ಲಾಕ್ ಡೌನ್: ಹಿರಿಯ ನಾಗರಿಕರು, ಬಡವರಿಗೆ ಅಗತ್ಯ ಸೇವೆ ಒದಗಿಸಲಿದೆ ಬೆಂಗಳೂರು ದಕ್ಷಿಣ ಕೊರೋನಾವೈರಸ್ ಟಾಸ್ಕ್ ಫೋರ್ಸ್! 

ಕೊರೋನಾ ವೈರಸ್ ತಡೆಗೆ ಲಾಕ್ ಡೌನ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರು, ಬಡವರಿಗೆ ದಿನನಿತ್ಯದ ಅಗತ್ಯ ಸೇವೆಗಳನ್ನು ಪಡೆಯುವುದು ಕಷ್ಟಸಾಧ್ಯ. ಈ ಸಮಸ್ಯೆ ಕ್ಷೇತ್ರದ ಜನತೆಯನ್ನು ಬಾಧಿಸದಂತೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಕ್ರಮ ಕೈಗೊಂಡಿದ್ದಾರೆ. 
ಸಂಸದ ತೇಜಸ್ವಿ ಸೂರ್ಯ
ಸಂಸದ ತೇಜಸ್ವಿ ಸೂರ್ಯ

ಕೊರೋನಾ ವೈರಸ್ ತಡೆಗೆ ಲಾಕ್ ಡೌನ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರು, ಬಡವರಿಗೆ ದಿನನಿತ್ಯದ ಅಗತ್ಯ ಸೇವೆಗಳನ್ನು ಪಡೆಯುವುದು ಕಷ್ಟಸಾಧ್ಯ. ಈ ಸಮಸ್ಯೆ ಕ್ಷೇತ್ರದ ಜನತೆಯನ್ನು ಬಾಧಿಸದಂತೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಕ್ರಮ ಕೈಗೊಂಡಿದ್ದಾರೆ. 

ಔಷಧ, ತುರ್ತು ಅಗತ್ಯವಿರುವ ಆಹಾರ ಸಾಮಗ್ರಿಗಳನ್ನು ಪೂರೈಸುವುದಕ್ಕೆ ಕೊರೋನಾ ವೈರಸ್ ಟಾಸ್ಕ್ ಫೋರ್ಸ್ ರಚನೆಯಾಗಿದ್ದು, ಅಗತ್ಯ ಇರುವವರು ಹೆಲ್ಪ್ ಲೈನ್ ನಂಬರ್  99464 99464 ಗೆ ಕರೆ ಮಾಡಬಹುದಾಗಿದೆ.    

ಕೊರೋನಾವೈರಸ್ ಟಾಸ್ಕ್ ಫೋರ್ಸ್ ವೆಬ್ ಸೈಟ್ ನಲ್ಲಿ ನೋಂದಣಿ ಮಾಡಿಕೊಂಡಿರುವ ಸ್ವಯಂಸೇವಕರು ಬೆಂಗಳೂರು ದಕ್ಷಿಣ ಕ್ಷೇತ್ರದ ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಬೆಂಗಳೂರು ದಕ್ಷಿಣ, ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸರ ಸಹಯೋಗದಲ್ಲಿ ಈ ಟಾಸ್ಕ್ ಫೋರ್ಸ್ ಕಾರ್ಯನಿರ್ವಹಣೆ ಮಾಡಲಿದೆ. 

"ಪೊಲೀಸ್ ಕಾನ್ಸ್ಟೆಬಲ್, ನೋಡಲ್ ಅಧಿಕಾರಿ, ವಾರ್ಡ್ ಆರೋಗ್ಯಾಧಿಕಾರಿಗಳನ್ನೊಳಗೊಂಡ ವಾಟ್ಸ್ ಆಪ್ ಗ್ರೂಪ್ ಮೂಲಕ ಸ್ವಯಂ ಸೇವಕರು ಸಂಪರ್ಕದಲ್ಲಿರಲಿದ್ದು, ಈ ವಾಟ್ಸ್ ಆಪ್ ಗ್ರೂಪ್ ಮೂಲಕವೇ ಮಾಹಿತಿಯೂ ಹಂಚಿಕೆಯಾಗಲಿದೆ. 

ಪೊಲೀಸ್ ಅಧಿಕಾರಿಗಳು ಅಗತ್ಯ ಸೇವೆಗಳನ್ನು ಪೂರೈಕೆ ಮಾಡುವ ಕೆಲವೇ ಸ್ವಯಂ ಸೇವಕರಿಗೆ ಸಂಚರಿಸುವುದಕ್ಕೆ ವಿಶೇಷ ಪಾಸ್ ನೀಡಲಿದ್ದು, ಸಿಬ್ಬಂದಿಗಳ ಅನುಮತಿ ಪಡೆದ ನಂತರ ಸ್ವಯಂ ಸೇವಕರು ಅಗತ್ಯವಿರುವ ನಾಗರಿಕರಿಗೆ ಸೇವೆಗಳನ್ನು ಒದಗಿಸಲಿದ್ದು, ಈ ಕುರಿತ ವರದಿಯನ್ನೂ ನೀಡಲಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಅವರ ಕಚೇರಿ ಕನ್ನಡಪ್ರಭ.ಕಾಂ ಗೆ ಮಾಹಿತಿ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com