ಹೆಚ್ಚು ಸಂಖ್ಯೆಯಲ್ಲಿ ರಸ್ತೆಗಿಳಿಯದ ಬಿಎಂಟಿಸಿ: ಪ್ರಯಾಣಿಕರ ಪರದಾಟ

ಮಂಗಳವಾರದಿಂದ ಬಿಎಂಟಿಸಿ ಪಾಸ್ ದರವನ್ನು ತಗ್ಗಿಸಿ ಟಿಕೆಟ್ ವ್ಯವಸ್ಥೆ ಮಾಡಿದೆಯಾದರೂ ಸಮರ್ಪಕ ಬಸ್‌ಗಳನ್ನು ಮಾತ್ರ ಪೂರೈಸಿಲ್ಲ‌. ಬಸ್‌ಗಳ ಕೊರತೆಯಿಂದ ಪ್ರಯಾಣಿಕರು ಪರದಾಡುತ್ತಿದ್ದ ದೃಶ್ಯ ನಗರದೆಲ್ಲೆಡೆ ಇಂದು ಕಂಡುಬಂತು.

Published: 26th May 2020 03:39 PM  |   Last Updated: 26th May 2020 03:39 PM   |  A+A-


ಬಿಎಂಟಿಸಿ ಬಸ್ಸು

Posted By : raghavendra
Source : UNI

ಬೆಂಗಳೂರು: ಮಂಗಳವಾರದಿಂದ ಬಿಎಂಟಿಸಿ ಪಾಸ್ ದರವನ್ನು ತಗ್ಗಿಸಿ ಟಿಕೆಟ್ ವ್ಯವಸ್ಥೆ ಮಾಡಿದೆಯಾದರೂ ಸಮರ್ಪಕ ಬಸ್‌ಗಳನ್ನು ಮಾತ್ರ ಪೂರೈಸಿಲ್ಲ‌. ಬಸ್‌ಗಳ ಕೊರತೆಯಿಂದ ಪ್ರಯಾಣಿಕರು ಪರದಾಡುತ್ತಿದ್ದ ದೃಶ್ಯ ನಗರದೆಲ್ಲೆಡೆ ಇಂದು ಕಂಡುಬಂತು.

ಮತ್ತೊಂದೆಡೆ ಸಂದರ್ಭದ ಲಾಭ ಪಡೆದ ಕೆಲ ಆಟೋ ಚಾಲಕರು ಸಾಮಾಜಿಕ ಅಂತರ ನಿಯಮವನ್ನು ಪಾಲಿಸದೇ ಪ್ರಯಾಣಿಕರನ್ನು ಬೇಕಾಬಿಟ್ಟಿ ತುಂಬಿಸಿಕೊಂಡು ಹೆಚ್ಚುಹಣ ಪೀಕಿಸುತ್ತಿದ್ದರು.

ದಿನನಿತ್ಯದ ಕೆಲಸಗಳಿಗೆ ತೆರಳಲು ಜನರು ಬಿಎಂಟಿಸಿ ಬಸ್ ಕೊರತೆಯಿಂದಾಗಿ ಪರದಾಡಿದರು. ರಾಷ್ಟ್ರೀಯ ಹೆದ್ದಾರಿ 4 ಬೆಂಗಳೂರಿನ 8ಮೈಲಿಯಲ್ಲಿ ಜನ ಸಾಮಾನ್ಯರ ಪರದಾಟ ಹೆಚ್ಚಾಗಿತ್ತು. 

ಇನ್ನು ಬಹುತೇಕ ಜನರು ತಮ್ಮ ತಮ್ಮ ವಾಹನಗಳಲ್ಲಿ ಕೆಲಸ ಕಾರ್ಯಗಳಿಗೆ ತೆರಳಿದರು. ಹೀಗೆ ಖಾಸಗಿ ವಾಹನ ಬಳಸುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಸಂಚಾರ ಹೆಚ್ಚಾಗಿತ್ತು. 

ಇನ್ನು ಸಂಚರಿಸುವ ಒಂದೆರಡು ಬಸ್ಸುಗಳು ನಿಲ್ದಾಣಗಳಲ್ಲಿ ನಿಲ್ಲಿಸುತ್ತಿಲ್ಲ ಎಂದು ಪ್ರಯಾಣಿಕರು ಗೋಗರೆದರು. ಕೆಲವು ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿತ್ತು.

ಬಸ್ಸುಗಳ ಸಂಖ್ಯೆ ಕಡಿಮೆಯಿದ್ದ ಕಾರಣ ಪ್ರಯಾಣಿಕರು ಆಟೋಗಳತ್ತ ಮುಖ ಮಾಡುತ್ತಿರುವುದು ಸಾಮಾನ್ಯವಾಗಿತ್ತು. ಆಟೋಗಳಲ್ಲಿ ಹಣಗಳಿಕೆ ಉದ್ದೇಶದಿಂದ ಸಾಮಾಜಿಕ ಅಂತರ ಮಾಯವಾಗಿ ಒಂದು ಅಟೋದಲ್ಲಿ ಮೂವರು ನಾಲ್ಕು ಜನರು ಪ್ರಯಾಣಿಸಿದರು.

ಇನ್ನು ನಗರದ ಮುಖ್ಯ ಕೇಂದ್ರ ಕೆ.ಆರ್.ಮಾರುಕಟ್ಟೆ ಯಲ್ಲಿಯೂ ಬಿಎಂಟಿಸಿ ಬಸ್ ಗಳಿಗಾಗಿ ಜನರ ಪರದಾಡಿದರು. ಬೆರಳೆಣಿಕೆಯಷ್ಟು ಬಸ್ ಗಳು ಮಾತ್ರ ಮಾರ್ಕೆಟ್ ನಿಂದ ಸಂಚರಿಸಿದ್ದರಿಂದ ಬಸ್‌ಗಾಗಿ ಪ್ರಯಾಣಿಕರು ಕಾದುಕುಳಿತರು. ಬೆಳಗ್ಗೆಯಿಂದ ಬೆರಳೆಣಿಕೆಯಷ್ಟು ಮಾರ್ಗಗಳಿಗೆ ಮಾರ್ಕೆಟ್ ನಿಂದ ಬಸ್ ಸಂಚಾರವಿತ್ತು ಇನ್ನು ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ‌. ಸೋಮವಾರದವರೆಗೆ ಎರಡು ಸಾವಿರ ಬಸ್ ಸಂಚಾರವಿತ್ತು. ಆದರೆ ಪ್ರಯಾಣಿಕರ ನಿರುತ್ಸಾಹದಿಂದ ಕಡಿಮೆ ಬಸ್‌ ಸಂಚಾರವಿತ್ತು‌. ಬಸ್ ದರ ಪರಿಷ್ಕಾರದ ನಂತರ ಮಂಗಳವಾರದಿಂದ ಬಸ್ ಸಂಖ್ಯೆಯಲ್ಲಿ‌ ಹೆಚ್ಚಳವಾಗಿದ್ದು,1500 ಸಾವಿರ ಬಿಎಂಟಿಸ್ ಬಸ್ ಸೇವೆ ಹೆಚ್ಚಳವಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳೊಬ್ಬರು ಮಾಹಿತಿ ನೀಡಿದ್ದಾರೆ.

ಬಸ್‌ ಕೊರತೆ ಸಮಸ್ಯೆ ಗಮನಕ್ಕೆ ಬಂದಿದೆ, ಇಂದೇ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಭರವಸೆ ನೀಡಿದ್ದಾರೆ.


Stay up to date on all the latest ರಾಜ್ಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp