ವೆಡ್ಡಿಂಗ್ ಆ್ಯನಿವರ್ಸರಿ ಆಚರಿಕೊಳ್ಳಲು ಹೋಗಿ ಸ್ಪೇನ್ ನಲ್ಲಿ ಸಿಕ್ಕಾಕೊಂಡ ಬೆಂಗಳೂರು ದಂಪತಿ

ಪ್ರತಾಪ್ ನಂದ ಕುಮಾರ್  ಮತ್ತು ಅವರ ಪತ್ನಿ ಅಮೂಲ್ಯ ಮಾರ್ಚ್ 9 ರಂದು ತಮ್ಮ 5ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಲು ಸ್ಪೇನ್ ಗೆ ತೆರಳಿದ್ದರು. ಭಾರತಕ್ಕೆ ವಾಪಸ್ ಬರಲು ಪ್ರಯತ್ನಿಸುತ್ತಿದ್ದು, ಲಂಡನ್ ಮೂಲಕ ಬರಲು ಅವರಿಗೆ ಸರಿಯಾದ ವೀಸಾ ಇರದ ಹಿನ್ನೆಲೆಯಲ್ಲಿ ಅಲ್ಲಿಯೇ ಸಿಲುಕಿದ್ದಾರೆ. 
ಪ್ರತಾಪ್ ಮತ್ತು ಅಮೂಲ್ಯ
ಪ್ರತಾಪ್ ಮತ್ತು ಅಮೂಲ್ಯ

ಬೆಂಗಳೂರು: ಬೆಂಗಳೂರಿನ ಜೋಡಿಯೊಂದು ತಮ್ಮ 5 ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಲು ಸ್ಪೇನ್‌ಗೆ ಹೋಗಿ  ಸಿಕ್ಕಿ ಹಾಕಿಕೊಂಡಿದ್ದಾರೆ.

ಪ್ರತಾಪ್ ನಂದ ಕುಮಾರ್  ಮತ್ತು ಅವರ ಪತ್ನಿ ಅಮೂಲ್ಯ ಮಾರ್ಚ್ 9 ರಂದು ತಮ್ಮ 5ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಲು ಸ್ಪೇನ್ ಗೆ ತೆರಳಿದ್ದರು. ಭಾರತಕ್ಕೆ ವಾಪಸ್ ಬರಲು ಪ್ರಯತ್ನಿಸುತ್ತಿದ್ದು, ಲಂಡನ್ ಮೂಲಕ ಬರಲು ಅವರಿಗೆ ಸರಿಯಾದ ವೀಸಾ ಇರದ ಹಿನ್ನೆಲೆಯಲ್ಲಿ ಅಲ್ಲಿಯೇ ಸಿಲುಕಿದ್ದಾರೆ. 

ವಿದ್ಯಾರಣ್ಯಪುರದ ಪ್ರತಾಪ್ ಏರೋ ಸ್ಪೇಸ್ ಎಂಜಿನೀಯರ್ ಆಗಿದ್ದು ದುನಿಯಾ ಟ್ರಾವೆಲ್ಸ್ ಮೂಲಕ ಬುಕ್ ಮಾಡಿದ್ದರು. ಕೊರೋನಾ ಹಿನ್ನೆಲೆಯಲ್ಲಿ ದಂಪತಿ ತಮ್ಮ ಪ್ರವಾಸ ರದ್ದು ಮಾಡಲು ನಿರ್ಧರಿಸಿದ್ದರು, ಆದರೆ ದುನಿಯಾ ಟ್ರಾವೆಲ್ಸ್ ಅವರಿಗೆ ತಪ್ಪು ಮಾಹಿತಿ ನೀಡಿ. ಯಾವುದೇ ತೊಂದರೆಯಾಗುವುದಿಲ್ಲಎಂದು ಕಳುಹಿಸಿತ್ತು, ಸದ್ಯ ದಂಪತಿ ಮ್ಯಾಡ್ರಿಡ್ ನಲ್ಲಿದ್ದಾರೆ,.

ತಾವು ಧರಿಸಿರುವ ಬಟ್ಟೆ ಒರತು ಪಡಿಸಿ ತಮ್ಮ ಬಳಿ ಬಟ್ಟೆಯಾಗಲೀ, ಹಣವಾಗಲೀ ಇಲ್ಲವೆಂದು ಅವರು ವಿಡಿಯೋ ಮೂಲಕ ಹೇಳಿದ್ದಾರೆ.

ಆದಷ್ಟು ಬೇಗ ನನ್ನ ಮಗ, ಸೊಸೆಯನ್ನ ರಾಜ್ಯಕ್ಕೆ ಕರೆತನ್ನಿ ಎಂದು ಪ್ರತಾಪ್ ತಂದೆ ಹಾಗೂ ತಾಯಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಯಮಾಡಿ ಸರ್ಕಾರ ಗಮನ ಹರಿಸಿ ಇಬ್ಬರೂ ಭಾರತಕ್ಕೆ ಬರಲು ವ್ಯವಸ್ಥೆ ಮಾಡಬೇಕು ಎಂದು‌ ಮನವಿ ಮಾಡಿಕೊಂಡಿದ್ದಾರೆ.

ವಿದೇಶದಿಂದ ಬಂದವರಿಂದಲೇ ಭಾರತದಲ್ಲಿ ಸೋಂಕು ಹರಡುತ್ತಿದ್ದು, ಈ ನಿಟ್ಟಿನಲ್ಲಿ ವಿಮಾನಗಳು, ರೈಲುಗಳು, ಬಸ್‌ ಸೇವೆಯನ್ನೂ ರದ್ದು ಮಾಡಲಾಗಿದೆ.

ಈ ಸಂಬಂದ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಡಿವಿ ಸದಾನಂದಗೌಡ ಒಟ್ಟು 36 ಭಾರತೀಯರು ಸ್ಪೇನ್ ನಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ.  ಭಾರತೀಯ ರಾಯಭಾರ ಕಚೇರಿಗೆ ನಾವು ಮಾಹಿತಿ ನೀಡಿದ್ದೇವೆ, ಮಾರ್ಚ್ 31ರೊಳಗೆ ಎಲ್ಲಾ ರೀತಿಯ ಸಿದ್ಧತೆ ಮಾಡುತ್ತಾರೆ ಎಂದುವಿಶ್ವಾಸ  ವ್ಯಕ್ತ ಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com