ಉಡುಪಿ: ದಿನಗೂಲಿಗಾಗಿ ಉತ್ತರ ಕರ್ನಾಟಕದಿಂದ ಬಂದ 400 ಮಂದಿಗೆ ಶಾಸಕ ರಘುಪತಿ ಭಟ್ ಸಹಾಯ ಹಸ್ತ

ಕೊರೋನಾವೈರಸ್ ವಿರುದ್ಧ ಹೋರಾಟದ ಭಾಗವಾಗಿರುವ ಭಾರತ  ಲಾಕ್‌ಡೌನ್‌ನಿಂದಾಗಿ, ಉತ್ತರ ಕರ್ನಾಟಕ ಮೂಲದ 400ಕ್ಕೂ ಹೆಚ್ಚು ಮಂದಿ ಉಡುಪಿಯ ಸಮೀಪದ ಬೀಡಿನಗುಡ್ಡೆಯಲ್ಲಿ ಸಿಲುಕಿದ್ದಾರೆ.ಇದೀಗ ಇಲ್ಲಿನ ಶಾಸಕರಾದ ರಘುಪತಿ ಭಟ್ ಅವರಿಗೆ ನೆರವಿನ  ಹಸ್ತ ಚಾಚಲು ಮುಂದಾಗಿದ್ದಾರೆ..
ರಘುಪತಿ ಭಟ್
ರಘುಪತಿ ಭಟ್

ಉಡುಪಿ: ಕೊರೋನಾವೈರಸ್ ವಿರುದ್ಧ ಹೋರಾಟದ ಭಾಗವಾಗಿರುವ ಭಾರತ  ಲಾಕ್‌ಡೌನ್‌ನಿಂದಾಗಿ, ಉತ್ತರ ಕರ್ನಾಟಕ ಮೂಲದ 400ಕ್ಕೂ ಹೆಚ್ಚು ಮಂದಿ ಉಡುಪಿಯ ಸಮೀಪದ ಬೀಡಿನಗುಡ್ಡೆಯಲ್ಲಿ ಸಿಲುಕಿದ್ದಾರೆ. .ಇದೀಗ ಇಲ್ಲಿನ ಶಾಸಕರಾದ ರಘುಪತಿ ಭಟ್ ಅವರಿಗೆ ನೆರವಿನ  ಹಸ್ತ ಚಾಚಲು ಮುಂದಾಗಿದ್ದಾರೆ..

ಕೊರೋನಾ ಹರಡುವ ಭಯದ ಕಾರಣ ಸಾಂಕ್ರಾಮಿಕ ರೋಗದ ವಿರುದ್ಧ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತದಿಂದ ಜಿಲ್ಲಾ ಗಡಿ ಬಂದ್ ಆಗಿದೆ. ಹಾಗಾಗಿ ಇವರಾರೂ ಊರು ಬಿಟ್ಟು ತೆರಳುವಂತಿಲ್ಲ. 

ಈ ಜನರು ತಮ್ಮ ಟ್ರಕ್‌ಗಳಲ್ಲಿ ಮತ್ತು ಟೆಂಪೊಗಳಲ್ಲಿ ತಮ್ಮತಮ್ಮ ಸ್ಥಳಕ್ಕೆ ತೆರಳಲು ಸಿದ್ದವಾಗಿದ್ದರು ಆದರೆ ಶಿರೂರು ಸಮೀಪ ಜಿಲ್ಲಾ ಗಡಿಯಲ್ಲಿ ಪೋಲೀಸರು ಅವರನ್ನು ತಡೆದಿದ್ದಾರೆ. ಮಾರ್ಚ್ 28 ರ ಶುಕ್ರವಾರ ರಾತ್ರಿ ಕುಂದಾಪುರ ಪೊಲೀಸರು ಅವರಿಗೆ ಆಶ್ರಯ ನೀಡಿ ಆಹಾರ ಪೂರೈಸಿದ್ದಾರೆ.

ಇದೀಗ ಬೀಡಿನಗುಡ್ಡೆಯಲ್ಲಿ ಸಿಲುಕಿಕೊಂಡಿರುವ  ದಿನಗೂಲಿ ಕಾರ್ಮಿಕರಿಗೆ ನೆರವು ನೀಡಲು ಉಡುಪಿ ಶಾಸಕ ಕೆ. ರಘುಪತಿ ಭಟ್ ಮುಂದಾಗಿದ್ದಾರೆ. "ಈ ಜನರೆಲ್ಲರೂ ದಿನಗೂಲಿ ನೌಕರರು. ನಾವು ಅವರಿಗೆ 10 ದಿನಗಳವರೆಗೆ ತರಕಾರಿಗಳು ಮತ್ತು ಆಹಾರ ಧಾನ್ಯಗಳನ್ನು ನೀಡುತ್ತೇವೆ. ಅವರು ಶಿರೂರು ತಲುಪಿದ್ದಾರೆಂದು ನನಗೆ ತಿಳಿದಿರಲಿಲ್ಲ. ಯಾರೊಬ್ಬರೂ ಊಟವಿಲ್ಲದೆ ಸಂಕಟ ಪಡುವ ಅಗತ್ಯವಿಲ್ಲ. ನಾನು ಹಾಗೂ ಉಡುಪಿ ಜನರು ಅವರ ಆಹಾರ ವ್ಯವಸ್ಥೆ ನೋಡಿಕೊಳ್ಳಲಿದ್ದೇವೆ" ಶಾಸಕರು ಹೇಳಿದ್ದಾರೆ.

ಉತ್ತರ ಕರ್ನಾಟಕದಿಂದ ವಲಸೆ ಬಂದ ಕಾರ್ಮಿಕರ ದುಃಸ್ಥಿತಿಗೆ ಪೊಲೀಸರು ಮತ್ತು ಜಿಲ್ಲಾಡಳಿತ ಸ್ಪಂದಿಸಿ ಅವರನ್ನು ಸಂತೈಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com