ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಹೊರ ವಿಭಾಗ ರೋಗಿಗಳ ಮಾಹಿತಿ ಹಂಚಿಕೊಳ್ಳುವಲ್ಲಿ ವಿಳಂಬ: ಸಮನ್ವಯ ಕೊರತೆ

ಭಟ್ಕಳದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗಿರುವುದನ್ನು ಕಂಡರೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಮತ್ತು ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲಾಡಳಿತಗಳ ನಡುವೆ ಸಮನ್ವಯ ಕೊರತೆ ಎದ್ದು ಕಾಣುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಗಳೂರು:ಭಟ್ಕಳದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗಿರುವುದನ್ನು ಕಂಡರೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಮತ್ತು ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲಾಡಳಿತಗಳ ನಡುವೆ ಸಮನ್ವಯ ಕೊರತೆ ಎದ್ದು ಕಾಣುತ್ತಿದೆ.

ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ(ಎಫ್ಎನ್ಎಚ್) ಕೊರೋನಾ ಕೇಸುಗಳು ಹೆಚ್ಚಾಗುತ್ತಿದ್ದರೂ ದಕ್ಷಿಣ ಕನ್ನಡ ಜಿಲ್ಲಾಡಳಿತ ಹೊರವಿಭಾಗದ ರೋಗಿಗಳ ಮಾಹಿತಿಗಳನ್ನು ಉತ್ತರ ಕನ್ನಡ ಜಿಲ್ಲಾಡಳಿತದೊಂದಿಗೆ ಹಂಚಿಕೊಳ್ಳುವಲ್ಲಿ ಯಾವುದೇ ಆಸಕ್ತಿ ಮತ್ತು ತುರ್ತು ತೋರಿಸದ್ದು ಕೊರೋನಾ ಪ್ರಕರಣಗಳು ಹೆಚ್ಚಾಗುವಲ್ಲಿ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.

ಕಳೆದ ಏಪ್ರಿಲ್ 20ರಂದು ಭಟ್ಕಳದ ದಂಪತಿ ತಮ್ಮ 5 ತಿಂಗಳ ಮಗುವಿಗೆ ಚಿಕಿತ್ಸೆಗೆಂದು ಹೋಗಿದ್ದರು. ಅದಾಗಿ ಮೂರು ದಿನಗಳು ಕಳೆದ ನಂತರ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಮೊದಲ ಕೊರೋನಾ ಸೋಂಕು ಕಾಣಿಸಿಕೊಂಡು 78 ವರ್ಷದ ವೃದ್ಧ ಮೃತಪಟ್ಟರು. ಕೂಡಲೇ ದಕ್ಷಿಣ ಕನ್ನಡ ಜಿಲ್ಲಾಡಳಿತ ಉತ್ತರ ಕನ್ನಡ ಜಿಲ್ಲೆಯ ಆಸ್ಪತ್ರೆಗಳಲ್ಲಿ ಹೊರ ವಿಭಾಗದ ರೋಗಿಗಳಿಗೆ ಎಚ್ಚರಿಕೆ ನೀಡಿ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ಅಥವಾ ಕಡ್ಡಾಯವಾಗಿ ಕ್ವಾರಂಟೈನ್ ಗೆ ಒಳಪಡುವಂತೆ ಹೇಳಬಹುದಾಗಿತ್ತು. ಆದರೆ ಒಪಿಡಿ ವಿಭಾಗದ ರೋಗಿಗಳ ಬಗ್ಗೆ ಮಾಹಿತಿ, ವಿವರಗಳನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಉತ್ತರ ಕನ್ನಡ ಜಿಲ್ಲಾಡಳಿತದೊಂದಿಗೆ ಹಂಚಿಕೊಂಡಿದ್ದು 12 ದಿನ ಕಳೆದ ನಂತರ.

ಜಿಲ್ಲಾಡಳಿತದೊಂದಿಗೆ ಮಾಹಿತಿ ಸಂಗ್ರಹಿಸುವಲ್ಲಿ ಯಾವುದೇ ವಿಳಂಬ ತಮ್ಮ ಕಡೆಯಿಂದ ಆಗಿಲ್ಲ ಎಂದು ಎಫ್ಎನ್ಎಚ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಶೆಟ್ಟಿ ಹೇಳುತ್ತಾರೆ. ಕಳೆದ ಫೆಬ್ರವರಿ 1ರಿಂದಲೇ ತಾವು ದಿನಂಪ್ರತಿ ಹೀಗೆ ಮಾಡುತ್ತಿದ್ದೇವೆ ಎಂದರು.
ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ಆರ್ ರೂಪೇಶ್, ಒಪಿಡಿ ರೋಗಿಗಳ ಅಂಕಿಅಂಶ ಪಡೆಯಲು ಸಮಯ ಹಿಡಿಯಿತು, ಪ್ರಕ್ರಿಯೆ ಏಪ್ರಿಲ್ 23ರಂದು ಆರಂಭವಾಯಿತು ಎಂದರು.

ಇನ್ನೊಂದೆಡೆ ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ಮಗುವನ್ನು ಯಾವ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಲಾಗಿತ್ತು ಎಂದು ಮಾಹಿತಿಯಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com