ಸಿಸಿಬಿ
ಸಿಸಿಬಿ

ಸಿಗರೇಟ್  ಲಂಚ ಪ್ರಕರಣ: ಸಿಸಿಬಿ ಅಧಿಕಾರಿಗಳ ವಿರುದ್ಧ ಎಫ್​ಐಆರ್ ದಾಖಲು

ಸಿಗರೇಟ್ ವ್ಯಾಪಾರಿಗಳಿಂದ ಲಂಚ ಪಡೆದ ಆರೋಪದ ಹಿನ್ನೆಲೆ ಮೂವರು ಸಿಸಿಬಿ ಅಧಿಕಾರಿಗಳ ವಿರುದ್ಧ ಎಫ್​ಐಆರ್ ದಾಖಲಾಗಿದೆ. 

ಬೆಂಗಳೂರು: ಸಿಗರೇಟ್ ವ್ಯಾಪಾರಿಗಳಿಂದ ಲಂಚ ಪಡೆದ ಆರೋಪದ ಹಿನ್ನೆಲೆ ಮೂವರು ಸಿಸಿಬಿ ಅಧಿಕಾರಿಗಳ ವಿರುದ್ಧ ಎಫ್​ಐಆರ್ ದಾಖಲಾಗಿದೆ. 

ಎಸಿಪಿ ಪ್ರಭುಶಂಕರ್, ಇನ್​ಸ್ಪೆಕ್ಟರ್​ಗಳಾದ ಅಜಯ್ ಹಾಗೂ ನಿರಂಜನ್ ಅವರುಗಳ ವಿರುದ್ಧ ನಗರದ ಕಾಟನ್ ಪೇಟೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸಿಗರೇಟ್ ವ್ಯಾಪಾರಿ ಆದಿಲ್ ಎಂಬಾತನ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೋಲೀಸರು ತನಿಖೆ ನಡೆಸಿದ್ದು ಈ ವೇಳೆ ಸಿಗರೇಟ್ ವ್ಯಾಪಾರಿಗಳಿಂದ ಲಂಚ ಸ್ವೀಕರಿಸಿರುವುದು  ಸಾಬೀತಾಗಿದೆ. ಇದಾದ ನಂತರ ಅವರನ್ನು ಅಮಾನತು ಮಾಡಲಾಗಿತ್ತು. ಆರೋಪಿಗಳ ಬಳಿ ಇದ್ದ 30 ಲಕ್ಷ ರು. ಹಣ ಸಹ ವಶಕ್ಕೆ ಪಡೆಯಲಾಗಿದ್ದು ಇದೀಗ ಅವರುಗಳನ್ನು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.  

ಈ ನಡುವೆ ಪ್ರಕರಣದ ಸಂಬಂಧ ಗೆ ಡಿಜಿ ಮತ್ತು ಐಜಿ ಪ್ರವೀಣ್‌ ಸೂದ್‌ ಅವರಿಗೂ ವರದಿ ನೀಡಲಾಗಿದೆ. ಲಾಕ್‌ಡೌನ್‌ ವೇಳೆ ಸಿಗರೇಟ್ ವ್ಯಾಪಾರಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತೇವೆ ಎಂಬ ಭರವಸೆಯೊಡನೆ ಲಂಚ ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿದೆ. 

Related Stories

No stories found.

Advertisement

X
Kannada Prabha
www.kannadaprabha.com