ಬೆಂಗಳೂರಿನಲ್ಲಿ ಮೃತಪಟ್ಟ ಕೋವಿಡ್-19 ರೋಗಿಯನ್ನು ಹಾಸಿಗೆಗಳ ಕೊರತೆಯಿಂದಾಗಿ ಆರ್‌ಜಿಐಸಿಡಿಗೆ ಸೇರಿಸಿಕೊಂಡಿರಲಿಲ್ಲ: ಸಚಿವ ಸುಧಾಕರ್

ಕರ್ನಾಟಕದಲ್ಲಿ ಕೋವಿಡ್ -19 ಗೆ ಬಲಿಯಾದ ಎರಡನೇ ವ್ಯಕ್ತಿಯನ್ನು ಹಾಸಿಗೆಗಳ ಕೊರತೆ ಇದ್ದ ಕಾರಣ ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಚೆಸ್ಟ್ ಡಿಸೀಸಸ್  ಆಸ್ಪತ್ರೆಯಿಂದ ಸ್ಥಳಾಂತರಿಸಲಾಗಿತ್ತು ಎಂದು  ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್,ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮೃತಪಟ್ಟ ಕೋವಿಡ್-19 ರೋಗಿಯನ್ನು ಹಾಸಿಗೆಗಳ ಕೊರತೆಯಿಂದಾಗಿ ಆರ್‌ಜಿಐಸಿಡಿಗೆ ಸೇರಿಸಿಕೊಂಡಿರಲಿಲ್ಲ: ಸಚಿವ ಸುಧಾಕರ್
ಬೆಂಗಳೂರಿನಲ್ಲಿ ಮೃತಪಟ್ಟ ಕೋವಿಡ್-19 ರೋಗಿಯನ್ನು ಹಾಸಿಗೆಗಳ ಕೊರತೆಯಿಂದಾಗಿ ಆರ್‌ಜಿಐಸಿಡಿಗೆ ಸೇರಿಸಿಕೊಂಡಿರಲಿಲ್ಲ: ಸಚಿವ ಸುಧಾಕರ್

ಬೆಂಗಳೂರು: ಕರ್ನಾಟಕದಲ್ಲಿ ಕೋವಿಡ್ -19 ಗೆ ಬಲಿಯಾದ ಎರಡನೇ ವ್ಯಕ್ತಿಯನ್ನು ಹಾಸಿಗೆಗಳ ಕೊರತೆ ಇದ್ದ ಕಾರಣ ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಚೆಸ್ಟ್ ಡಿಸೀಸಸ್  ಆಸ್ಪತ್ರೆಯಿಂದ ಸ್ಥಳಾಂತರಿಸಲಾಗಿತ್ತು ಎಂದು  ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್,ಹೇಳಿದ್ದಾರೆ.

"ಅವರು ಹಿರಿಯ ನಾಗರಿಕರಾಗಿದ್ದು ಆಂಧ್ರದಿಂದ ಗೌರಿಬಿದನೂರಿಗೆ ಪ್ರಯಾಣಿಸಿ ನಂತರ ಬೆಂಗಳೂರಿಗೆ ಬಂದಿದ್ದರು. ಮಧ್ಯಪ್ರಾಚ್ಯಕ್ಕೆ ತೆರಳಿ ಮೆಕ್ಕಾ ಮೊದಲಾದ ಸ್ಥಳಗಳ ಸಂದರ್ಶಿಸಿದ್ದ ಅವರನ್ನು ಆರ್‌ಜಿಐಸಿಡಿಯಲ್ಲಿ ಹಾಸಿಗೆಗಳು ತುಂಬಿದ್ದರಿಂದರಾತ್ರಿ 12 ಗಂಟೆಗೆ ಬೌರಿಂಗ್‌ಗೆ ಸ್ಥಳಾಂತರಿಸಲಾಯಿತು ಮತ್ತು ಬೌರಿಂಗ್ ಆಸ್ಪತ್ರೆಯಲ್ಲಿ ಬೆಳಿಗ್ಗೆ 1 ಗಂಟೆಗೆ ನಿಧನರಾದರು " ಸುಧಾಕರ್ ಹೇಳಿದರು.

ಕರ್ನಾಟಕದಲ್ಲಿ ಪ್ರಕರಣಗಳು ಮಹಾರಾಷ್ಟ್ರ ಹಾಗೂ ಕೇರಳದ ಹೋಲಿಕೆ ಮಾಡಿದರೆ ಹೆಚ್ಚಾಗಿಲ್ಲ. ಆದರೆ ರಾಜ್ಯವು ಈಗಾಗಲೇ ಹಾಸಿಗೆಗಳ ಕೊರತೆಯನ್ನು ಎದುರಿಸುತ್ತಿದೆ. ರೋಗಿಯನ್ನು ಆರ್‌ಜಿಐಸಿಡಿಗೆ ಸ್ಥಳಾಂತರಿಸುವ ಮೊದಲು ಹಾಸಿಗೆಗಳ ಲಭ್ಯತೆಯ ಕೊರತೆಯ ಬಗ್ಗೆ ಅಧಿಕಾರಿಗಳಿಗೆ ಏಕೆ ತಿಳಿದಿರಲಿಲ್ಲ ಎಂಬ ಪ್ರಶ್ನೆಯೂ ಈಗ ಹುಟ್ಟಿಕೊಂಡಿದೆ. ಹಾಸಿಗೆಗಳ ಲಭ್ಯತೆಯನ್ನು ದೃಢಪಡಿಸಿ ರೋಗಿಯನ್ನು ನೇರವಾಗಿ ಬೌರಿಂಗ್‌ಗೆ  ಕರೆದೊಯ್ದಿದ್ದರೂ ಕೂಡ ಅವರ ಪ್ರಾಣ ಉಳಿಯವ ಸಾಧ್ಯತೆ ಇತ್ತು.

ಟ್ರೇಸ್, ಟೆಸ್ಟ್ ಮತ್ತು ಟ್ರೀಟ್ ಮೆಂಟ್ ಎಂಬ ಮೂರು "ಟಿ" ಗಳನ್ನು ಕರ್ನಾಟಕ ಅನುಸರಿಸಲಿದೆ ಎಂದು ಸುಧಾಕರ್ ಹೇಳಿದ್ದಾರೆ. 1,25,000 ಅಂತರರಾಷ್ಟ್ರೀಯ ಪ್ರಯಾಣಿಕರನ್ನು ಈವರೆವಿಗೆ  ಮನೆಯಲ್ಲಿ ಅಥವಾ ರಾಜ್ಯದ ಸಾಮೂಹಿಕ ಸಂಪರ್ಕತಡೆಯನ್ನು ಕೇಂದ್ರಗಳಲ್ಲಿ ನಿರ್ಬಂಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com