ನಿಖಿಲ್ ಮದುವೆಯಲ್ಲಿ ಲಾಕ್ ಡೌನ್ ಸಂಪೂರ್ಣ ಉಲ್ಲಂಘನೆ: ಹೈಕೋರ್ಟ್ ತಪರಾಕಿ

ಲಾಕ್‌ಡೌನ್ ಕಟ್ಟು ನಿಟ್ಟಿನ ನಿಯಮದ ನಡುವೆ ಸ್ಯಾಂಡಲ್‌ವುಡ್ ನಟ, ಮಾಜಿ ಮುಖ್ಯಮಂತ್ರಿ ಪುತ್ರ ನಿಖಿಲ್ ಕುಮಾರಸ್ವಾಮಿ ಮದುವೆ ವಿವಾದಕ್ಕೆ ಕಾರಣವಾಗಿತ್ತು. ರಾಮನಗರ ಜಿಲ್ಲೆಯಲ್ಲಿ ನಡೆದ ವಿವಾಹ ಮಹತೋತ್ಸವ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಕುರಿತ ವರದಿ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

Published: 06th May 2020 08:35 AM  |   Last Updated: 06th May 2020 08:35 AM   |  A+A-


Revathi and nikhil kumar

ನಿಖಿಲ್ ಮತ್ತು ರೇವತಿ

Posted By : Shilpa D
Source : The New Indian Express

ಬೆಂಗಳೂರು: ಲಾಕ್‌ಡೌನ್ ಕಟ್ಟು ನಿಟ್ಟಿನ ನಿಯಮದ ನಡುವೆ ಸ್ಯಾಂಡಲ್‌ವುಡ್ ನಟ, ಮಾಜಿ ಮುಖ್ಯಮಂತ್ರಿ ಪುತ್ರ ನಿಖಿಲ್ ಕುಮಾರಸ್ವಾಮಿ ಮದುವೆ ವಿವಾದಕ್ಕೆ ಕಾರಣವಾಗಿತ್ತು. ರಾಮನಗರ ಜಿಲ್ಲೆಯಲ್ಲಿ ನಡೆದ ವಿವಾಹ ಮಹತೋತ್ಸವ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಕುರಿತ ವರದಿ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಇದೀಗ ರಾಜ್ಯ ಸರ್ಕಾರ ನಿಖಿಲ್ ಮದುವೆ ವಿಚಾರವಾಗಿ ವಿವರಣೆಯನ್ನು ಹೈಕೋರ್ಟ್‌ಗೆ ಸಲ್ಲಿಸಿದೆ.

ಏ.17ರಂದು ರಾಮನಗರ ಜಿಲ್ಲೆಯ ಕೇತಗಾನಹಳ್ಳಿಯಲ್ಲಿ ನಿಖಿಲ್ ಕುಮಾರಸ್ವಾಮಿ ಮದುವೆ ನಡೆದಿತ್ತು. ಈ ಕುರಿತು ರಾಜ್ಯ ಸರ್ಕಾರದ ವಕೀಲ ವಿಕ್ರಮ್ ಹುಯಿಲ್ಗೊಳ್ ವರದಿ ಸಲ್ಲಿಸಿದ್ದಾರೆ. ನಿಖಿಲ್ ಕುಮಾರಸ್ವಾಮಿ ಮದುವೆಯಲ್ಲಿ 80-95 ಕುಟುಂಬಸ್ಥರು ಭಾಗವಹಿಸಿದ್ದರು. ಮದುವೆಗೆ ರಾಮನಗರ ಡಿಸಿ ಅನುಮತಿ ನೀಡಿದ್ದರು. ಇಷ್ಟೇ ಅಲ್ಲ ಮದುವೆಗೆ ಆಗಮಿಸಿದ ಎಲ್ಲರಿಗೂ ಮಾಸ್ಕ್, ಸ್ಯಾನಿಟೈಸರ್ ವಿತರಿಸಲಾಗಿತ್ತು ಎಂದು ವರದಿಯಲ್ಲಿ ಹೇಳಿದೆ.

ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ಈ ವಿವಾಹದ ಬಗ್ಗೆ  ನಮಗೆ ಕಾಳಜಿಯಿಲ್ಲ, ರಾಜ್ಯ ಮತ್ತು ಕೇಂದ್ರ ಸರ್ಕಾರದ ನೀತಿಯ ಪ್ರಕಾರ 50 ಕ್ಕೂ ಹೆಚ್ಚು ವ್ಯಕ್ತಿಗಳಿಗೆ ಮದುವೆಗೆ ಹಾಜರಾಗಲು ಅನುಮತಿ ನೀಡಿದರೆ ಲಾಕ್‌ಡೌನ್‌ ನಿಯಮ ಉಲ್ಲಂಘನೆಯಾಗಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಬಿ ವಿ ನಾಗರತ್ನ ಅವರ ವಿಭಾಗೀಯ ಪೀಠವು ಯಾವುದೇ ಆಲೋಚನೆಯಿಲ್ಲದೇ ಈ ರೀತಿಯ ಅನುಮತಿ ನೀಡುವುದು ಅಪಾಯಕಾರಿ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

Stay up to date on all the latest ರಾಜ್ಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp