ಮಾಸ್ಕ್ ತಯಾರಿಕೆಯಲ್ಲಿ ವಿದ್ಯಾರ್ಥಿಗಳಿಂದ ಸೃಜನಶೀಲತೆ ಬಳಕೆ!

ಈ ನೇಷನ್ ವೈಡ್ ಲಾಕ್‌ಡೌನ್‌ನಲ್ಲಿ, ಮಕ್ಕಳು ತಮಗಾಗಿ ಮಾಸ್ಕ್ ತಯಾರಿಸುವಾಗ ಸೃಜನಶೀಲತೆಯನ್ನು ಬಳಸುತ್ತಾರೆ. ಕ್ರಿಯೇಟಿವ್ ಮೈಂಡ್ಸ್‌ನ ಯುವ, ಪ್ರತಿಭಾವಂತ ಲರ್ನರ್ಸ್ ಗಳು ವೈರಸ್ ಹೋರಾಟದ ಈ ಸಮಯದಲ್ಲಿ ವಿಶಿಷ್ಟವಾದದ್ದನ್ನು ಮಾಡಿದ್ದಾರೆ. 
ಕ್ರಿಯೇಟಿವ್ ಮೈಂಡ್ಸ್‌ನ ಯುವ, ಪ್ರತಿಭಾವಂತ ಲರ್ನರ್ಸ್
ಕ್ರಿಯೇಟಿವ್ ಮೈಂಡ್ಸ್‌ನ ಯುವ, ಪ್ರತಿಭಾವಂತ ಲರ್ನರ್ಸ್

ಬೆಂಗಳೂರು: ಈ ನೇಷನ್ ವೈಡ್ ಲಾಕ್‌ಡೌನ್‌ನಲ್ಲಿ, ಮಕ್ಕಳು ತಮಗಾಗಿ ಮಾಸ್ಕ್ ತಯಾರಿಸುವಾಗ ಸೃಜನಶೀಲತೆಯನ್ನು ಬಳಸುತ್ತಾರೆ. ಕ್ರಿಯೇಟಿವ್ ಮೈಂಡ್ಸ್‌ನ ಯುವ, ಪ್ರತಿಭಾವಂತ ಲರ್ನರ್ಸ್ ಗಳು ವೈರಸ್ ಹೋರಾಟದ ಈ ಸಮಯದಲ್ಲಿ ವಿಶಿಷ್ಟವಾದದ್ದನ್ನು ಮಾಡಿದ್ದಾರೆ. 

ಕ್ರಿಯೇಟಿವ್ ಮೈಂಡ್ಸ್ ಲರ್ನರ್ಸ್, ಕಾಟನ್ ಬಟ್ಟೆ, ಕರವಸ್ತ್ರ, ಟಿಶ್ಯೂ ಪೇಪರ್, ಫ್ಯಾಬ್ರಿಕ್ ಬಟ್ಟೆ ಮುಂತಾದ ಮೂಲಭೂತ ವಸ್ತುಗಳನ್ನು ಬಳಸಿ ತಮ್ಮ ಸುರಕ್ಷತೆಗಾಗಿ ಮಾಸ್ಕ್ ಗಳನ್ನು ತಯಾರಿಸಿದರು. ಈ ಮಾಸ್ಕ್ ಗಳೆಲ್ಲವೂ 5 ವರ್ಷದಿಂದ 10 ವರ್ಷದೊಳಗಿನ ವಿದ್ಯಾರ್ಥಿಗಳಿಂದ ಮಾಡಲ್ಪಟ್ಟಿದೆ. ಮಾಸ್ಕ್ ಗಳ ಕಲ್ಪನೆ ಮತ್ತು ಸೃಜನಶೀಲತೆ ಸಂಪೂರ್ಣವಾಗಿ ಅವರ ಮೆದುಳಿನ ಕೂಸು. ಈ ಸುಂದರವಾದ ಮತ್ತು ಮುದ್ದಾದ ಮಾಸ್ಕ್ ಗಳನ್ನು ತಯಾರಿಸುವ ನವೀನ ಮತ್ತು ಸೃಜನಶೀಲ ಕಲ್ಪನೆಯಲ್ಲಿದ್ದಾಗ, ಅವರು ಯಾವುದೇ ಯೂಟ್ಯೂಬ್ ಅಥವಾ ಇಂಟರ್ನೆಟ್ ಸಹಾಯದಿಂದ ಆಲೋಚನೆಗಳನ್ನು ಪಡೆದಿಲ್ಲ. ಇಂದಿನ ಪೀಳಿಗೆಯ ಯುವ ಮತ್ತು ಪ್ರತಿಭಾವಂತ ಮನಸ್ಸಿನ ಸೌಂದರ್ಯ ಅದು. ಮೂವರು ಲರ್ನರ್ಸ್ ಗಳಾದ 1. ಆರ್ಯವ್ ವಿದ್ಯಾರ್ಥಿ - ವಯಸ್ಸು 7 ವರ್ಷ, 2. ಉತ್ಕರ್ಶ್ - ವಯಸ್ಸು 8 ವರ್ಷ 3. ದೇವಿನಾ ಮಿತ್ರ - ವಯಸ್ಸು 10 ವರ್ಷ, ಮನೆಯಲ್ಲಿ ಲಭ್ಯವಿರುವ ವಸ್ತುಗಳೊಂದಿಗೆ “ಮಾಸ್ಕ್ ವನ್ನು ಹೇಗೆ ತಯಾರಿಸುವುದು” ಎಂಬ ವೀಡಿಯೊವನ್ನು ಸಹ ಮಾಡಿದ್ದಾರೆ. 

ಕ್ರಿಯೇಟಿವ್ ಮೈಂಡ್ಸ್ ಮಾಸ್ಕ್ ಅನ್ನು ತಯಾರಿಸಲು ಮತ್ತು ಸುರಕ್ಷಿತವಾಗಿರಲು ಮಾರ್ಗವನ್ನು ತೋರಿಸುವ ಮೂಲಕ ಸಮಾಜಕ್ಕೆ ಸಹಾಯ ಮಾಡಲು ಬಯಸುತ್ತಾರೆ. ನಮಗೆಲ್ಲರಿಗೂ ತಿಳಿದಿರುವಂತೆ, “ಮಾಸ್ಕ್ ಹೊಸ ಸಾಮಾನ್ಯ” ಜೀವನ ವಿಧಾನ. ಈ ಯುವ ಪ್ರತಿಭೆಗಳಿಂದ, ನಮ್ಮ ದೈನಂದಿನ ದಿನಚರಿಯಲ್ಲಿ ಮಾಸ್ಕ್ ನ ಮಹತ್ವವನ್ನು ತೋರಿಸಲು ಮತ್ತು ಕಲಿಯಲು ನಾವು ನಿಜವಾಗಿಯೂ ಬಯಸುತ್ತೇವೆ. ಇದು ಒಂದು ಆಯ್ಕೆಯಲ್ಲ ಆದರೆ ನಮ್ಮ ಜೀವನದ ಒಂದು ಮುಖ್ಯವಾದ ವಿಷಯವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com