ಕೊಡವ 'ಕೌಟುಂಬಿಕ ಹಾಕಿ' ಪರಂಪರೆಯ ಹರಿಕಾರ ಪಾಂಡಂದ ಕುಟ್ಟಪ್ಪ ನಿಧನ

ಕೊಡಗು ಜಿಲ್ಲೆಯಾದ್ಯಂತ ಕೌಟುಂಬಿಕ ಖಾಕಿ ಪರ್ಕಲ್ಪನೆಯನ್ನು ಹುಟ್ಟುಹಾಕಿದ್ದ ದಂತಕಥೆ ಪಾಂಡಂಡ ಕುಟ್ಟಪ್ಪ (86) ನಿಧನರಾಗಿದ್ದಾರೆ.
ಪಾಂಡಂಡ ಕುಟ್ಟಪ್ಪ
ಪಾಂಡಂಡ ಕುಟ್ಟಪ್ಪ

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಕೌಟುಂಬಿಕ ಖಾಕಿ ಪರ್ಕಲ್ಪನೆಯನ್ನು ಹುಟ್ಟುಹಾಕಿದ್ದ ದಂತಕಥೆ ಪಾಂಡಂಡ ಕುಟ್ಟಪ್ಪ (86) ನಿಧನರಾಗಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕುಟ್ಟಪ್ಪ ಗುರುವಾರ ಬೆಳಿಗ್ಗೆ ಬೆಂಗಳೂರಿನಲ್ಲಿರುವ ತಮ್ಮ ಮಗನ ನಿವಾಸದಲ್ಲಿ ಕೊನೆಯುಸಿರೆಳೆದರು.

 ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿವೃತ್ತ  ಅಧಿಕಾರಿ ಮತ್ತು ಹಾಕಿ ಕ್ರೀಡಾ ಅಭಿಮಾನಿಯಾಗಿದ್ದ ಕುಟ್ಟಪ್ಪ ಅವರನ್ನು ಜನರು ಪ್ರೀತಿಯಿಂದ ಕುಟ್ಟಾನಿ ಎಂದು ಕರೆಯುತ್ತಿದ್ದರು.

1997 ರಲ್ಲಿ ಕೊಡವರಿಗಾಗಿ ಪ್ರತ್ಯೇಕವಾಗಿ ಕೌಟುಂಬಿಕ ಹಾಕಿ ಪಂದ್ಯಾವಳಿಯನ್ನು ಪ್ರಾರಂಭಿಸಿದರು, ಇದು ಹಾಕಿಯ ಬಗ್ಗೆ ಕೊಡವರ ಉತ್ಸಾಹ ಮತ್ತು ಪ್ರೀತಿಯನ್ನು ಹೆಚ್ಚಿಸಿದೆ. ಈ ಅಪರೂಪದ ಪಂದ್ಯಾವಳಿಯಲ್ಲಿ, ವಿವಿಧ  ಕೊಡವ  ಕುಟುಂಬಗಳ (ಕುಲಗಳು) ಸದಸ್ಯರುಬಾಗವಹಿಸುತ್ತಾರೆ.  ಈ ವೇದಿಕೆಯ ಮೂಲಕ, ಕುಟ್ಟಪ್ಪ 200 ಕ್ಕೂ ಹೆಚ್ಚು ಕುಟುಂಬಗಳನ್ನು ಒಂದೇ ಸೂರಿನಡಿ ತಂದಿದ್ದರು. 

ಕ್ರೀಡೆಗಳನ್ನು ಬಳಸಿಕೊಂಡು ನೂರಾರು ಕೊಡವ ಕುಲಗಳ ನಡುವೆ ಪ್ರೀತಿ, ಸಹೋದರತ್ವವನ್ನು ಬೆಳೆಸುವಲ್ಲಿ ಯಶಸ್ವಿಯಾದ ವ್ಯಕ್ತಿ ಕುಟ್ಟಪ್ಪ ಅವರ ಅಗಲಿಕೆಗೆ ಇಡೀ ಜಿಲ್ಲೆಯ ಜನಸಂತಾಪ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com