ಈ ಎರಡು ಕಾರಣಗಳಿಂದಾಗಿ ಮಾಜಿ ಭೂಗತ ದೊರೆ ಮುತ್ತಪ್ಪ ರೈ ತವರಿಗೆ ಮರಳಿದ್ದು!

ವಿಜಯ ಬ್ಯಾಂಕ್ ನಲ್ಲಿ ಸಾಮಾನ್ಯ ಕ್ಲರ್ಕ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ ನೆಟ್ಟಾಲ ಮುತ್ತಪ್ಪ ರೈ 1980 ರಲ್ಲಿ ಭೂಗತ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು.

Published: 16th May 2020 09:06 AM  |   Last Updated: 16th May 2020 02:27 PM   |  A+A-


Mutthappa rai

ಮುತ್ತಪ್ಪ ರೈ

Posted By : Shilpa D
Source : The New Indian Express

ಮಂಗಳೂರು: ವಿಜಯ ಬ್ಯಾಂಕ್ ನಲ್ಲಿ ಸಾಮಾನ್ಯ ಕ್ಲರ್ಕ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ ನೆಟ್ಟಾಲ ಮುತ್ತಪ್ಪ ರೈ 1980 ರಲ್ಲಿ ಭೂಗತ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು.

ಅದಾದ ನಂತರ ಬೆಂಗಳೂರು,ದುಬೈ, ಮುಂಬೈ ಗಳಲ್ಲಿ ಅನೇಕ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದ್ದರು. ಭೂಗತ ದೊರೆಯಾಗಿ ಮೆರೆಯುತ್ತಿದ್ದರೂ ತವರಿನ ನಂಟನ್ನು ಮರೆತಿರಲಿಲ್ಲ,  ತಮ್ಮ ಮನೆ ದೇವರು ಪುತ್ತೂರಿನ  ಮಹಾಲಿಂಗೇಶ್ವರ ದೇವಾಲಯ ಮತ್ತು ಅಲ್ಲಿ ನಡೆಯುವ ಕಂಬಳಕ್ಕಾಗಿ ವರ್ಷಕ್ಕೊಮ್ಮೆ ತವರಿಗೆ ಭೇಟಿ ನೀಡುತ್ತಿದ್ದರು.

68 ವರ್ಷದ ಮುತ್ತಪ್ಪ ರೈ ಕ್ಯಾನ್ಸರ್ ನಿಂದಾಗಿ ಶುಕ್ರವಾರ ನಿಧನರಾದರು, ಬಿಡದಿಯಲ್ಲಿ ಅವರ ಅಂತ್ಯಕ್ರಿಯೆ ನೆರವೇರಿಸಲಾಗಿದೆ, 2008 ರಲ್ಲಿ ಜಯ ಕರ್ನಾಟಕ ಸಂಘಟನೆ ಸ್ಥಾಪಿಸಿದ ಮುತ್ತಪ್ಪ ರೈ ಪತ್ನಿ ಮತ್ತು ಮಕ್ಕಳನ್ನು ಅಗಲಿದ್ದಾರೆ, 

ಅಪರಾಧ ಜಗತ್ತನ್ನು 15 ವರ್ಷಗಳ ಹಿಂದೆ ತೊರೆದ ರೈ,ಕಂಬಳ ಕ್ರೀಡೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದರು., ಅನಾರೋಗ್ಯದ ಕಾರಣ ಈ ವರ್ಷ ಕಂಬಳಕ್ಕೆ ಬರಲು ಸಾಧ್ಯವಾಗಿರಲಿಲ್ಲ,  ಕಳೆದ ಕೆಲವು ವರ್ಷಗಳಿಂದ ವರ್ಷದಲ್ಲಿ ಒಮ್ಮೆಯಾದರೂ  ಮಹಾಲಿಂಗೇಶ್ವರ ದೇವಾಲಯಕ್ಕೆ ಭೇಟಿ ನೀಡುತ್ತಿದ್ದರು. ವಿವಿಧ ದೇವಾಲಯಗಳಿಗೆ ಮತ್ತು  ದೇಣಿಗೆ ನೀಡಿದ್ದರು,

ಮಹತೋಬಾರ ಕುಕ್ಕೆ ಸುಬ್ರಮಣ್ಯ ದೇವಾಲಯಕ್ಕೆ 2.5 ಕೋಟಿ ರು ಮೌಲ್ಯದ ರಥವನ್ನು ನೀಡಿದ್ದರು, ರೈ ಅವರು ಕರಾವಳಿ ಭಾಗದ ಜನರಿಗೆ ಹೆಚ್ಚಿನ ಸಹಾಯ ಮಾಡುತ್ತಿದ್ದರು.   ವಿಶೇಷವಾಗಿ ಜಮೀನು ವಿವಾದಕ್ಕೆ ಸಂಬಂಧಿಸಿದ ವಿಷಯಗಳಿಗೆ ಸಂಬಂಧಿಸಿದಂತೆ ಸಹಾಯ ಮಾಡಿದ್ದರು..

ವಿದ್ಯಾರ್ಥಿ ಜೀವನದಲ್ಲಿದ್ದಾಗಲೇ ರೈ ಅಪರಾಧ ಲೋಕಕ್ಕೆ ಕಾಲಿಟ್ಟಿದ್ದರು. ರಾಜಕೀಯಕ್ಕೆ ಕಾಲಿಡುವಂತೆ ಅವರ ಬೆಂಬಲಿಗರು ಒತ್ತಡ ಹೇರಿದ್ದರು.ಆದರೆ ಅವರ ಈ ಆಸೆ ಎಂದಿಗೂ ನೆರವೇರಲಿಲ್ಲ. ರೈ ಸಾವಿನಿಂದ ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಸ್ಥಾನ ತೆರವಾಗಿದ್ದು ಡಿಸಿಎಂ ಅಶ್ವತ್ಥ ನಾರಾಯಣ ಆ ಹುದ್ದೆಯ ಪ್ರಮುಖ ಆಕಾಂಕ್ಷಿಯಾಗಿದ್ದಾರೆ ಎಂದು ಕಂಬಳ ಆಯೋಜಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.

Stay up to date on all the latest ರಾಜ್ಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp