀರದಲ್ಲಿ ಪ್ರೇಮಿಗಳಿಬ್ಬರೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷ ಕುಡಿದು ಸಾವು, ಬದುಕಿನ ನಡುವೆ ಹೋರಾಡುತ್ತಿದ್ದ ಇವರನ್ನು ನೋಡಿದ ಜನರು ಇಲ್ಲಿನ ಸರ್ಕಾರಿ ಆಸ್ಪತ್
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕುಂದಾಪುರ: ವಿವಾಹಾನಂತರ ಪ್ರೀತಿಸಿದ್ದ ಜೋಡಿಯೊಂದು ಬೆಂಗಳುರಿನಿಂದ ಆಗಮಿಸಿ ಇಲ್ಲಿನ ಕೋಡಿ ಕಡಲ ತೀರದಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಾನುವಾರ ನಡೆದಿದೆ. ಮಾರ್ಚ್ 15 ರ ಭಾನುವಾರದಂದು ಕೋಡಿಯ ಕಡಲತೀರದಲ್ಲಿ ಪ್ರೇಮಿಗಳಿಬ್ಬರೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷ ಕುಡಿದು ಸಾವು, ಬದುಕಿನ ನಡುವೆ ಹೋರಾಡುತ್ತಿದ್ದ ಇವರನ್ನು ನೋಡಿದ ಜನರು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ಆದರೆ ಅವರಿಬ್ಬರ ಸ್ಥಿತಿ ಗಂಭೀರವಾಗಿದೆ.

ಇಬ್ಬರೂ ಒಟ್ತಾಗಿ ತಮ್ಮ ಬದುಕನ್ನು ಕೊನೆಗೊಳಿಸಲು ಬಯಸಿದ ಈ ಇಬ್ಬರೂ ಬೆಂಗಳೂರು ಹನುಮಂತನಗರದ ನಿವಾಸಿಗಳಾದ  ರಮೇಶ್ ಕುಮಾರ್ (45) ಮತ್ತು ಅವರ ನೆರೆಮನೆಯವರಾದ ಪವಿತ್ರಾ (32) ಎಂದು ಗುರುತಿಸಲಾಗಿದೆ. ಇಬ್ಬರೂ ವಿವಾಹಿತರು ಮತ್ತು  ಇಬ್ಬರಿಗೂ ತಲಾ ಎರಡು ಮಕ್ಕಳಿದ್ದಾರೆ. ಆದರೆ ಈ ಇಬ್ಬರೂ ಪರಸ್ಪರರು ಪ್ರೀತಿಯ ಅಲೆಯಲ್ಲಿ ಕೊಚ್ಚಿ ಹೋಗಿದ್ದರು ಎಂದು ಹೇಳಲಾಗಿದೆ. 

ರಮೇಶ್ ಅವರಿಗೆ ಇಬ್ಬರು ಮಕ್ಕಳಿದ್ದರೆ, ಪವಿತ್ರಾಗೆ ಇಬ್ಬರು ಚಿಕ್ಕ ಮಕ್ಕಳಿದ್ದಾರೆ. ಪವಿತ್ರಾ ಅವರ ಪತಿ ಲೋಕೇಶ್, ಬಾಡಿಗೆಗೆ ಕಾರು ಓಡಿಸುತ್ತಿದ್ದರೆ ರಮೇಶ್ ಕೂಡ ಬಾಡಿಗೆಗೆ ಚಾಲನೆ ಮಾಡುವ ಕಾರನ್ನು ಹೊಂದಿದ್ದಾರೆ. ಇಬ್ಬರೂ ಒಂದೇ ಪ್ರದೇಶದಲ್ಲಿ ವಾಸಿಸುತ್ತಿದ್ದು ಸ್ನೇಹಿತರಾಗಿದ್ದರು. ಆದರೆ ಸಮಯ ಕಳೆದಂತೆ ರಮೇಶ್ ಮತ್ತು ಪವಿತ್ರ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದರು. ಹಾಗೆಯೇ ಕಾಲಕ್ರಮೇಣ ಅವರಿಬ್ಬರ ಪ್ರೀತಿ ಇನ್ನಷ್ಟು ಬಲವಾಗಿ ಒಬ್ಬರಿಗೊಬ್ಬರು ಅಗಲಲಾರದಷ್ಟು ಮುಂದುವರಿದಿತ್ತು.

