ಗದಗ-ಹೊಟ್ಗಿ ರೈಲ್ವೆ ಹಳಿ ತಪಾಸಣೆ ಪೂರ್ಣ, ಸದ್ಯಕ್ಕೆ ಬಳಕೆಗೆ ಮುಕ್ತವಿಲ್ಲ

ನೈರುತ್ಯ ರೈಲ್ವೆ ವಲಯದ ಲಚ್ಯನ್ ಮತ್ತು ಕೇಂದ್ರ ರೈಲ್ವೆಯ ಹೊಟ್ಗಿಯ ಮಧ್ಯೆ 33 ಕಿಲೋ ಮೀಟರ್ ಉದ್ದದ ರೈಲ್ವೆ ಹಳಿ ಕಾಮಗಾರಿಯನ್ನು ರೈಲು ಸುರಕ್ಷತಾ ಆಯುಕ್ತರು ಪರಿಶೀಲಿಸಿದ್ದಾರೆ. ಈ ರೈಲ್ವೆ ಹಳಿ ಭೀಮಾ ಸೇತುವೆ ಮೂಲಕ ಹಾದುಹೋಗುತ್ತದೆ.
ಭೀಮಾ ನದಿ ಮೇಲೆ 33 ಕಿ ಮೀ ಉದ್ದದ ಸೇತುವೆ ಹಳಿ
ಭೀಮಾ ನದಿ ಮೇಲೆ 33 ಕಿ ಮೀ ಉದ್ದದ ಸೇತುವೆ ಹಳಿ

ಬೆಂಗಳೂರು: ನೈರುತ್ಯ ರೈಲ್ವೆ ವಲಯದ ಲಚ್ಯನ್ ಮತ್ತು ಕೇಂದ್ರ ರೈಲ್ವೆಯ ಹೊಟ್ಗಿಯ ಮಧ್ಯೆ 33 ಕಿಲೋ ಮೀಟರ್ ಉದ್ದದ ರೈಲ್ವೆ ಹಳಿ ಕಾಮಗಾರಿಯನ್ನು ರೈಲು ಸುರಕ್ಷತಾ ಆಯುಕ್ತರು ಪರಿಶೀಲಿಸಿದ್ದಾರೆ. ಈ ರೈಲ್ವೆ ಹಳಿ ಭೀಮಾ ನದಿ ಸೇತುವೆ ಮೂಲಕ ಹಾದುಹೋಗುತ್ತದೆ.

ಕೊರೋನಾ ಸೋಂಕಿನಿಂದಾಗಿ ಕೇಂದ್ರ ರೈಲ್ವೆಯಿಂದ ಮರು ಆಧುನೀಕರಣ ಕಾಮಗಾರಿ ಪೂರ್ಣಗೊಂಡಿಲ್ಲ. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ನೈರುತ್ಯ ರೈಲ್ವೆಯ ಮುಖ್ಯ ಆಡಳಿತಾಧಿಕಾರಿ ಕೆ ಸಿ ಸ್ವಾಮಿ, ಹೊಟ್ಗಿ-ಕುಡ್ಗಿ-ಗದಗ ಮಧ್ಯೆ 284 ಕಿಲೋ ಮೀಟರ್ ಉದ್ದದ ಯೋಜನೆಯಿದು. ಭೀಮಾ ನದಿ ಸೇತುವೆ ಕರ್ನಾಟಕ ಮತ್ತು ಮಹಾರಾಷ್ಟ್ರವನ್ನು ಸಂಪರ್ಕಿಸುತ್ತದೆ, ಈ ಯೋಜನೆ ಕೂಡ ನೈರುತ್ಯ ರೈಲ್ವೆ ಮೂಲಕ ಸಾಗುತ್ತದೆ. ಸೇತುವೆ ಮೇಲೆ ಒಂದು ರೈಲ್ವೆ ಹಳಿ ಸಿದ್ದವಾಗಿದೆ ಎಂದರು.

ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಒಪ್ಪಿಗೆ ಸಿಗುವುದು ಕೇಂದ್ರ ರೈಲ್ವೆಯ ಮರುರೂಪಿಸುವಿಕೆಯನ್ನು ಪೂರ್ಣಗೊಳಿಸುವುದರ ಮೇಲೆ ಅವಲಂಬಿತವಾಗಿರುತ್ತದೆ. ಕೊರೋನಾ ವೈರಸ್ ಬಿಕ್ಕಟ್ಟಿನಿಂದಾಗಿ ಕಾರ್ಯಪಡೆಯು ಕೆಲಸಕ್ಕೆ ಮುಂದುವರಿಯಲು ಸಾಧ್ಯವಾಗಲಿಲ್ಲ. ನಮ್ಮ ಕಡೆಯಿಂದ ನಾವು ಸಿದ್ಧರಿದ್ದರೂ, ಕಾರ್ಯಾರಂಭವು ಅಂಗಳವನ್ನು ಪೂರ್ಣಗೊಳಿಸುವುದರ ಮೇಲೆ ಅವಲಂಬಿತವಾಗಿರುತ್ತದೆ ”ಎಂದು ಸ್ವಾಮಿ ಹೇಳಿದರು. ಸೇತುವೆಯ ಒಂದು ಭಾಗವನ್ನು ನಿರ್ಮಿಸಲು ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮವು ಧನಸಹಾಯ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com