ಕೊರೋನಾ ಎಫೆಕ್ಟ್: ಮೈಸೂರಿನಲ್ಲಿ ಗಗನಕ್ಕೇರಿದ ತರಕಾರಿ ಬೆಲೆ

ಕೊರೋನಾ ವೈರಸ್ ಭೀತಿಯಿಂದಾಗಿ ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ಅಗತ್ಯ ಪ್ರಮಾಣದಲ್ಲಿ ತರಕಾರಿಗಳು ಮಾರುಕಟ್ಟೆಗೆ ಪೂರೈಕೆಯಾಗುತ್ತಿಲ್ಲ, ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ  ಹಣ್ಣು ತರಕಾರಿಗಳ ಬೆಲೆ  ಗಗನಕ್ಕೇರಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: ಕೊರೋನಾ ವೈರಸ್ ಭೀತಿಯಿಂದಾಗಿ ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ಅಗತ್ಯ ಪ್ರಮಾಣದಲ್ಲಿ ತರಕಾರಿಗಳು ಮಾರುಕಟ್ಟೆಗೆ ಪೂರೈಕೆಯಾಗುತ್ತಿಲ್ಲ, ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ  ಹಣ್ಣು ತರಕಾರಿಗಳ ಬೆಲೆ  ಗಗನಕ್ಕೇರಿದೆ.

ಕೃಷಿ ಸೇವೆ ಅತ್ಯವಶ್ಯಕ ಎಂದು ಸರ್ಕಾರ ಹೇಳಿದೆ. ಆದರೆ ವಾಹನಗಳ ಸಂಚಾರ ಇಲ್ಲದ ಕಾರಣ ಮಾರುಕಟ್ಟೆಗ ತರಕಾರಿಗಳನ್ನು ತರುವುದು ದೊಡ್ಡ ಸವಾಲಾಗಿದೆ.  ಹೀಗಾಗಿ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ.

ಡಿಸೆಂಬರ್ ನಲ್ಲಿ  ಕಣ್ಣೀರು ತರಿಸಿದ್ದ ಈರುಳಿಳಿ ಬೆಲೆ ಜನವರಿಯಲ್ಲಿ ಸ್ವಲ್ಪ ಕಡಿಮೆಯಾಗಿತ್ತು,  ಆದರೆ ಲಾಕ್ ಡಾನ್ ಹಿನ್ನೆಲೆಯಲ್ಲಿ  ಮತ್ತು 45-50 ರೂ ಗೆ ಏರಿಕೆಯಾಗಿದೆ. ಈರುಳ್ಳಿ ಮಹಾರಾಷ್ಟ್ರ ಮತ್ತಿತತರ ಕಡೆಯಿಂದ ಸರಬರಾಜಾಗುತ್ತಿತ್ತು, ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.

ಜಿಲ್ಲೆ-ಜಿಲ್ಲೆಗ ನಡುವೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರೇ ಹಣ್ಣು ಮತ್ತು ತರಕಾರಿಗಳ ಬೆಲೆ ಏರಿಕೆಯಾಗುವುದಿಲ್ಲ, ಹಣ್ಣು ತರಕಾರಿ ಕೊಂಡೊಯ್ಯುವ ವಾಹನಗಳಿಗೆ ನಿಷೇಧ ಹೇರುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ ಎಂದು ವ್ಯಾಪಾರಸ್ಛರೊಬ್ಬರು ಹೇಳಿದ್ದಾರೆ.

ಬೇರೆ ತರಕಾರಿ ಅಂಗಡಿಗಳಿಗೆ ಹೋಲಿಸಿದರೇ ಸ ರ್ಕಾರಿ ಸ್ವಾಮ್ಯದ ಹಾಪ್ ಕಾಮ್ಸ್ ಗಳಲ್ಲಿ ಅತಿ ಹೆಚ್ಚಿನ ಬೆಲೆ ಇರುತ್ತದೆ ಎಂದು ಗ್ರಾಹಕರು ಅಭಿಪ್ರಾಯ ಪಟ್ಟಿದ್ದಾರೆ,
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com