ಬೆಂಗಳೂರು: ವಿಮಾನ ಹಾರಾಟ ನಿಷೇಧ-ಮನೆಗೆ ತೆರಳಲಾಗದೆ ಕಾಶ್ಮೀರಿ ವಿದ್ಯಾರ್ಥಿಗಳ ಪರದಾಟ

ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಔಟರ್ ರಿಂಗ್ ರೋಡ್ ನ ಬೆಥೆಲ್ ಮೆಡಿಕಲ್ ಮಿಷನ್ ಕಾಲೇಜಿನ ಸುಮಾರು 45 ಕಾಶ್ಮೀರಿ ವಿದ್ಯಾರ್ಥಿಗಳುಕೆಂಪೆಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ತೆರಳಿದ್ದಾರೆ. ಆದರೆ ಅವರಿಗೆ ಅಲ್ಲಿ ನಿರಾಶೆ ಕಾದಿದೆ. ಶ್ರೀನಗರಕ್ಕೆ ತೆರಳುವ ವಿಮಾನ ರದ್ದಾಗಿರುವ ಮಾಹಿತಿ ಅಲ್ಲಿ ಅವರಿಗೆ ಗೊತ್ತಾಗಿದ್ದು ಮಂಗಳವಾರ ಮಧ್ಯರಾತ್ರಿಯಿಂದ ಮಾರ್ಚ

Published: 26th March 2020 11:34 AM  |   Last Updated: 26th March 2020 11:34 AM   |  A+A-


ಬೆಂಗಳೂರು: ವಿಮಾನ ಹಾರಾಟ ನಿಷೇಧ-ಮನೆಗೆ ತೆರಳಲಾಗದೆ ಕಾಶ್ಮೀರಿ ವಿದ್ಯಾರ್ಥಿಗಳ ಪರದಾಟ

Posted By : Raghavendra Adiga
Source : The New Indian Express

ಬೆಂಗಳೂರು: ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಔಟರ್ ರಿಂಗ್ ರೋಡ್ ನ ಬೆಥೆಲ್ ಮೆಡಿಕಲ್ ಮಿಷನ್ ಕಾಲೇಜಿನ ಸುಮಾರು 45 ಕಾಶ್ಮೀರಿ ವಿದ್ಯಾರ್ಥಿಗಳುಕೆಂಪೆಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ತೆರಳಿದ್ದಾರೆ. ಆದರೆ ಅವರಿಗೆ ಅಲ್ಲಿ ನಿರಾಶೆ ಕಾದಿದೆ. ಶ್ರೀನಗರಕ್ಕೆ ತೆರಳುವ ವಿಮಾನ ರದ್ದಾಗಿರುವ ಮಾಹಿತಿ ಅಲ್ಲಿ ಅವರಿಗೆ ಗೊತ್ತಾಗಿದ್ದು ಮಂಗಳವಾರ ಮಧ್ಯರಾತ್ರಿಯಿಂದ ಮಾರ್ಚ್ 31 ರವರೆಗೆ ಎಲ್ಲಾ ದೇಶೀಯ ವಿಮಾನಯಾನಗಳನ್ನು ಸರ್ಕಾರ ಸ್ಥಗಿತಗೊಳಿಸಿ, ಮಾರ್ಚ್ 26-28ರ ನಡುವೆ ಮನೆಯತ್ತ ಪಯಣಿಸಬೇಕಿದ್ದ ಕಾಶ್ಮೀರಿ ವಿದ್ಯಾರ್ಥಿಗಳನ್ನು ಅತಂತ್ರವಾಗಿಸಿದೆ.

ಮಂಗಳವಾರ ಎರಡು ವಿಮಾನಗಳು ಕಾಶ್ಮೀರಕ್ಕೆ ತೆರಳಬೇಕಿತ್ತು ಎಂದಿರುವ ವಿದ್ಯಾರ್ಥಿಗಳು ಮಾನವೀಯ ಆಧಾರದ ಮೇಲೆ ನಮ್ಮನ್ನು ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಬೇಕಿದೆ ಎಂದು ಅವರು ಹೇಳಿದರು.

ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಿದ ನನ್ನ ಸ್ನೇಹಿತರು ತಮ್ಮ ವಿಮಾನ ರದ್ದಾಗಿರುವುದರಿಂದ ನಾವು ಮನೆಗೆ ತಲುಪಲು ಸಾಧ್ಯವಾಗದ್ಂತಾಗಿದೆ. ಮನೆಗೆ ತೆರಳಲು  ಸಾಧ್ಯವಾಗುವಂತೆ ಒಂದೇ ವಿಮಾನದಲ್ಲಿ ನಮ್ಮೆಲ್ಲರಿಗೂ ಅವಕಾಶ ಕಲ್ಪಿಸಬಹುದಿತ್ತು. ಈಗ ಎಲ್ಲವೂ  ನಿಂತುಹೋಗಿದ್ದು ನಾವೇನು ಮಾಡಬೇಕೆಂದು ತಿಳಿಯುತ್ತಿಲ್ಲ ಎಂದುಇ ಬೆಥೆಲ್  ಮೆಡಿಕಲ್ ಮಿಷನ್ ವಿದ್ಯಾರ್ಥಿ ಆದಿಲ್ ರಹಮಾನ್ ಹೇಳಿದ್ದಾರೆ.

