ಮಿನಿ ಟ್ರಕ್ ಗೆ ಲಾರಿ ಡಿಕ್ಕಿ: ಕೊರೋನಾ ಭೀತಿಯಿಂದ ಊರಿಗೆ ಹಿಂದಿರುಗುತ್ತಿದ್ದ ಏಳು ಮಂದಿ ಕಾರ್ಮಿಕರ ದಾರುಣ ಸಾವು

ಮಿನಿ ಟ್ರಕ್‌ವೊಂದಕ್ಕೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಏಳು ಜನರು ಮೃತಪಟ್ಟಿರುವ ಘಟನೆ ತೆಲಂಗಾಣದ ಶಂಶಾಬಾದ್ ರಿಂಗ್ ರೋಡ್ ಬಳಿ ಶುಕ್ರವಾರ ರಾತ್ರಿ ಸಂಭವಿಸಿದೆ. 
ಮಿನಿ ಟ್ರಕ್ ಗೆ ಲಾರಿ ಡಿಕ್ಕಿ: ಕೊರೋನಾ ಭೀತಿಯಿಂದ ಊರಿಗೆ ಹಿಂದಿರುಗುತ್ತಿದ್ದ ಏಳು ಮಂದಿ ಕಾರ್ಮಿಕರ ದಾರುಣ ಸಾವು
ಮಿನಿ ಟ್ರಕ್ ಗೆ ಲಾರಿ ಡಿಕ್ಕಿ: ಕೊರೋನಾ ಭೀತಿಯಿಂದ ಊರಿಗೆ ಹಿಂದಿರುಗುತ್ತಿದ್ದ ಏಳು ಮಂದಿ ಕಾರ್ಮಿಕರ ದಾರುಣ ಸಾವು

ಬೆಂಗಳೂರು: ಮಿನಿ ಟ್ರಕ್‌ವೊಂದಕ್ಕೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಏಳು ಜನರು ಮೃತಪಟ್ಟಿರುವ ಘಟನೆ ತೆಲಂಗಾಣದ ಶಂಶಾಬಾದ್ ರಿಂಗ್ ರೋಡ್ ಬಳಿ ಶುಕ್ರವಾರ ರಾತ್ರಿ ಸಂಭವಿಸಿದೆ.

ಕರ್ನಾಟಕದ ಸುರಪೂರ ಮೂಲದ ಬಸಮ್ಮ ಸಾಕೀನ್ ಕಕ್ಕೇರಿ, ಹನುಮಂತ ಸಾಕೀನ್ ಕಕ್ಕೇರಿ , ರಾಯದುರ್ಗದ ಶ್ರೀದೇವಿ ಸಾಕೀನ್, ರಂಗಪ್ಪ ರಾಯದುರ್ಗ, ಶರಣಪ್ಪ ರಾಯದುರ್ಗ , ಅಮರಪ್ಪ ರಾಯದುರ್ಗ, ದೇವಗುರ್ಗದ ಕೊಳ್ಳಪ್ಪ ಚಿಂಚರಕಿ ಮೃತ‌ ದುರ್ದೈವಿಗಳು.

ಮಿನಿ ಟ್ರಕ್‌ನಲ್ಲಿ ಪ್ರಯಾಣಿಸುತ್ತಿದ್ದವರು ರಸ್ತೆ ನಿರ್ಮಾಣದ ಕಾರ್ಮಿಕರಾಗಿದ್ದು, ತೆಲಂಗಾಣದ ಸೂರ್ಯಪೇಟೆಯಿಂದ ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿರುವ ತಮ್ಮ ಮನೆಗಳಿಗೆ ಹಿಂದಿರುಗುತ್ತಿದ್ದರು ಎಂದು ತಿಳಿದುಬಂದಿದೆ.

ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ತಮ್ಮ ಊರುಗಳಿಗೆ ವಾಪಸ್ಸಾಗುತ್ತಿದ್ದಾಗ ತೆಲಂಗಾಣ ದ ಶಂಶಾಬಾದ್ ರಿಂಗ್ ರೋಡ್ ನಲ್ಲಿ ರಾಯಚೂರು ಕಡೆಗೆ ಬರುತ್ತಿದ್ದ ವಾಹನ ರಿಪೇರಿಗಾಗಿ ಕೆಟ್ಟು ನಿಂತಿತ್ತು. ಈ ಸಂದರ್ಭದಲ್ಲಿ ವಾಹನ ರಿಪೇರಿ ಮಾಡುತ್ತಿದ್ದಾಗ ಹಿಂದುಗಡೆಯಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ನಾಲ್ಕು ಜನ ಸಾವನ್ನಪ್ಪಿದ್ದು, ಮೂವರು ಉಸ್ಮಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ಘಟನೆಯಲ್ಲಿ ಗಾಯಗೊಂಡಿದ್ದ ನಾಲ್ಕು ಜನರನ್ನು ಉಸ್ಮಾನಿಯಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಶಂಶಾಬಾದ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com