ಅವರ ಪ್ರೇಮ ಸಂಬಂಧ ಎರಡೂ ಕುಟುಂಬಗಳ ಗಮನಕ್ಕೆ ಬಂದಿದ್ದು, ಇದು ಭಿನ್ನಾಭಿಪ್ರಾಯಕ್ಕೆ ಕಾರಣವಾಯಿತು. ತನ್ನ ಹೆಂಡತಿ ನೆರೆಮನೆಯವನೊಂದಿಗೆ ಹೊಂದಿದ್ದ ಅಪವಿತ್ರ ಸಂಬಂಧದ ಬಗ್ಗೆ ಕೋಪಗೊಂಡ ಲೋಕೇಶ್ ಕಳೆದ ವಾರ ತನ್ನ ಹೆಂಡತಿಗೆ ತಿಳಿಸದೆ ಮನೆ ತೊರೆದು ಹೋಗಿದ್ದಾನೆ. ಈ ಬೆಳವಣಿಗೆಯಿಂದ ಆಘಾತಗೊಂಡ ಪವಿತ್ರಾ ಹಾಗೂ ರಮೇಶ್  ರಮೇಶ್‌ಗೆ ಸೇರಿದ ಕಾರಿನಲ್ಲಿ ನೇರವಾಗಿ ಕುಂದಾಪುರದ ಕೋಡಿಯ ಸಮುದ್ರ ತೀರಕ್ಕೆ ಬಂದಿದ್ದಾರೆ.ಅಲ್ಲಿ ಅವರು ತಾವು ತಂದಿದ್ದ ವಿಷವನ್ನು ಭಾನುವಾರ ನಸುಕಿನ ಜಾವ ಸೇವಿಸಿದ್ದಾರೆ.. ಮುಂಜಾನೆ ಸಮುದ್ರ ತೀರದಲ್ಲಿ ಇಬ್ಬರೂ ನರಳುವುದನ್ನು ಕಂಡ ಜನರು  ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇಬ್ಬರೂ ಪ್ರೇಮಿಗಳ ಸ್ಥಿತಿ ಗಂಭೀರವಾಗಿದ್ದರಿಂದ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಕೇಳಿದರು. ಆದಾಗ್ಯೂ, ಕುಟುಂಬ ಸದಸ್ಯರು ಇಲ್ಲದ ಕಾರಣ,  ವಿಳಂಬವಾಗಿದೆ.  ಮಧ್ಯಾಹ್ನ, ಪವಿತ್ರಾ ಅವರ ಅಕ್ಕನ ಪತಿ ಅಲ್ಲಿಗೆ ಬಂದರು ಆದರೆ ಅವರು ಪವಿತ್ರಾ ಅವರನ್ನು ಮಾತ್ರವೇ ಆಂಬ್ಯುಲೆನ್ಸ್‌ನಲ್ಲಿ ಏಕಾಂಗಿಯಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದರು.. ಸುತ್ತಮುತ್ತಲಿನ ಜನರು ರಮೇಶ್ ಬಗೆಗೆ ಹೇಳಿದರೂ ಕೂಡ ಆತ ಅವರನನ್ನು ನೋಡಲೂ  ಸಹ ಅವರು ನಿರಾಕರಿಸಿದರು. ರಮೇಶ್ ಅವರ ಸಂಬಂಧಿಕರು ರಾತ್ರಿಯ ಹೊತ್ತಿಗೆ ಬಂದ ನಂತರ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಘಟನೆ ಕುರಿತು ಸ್ಥಳೀಯ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇನ್ನು ಕೆಲ ವರ್ಷಗಳ ಹಿಂದೆ ಚೆನ್ನೈ ಮೂಲಾ ಇಬ್ಬರು  ಕೊಲ್ಲೂರಿನಿಂದ ಪಟ್ಟಣಕ್ಕೆ ತೆರಳುವ ಬಸ್ಸಿನಲ್ಲಿ ವಿಷ ಸೇವಿಸಿದ್ದ ಘಟನೆಯನ್ನು ನಾವಿಲ್ಲಿ ಸ್ಮರಿಸಿಕೊಳ್ಲಬಹುದಾಗಿದೆ. ಆ ಘಟನೆಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com