ರಾಜ್ಯದ ಬಡವರಿಗೆ ಮತ್ತಷ್ಟು ಅನ್ಯಾಯ: ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸಿಗುತ್ತಿಲ್ಲ ಸಂಪೂರ್ಣ ಧಾನ್ಯ

ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಸಂಪೂರ್ಣವಾದ ಪ್ರಮಾಣದ ಪಡಿತರ ಧಾನ್ಯ ಸಿಗುತ್ತಿಲ್ಲ. ಎಷ್ಟೋ ಕುಟುಂಬಗಳಿಗೆ 15 ಕೆಜಿ ಪಡಿತರ ಧಾನ್ಯ ಸಿಗುತ್ತಿಲ್ಲ,
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಸಂಪೂರ್ಣವಾದ ಪ್ರಮಾಣದ ಪಡಿತರ ಧಾನ್ಯ ಸಿಗುತ್ತಿಲ್ಲ. ಎಷ್ಟೋ ಕುಟುಂಬಗಳಿಗೆ 15 ಕೆಜಿ ಪಡಿತರ ಧಾನ್ಯ ಸಿಗುತ್ತಿಲ್ಲ,

ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ವ್ಯಕ್ತಿಯೊಬ್ಬರಿಗೆ ತಿಂಗಳಿಗೆ 5 ಕೆಜಿ ಮತ್ತು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ 10 ಕೆಜಿ ಅಕ್ಕಿ, ಗೋಧಿ ಮತ್ತು ಇತರೆ ಧಾನ್ಯಗಳನ್ನು ನೀಡಬೇಕು. 

ಲಾಕ್ ಡೌನ್ ಅವಧಿಯಲ್ಲಿ ಕರ್ನಾಟಕಕ್ಕೆ ನಾವು 11.8 ಲಕ್ಷ ಟನ್ ಆಹಾರ ಧಾನ್ಯ ಮತ್ತು ಆಹಾರ ಭದ್ರತಾ ಕಾಯ್ದೆಯಡಿ 3.81 ಲಕ್ಷ ಪ್ರಧಾನ ಮಂತ್ರಿಯೋಜನೆಯಡಿ 9.81 ಲಕ್ಷ ಟನ್ ಆಹಾರ ಧಾನ್ಯ ಪೂರೈಸಿದ್ದೇವೆ ಎಂದು ಆಹಾರ ನಿಗಮ ಅಧ್ಯಕ್ಷ ಡಿವಿ ಪ್ರಸಾದ್ ಹೇಳಿದ್ದಾರೆ. 10 ಕೆಜಿ ಅಕ್ಕಿ ಮತ್ತು 1 ಕೆಜಿ ತೊಗರಿ ಬೇಳೆ ನೀಡುತ್ತಿರುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.

ಏಪ್ರಿಲ್ ತಿಂಗಳಲ್ಲಿ  10 ಕೆಜಿ ಅಕ್ಕಿ ಮತ್ತು ನಾಲ್ಕು ಕೆಜಿ ಗೋದಿ ನೀಡಿದ್ದೇವು. ಜೂನ್ ತಿಂಗಳಿಂದ 10 ಕೆಜಿ ಅಕ್ಕಿ 2ಕೆಜಿ ತೊಗರಿ ಬೇಳೆ,2 ಕೆಜಿ ಗೋದಿ ನೀಡಲಿದ್ದೇವೆ. ಆದರೆ ಈ ಅಂಕಿ ಅಂಶಗಳು ಅನೇಕ ಸ್ಥಳಗಳಲ್ಲಿ ಆಹಾರ ಧಾನ್ಯಗಳ ವಿತರಣೆಯಲ್ಲಿ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.

ಆಧಾರ್ ಕಾರ್ಡ್ ಹೊಂದಿರುವವರಿಗೆ ಉಳಿದ ಐದು ಕೆಜಿ ಪಡಿತರ ಸಿಗುತ್ತಿಲ್ಲ ಎಂದು ಕೆಲಸವರು ಆರೋಪಿಸಿದ್ದಾರೆ.  ತಾವು ಹಲವು ಪಡಿತರ ಅಂಗಡಿಗೆ ಭೇಟಿ ನೀಡಿದ್ದು, ಕೆಲವರಿಗೆ ಪೂರ್ಣ ಪ್ರಮಾಣದ ಪಡಿತರ ಸಿಗುತ್ತಿಲ್ಲ ಎಂದು ಶಾಂತಿನಗರ ಶಾಸಕ  ಎನ್ ಎ ಹ್ಯಾರಿಸ್ ಹೇಳಿದ್ದಾರೆ. ನನ್ನ ಕ್ಷೇತ್ರದಲ್ಲಿ 40 ಸಾವಿರ ಕಾರ್ಡ್ ಹೊಂದಿರುವವರಿದ್ದಾರೆ. ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸಂಪೂರ್ಣ ಪ್ರಮಾಣದ ಆಹಾರ ಪಡಿತರ ಹೊಂದುವ  ಹಕ್ಕು ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ..

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com