ಇನ್ನೋರ್ವ ವಿದ್ಯಾರ್ಥಿ ಝಾಹಿದ್ ಅಹ್ಮದ್ ಮಲಿಕ್ ಮಂಗಳವಾರ ರಾತ್ರಿ 9.30 ರಿಂದ ಬೆಳಿಗ್ಗೆ 1 ಗಂಟೆಯವರೆಗೆ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದರೂ ಯಾವ ವಿಮಾನವೂ ಬಂದಿಲ್ಲ. ಎಲ್ಲಿಗೆ ಹಿಂತಿರುಗಬೇಕೆಂದು ನಮಗೆ ತಿಳಿದಿಲ್ಲ. ನಮ್ಮ ಕಾಲೇಜು ಪ್ರಾಂಶುಪಾಲರು  ನಮ್ಮನ್ನು ಬೆಂಬಲಿಸಿದ್ದಾರೆ.ಅವರು ನಮ್ಮನ್ನು ಮರಳಿ ಕರೆತರಲು ಕಾಲೇಜು ಬಸ್ ಕಳುಹಿಸಿದರು ಮತ್ತು ಹಾಸ್ಟೆಲ್ನಲ್ಲಿ ಉಳಿಯಲು ಅವಕಾಶ ಕಲ್ಪಿಸಿದ್ದಾರೆ" ಎಂದರು.

“ನಮ್ಮ ಪೋಷಕರು ಭಯಭೀತರಾಗಿದ್ದಾರೆ. ನಮ್ಮ ದೈನಂದಿನ ಅಗತ್ಯಗಳಿಗಾಗಿ ನಮ್ಮಲ್ಲಿ ಸಾಕಷ್ಟು ಹಣವಿಲ್ಲ.ಮನೆಯಲ್ಲೇ ಸುರಕ್ಷಿತವಾಗಿರಿ ಎಂದು ಸರ್ಕಾರ ಹೇಳಿದೆ. ನಾವು ನಮ್ಮ ಮನೆಗಳಿಗೆ ಹಿಂತಿರುಗಲು ಬಯಸಿದ್ದೇವೆ. ಅದಕ್ಕಾಗಿಯೇ ನಾವು 8,000 ರೂ ಪಾವತಿಸಿ ವಿಮಾನದ ಸೀಟು ಕಾಯ್ದಿರಿಸಿದ್ದೇವೆ.  ಈಗ ನಾವು ಹೋಗಲು ಸಾಧ್ಯವಿಲ್ಲ, ”ಆದಿಲ್ ಹೇಳುತ್ತಾರೆ.

ಕಾಶ್ಮೀರಿಗಳ ಯ ಕರೆಗಳನ್ನು ಉದ್ದೇಶಿಸಿ ಮಾತನಾಡುತ್ತಿರುವ ನಾಸಿರ್ ಖುಹೆಮಿ, “ದೆಹಲಿ, ಚಂಡೀಘರ ಬಾಂಗ್ಲಾದೇಶ, ಮಂಗಳೂರುಗಳಲ್ಲಿ ಸಿಲುಕಿರುವ ಅನೇಕ ಜನರ ಬಗ್ಗೆ ನನಗೆ ಕರೆಗಳು ಬರುತ್ತಿವೆ. ಸರ್ಕಾರ ಮುಂದೆ ಬಂದು ಅವರಿಗೆ ಸಹಾಯ ಮಾಡಬೇಕು. ” ಎಂದಿದ್ದಾರೆ.ಮಾರ್ಚ್ 31 ರವರೆಗೆ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗುವುದು ಎಂದು ಬಿಐಎ ಎಲ್ ವಕ್ತಾರರು ತಿಳಿಸಿದ್ದಾರೆ. "ಪ್ರಯಾಣಿಕರು ನಿರ್ದಿಷ್ಟ ವಿವರಗಳಿಗಾಗಿ ತಮ್ಮ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಲು ಕೋರಲಾಗಿದೆ."ವಿಮಾನ ನಿಲ್ದಾಣದ ನೌಕರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಬಿಐಎ ಎಲ್ ಪೋಲೀಸರ ಮೊರೆ ಹೊಕ್ಕಿದೆ.

ಬಿಐಎಎಲ್ತನ್ನ ನೌಕರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಾನೂನು ಜಾರಿ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣದ ಸಮೀಪವಿರುವ ಹಳ್ಳಿಗಳ ನಿವಾಸಿಗಳಿಗೆ ಮನವಿ ಮಾಡಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಸುಮಾರು 6,000 ಉದ್ಯೋಗಿಗಳನ್ನು ಹೊಂದಿದೆ. ಮಂಗಳವಾರದಿಂದ ಮಾರ್ಚ್ 31 ರವರೆಗೆ ಪ್ರಯಾಣಿಕರ ಸಂಚಾರಕ್ಕಾಗಿ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದ್ದರೂ, ಸರಕು ಕಾರ್ಯಾಚರಣೆಗಳ ಮೂಲಕ ಅಗತ್ಯ ವಸ್ತುಗಳ ಸಾಗಣೆ ಮುಂದುವರೆದಿದೆ

Stay up to date on all the latest ರಾಜ್ಯ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp