ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ: ಅಕ್ರಮವಾಗಿ ಸಾಗಿಸುತ್ತಿದ್ದ 1.83 ಕೆಜಿ ಚಿನ್ನ ವಶ

94.02 ಲಕ್ಷ ರೂ.ಗಳ ಮೌಲ್ಯದ ಒಟ್ಟು 1.836 ಕಿಲೋಗ್ರಾಂ ಚಿನ್ನವನ್ನು ಕೆಂಪೆಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೊಲ್ಲಿ ರಾಷ್ಟ್ರಗಳಿಂದ ಕಳ್ಳಸಾಗಣೆ ಮಾಡುತ್ತಿದ್ದ ಅಂತಾರಾಷ್ಟ್ರೀಯ ಪ್ರಯಾಣಿಕರಿಂದ ವಶಪಡಿಸಿಕೊಳ್ಳಲಾಗಿದೆ. ವಿಮಾನ ನಿಲ್ದಾಣ ಎಂಟ್ರಿ ಜಾಗದಲ್ಲಲ್ಲಿ ವಿಮಾನ ನಿಲ್ದಾಣ ಕಸ್ಟಮ್ಸ್ ವಿಭಾಗದ ಏರ್ ಇಂಟೆಲಿಜೆನ್ಸ್ ಘಟಕವು ಈ ಕಾರ್ಯಾಚರಣೆ ನಡೆಸಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ: ಅಕ್ರಮವಾಗಿ ಸಾಗಿಸುತ್ತಿದ್ದ 1.83 ಕೆಜಿ ಚಿನ್ನ ವಶ

ಬೆಂಗಳೂರು: 94.02 ಲಕ್ಷ ರೂ.ಗಳ ಮೌಲ್ಯದ ಒಟ್ಟು 1.836 ಕಿಲೋಗ್ರಾಂ ಚಿನ್ನವನ್ನು ಕೆಂಪೆಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೊಲ್ಲಿ ರಾಷ್ಟ್ರಗಳಿಂದ ಕಳ್ಳಸಾಗಣೆ ಮಾಡುತ್ತಿದ್ದ ಅಂತಾರಾಷ್ಟ್ರೀಯ ಪ್ರಯಾಣಿಕರಿಂದ ವಶಪಡಿಸಿಕೊಳ್ಳಲಾಗಿದೆ. ವಿಮಾನ ನಿಲ್ದಾಣ ಎಂಟ್ರಿ ಜಾಗದಲ್ಲಲ್ಲಿ ವಿಮಾನ ನಿಲ್ದಾಣ ಕಸ್ಟಮ್ಸ್ ವಿಭಾಗದ ಏರ್ ಇಂಟೆಲಿಜೆನ್ಸ್ ಘಟಕವು ಈ ಕಾರ್ಯಾಚರಣೆ ನಡೆಸಿದೆ.

ದುಬೈನಿಂದ ಎಮಿರೇಟ್ಸ್ ವಿಮಾನದಲ್ಲಿ ಆಗಮಿಸಿದ ಕೊಡಗು ಮೂಲದವರಿಂದ ಅತಿದೊಡ್ಡಪ್ರಮಾಣದ ಚಿನ್ನವನ್ನು ಶಪಡಿಸಿಕೊಳ್ಳಲಾಗಿದೆ. "ಮೊಹಮ್ಮದ್ ಅವರ ಕಾಲುಗಳ ಹಿಂಭಾಗದಲ್ಲಿ 2320 ಗ್ರಾಂ ಚಿನ್ನದ ಪೇಸ್ಟ್ ಅನ್ನು ಇಟ್ಟುಕೊಂಡಿರುವುಉದನ್ನು ನಾವು ಕಂಡುಕೊಂಡಿದ್ದೇವೆ, ಅವರು ಫ್ಲೈಟ್ ನಂ EK564 ಮೂಲಕ ಶುಕ್ರವಾರ ಬೆಳಿಗ್ಗೆ ಕೆಐಎಗೆ ಆಗಮಿಸಿದ್ದರು.ಪೇಸ್ಟ್ ಅನ್ನು ಹೊರತೆಗೆದ ನಂತರ, ಅದರಿಂದ ನಾವು ಪಡೆಯಬಹುದಾದ ಚಿನ್ನವು 1435 ಗ್ರಾಂ. ನಷ್ಟೆಂದು ನಾವು ಪತ್ತೆ ಮಾಡಿದ್ದೆವು ಎಂದು ಹಿರಿಯ ಕಸ್ಟಮ್ಸ್ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

"ವಶಪಡಿಸಿಕೊಂಡ ಚಿನ್ನದ ಮಾರುಕಟ್ಟೆ ಮೌಲ್ಯ 73.49 ಲಕ್ಷವಾಗಿದೆ ”ಎಂದು ಅಧಿಕಾರಿ ತಿಳಿಸಿದ್ದಾರೆ.ನಿಯಮಿತವಾಗಿ ಮಾಡಲಾಗುತ್ತಿರುವ ಪ್ರಯಾಣಿಕರ ಪ್ರೊಫೈಲಿಂಗ್ ಆಧರಿಸಿ ವ್ಯಕ್ತಿಯನ್ನು ಹಿಡಿಯಲಾಗಿದೆ ಎಂದು ಅವರು ಹೇಳಿದರು. ದುಬೈ ಮೂಲದ ಮತ್ತೊಬ್ಬ ಪ್ರಯಾಣಿಕನು ಚಿನ್ನವನ್ನು ಪೇಸ್ಟ್ ರೂಪದಲ್ಲಿ ಸಾಗಿಸುವ ತಂತ್ರ ಅನುಸರಿಸಿದ್ದ ಹೊನ್ನಾವರ ಮೂಲದ ಮೊಹಮ್ಮದ್ ಅಶ್ರಫ್ ಚಿನ್ನವನ್ನು ಪುಡಿ ಮಾಡಿ ಪೇಸ್ಟ್‌ನಿಂದ ಮುಚ್ಚಿದ್ದ.

"ಪೇಸ್ಟ್ ತೂಕ 399 ಗ್ರಾಂ ಮತ್ತು ಅದರಲ್ಲಿ ಚಿನ್ನದ ಅಂಶ 251 ಗ್ರಾಂ ಆಗಿದ್ದು ಅದು 12.77 ಲಕ್ಷ ರೂ. ಬೆಲೆಯದ್ದಾಗಿತ್ತು"ಅಧಿಕಾರಿ ತಿಳಿಸಿದ್ದಾರೆ. ಶುಕ್ರವಾರ ಸಂಜೆ ಬೆಂಗಳೂರಿಗೆ ತಲುಪಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ರಿಪಿಟ್ರೇಷನ್ ವಿಮಾನ (IX1246) ನಲ್ಲಿ ಅಶ್ರಫ್ ಆಗಮಿಸಿದ್ದ.

ಮೂರನೇ ಘಟನೆಯಲ್ಲಿ ಕಚ್ಚಾ ಚಿನ್ನವಿದೆ.“ಈ ಚಿನ್ನವನ್ನು ದೇಶದೊಳಗೆ ಯಾವುದೇ ರೂಪದಲ್ಲಿ ತರುವುದನ್ನು ನಿಷೇಧಿಸಲಾಗಿದೆ. 150 ಗ್ರಾಂ ತೂಕದ ಕಚ್ಚಾ ಚಿನ್ನದಿಂದ ಮಾಡಿದ ಸರವನ್ನು ಕುವೈತ್‌ನ ಪ್ರಯಾಣಿಕರೊಬ್ಬರು ಧರಿಸಿದ್ದರು, ಅವರು ಕುವೈತ್ ಏರ್‌ವೇಸ್ ವಿಮಾನ (KU1353)ದ ಮೂಲಕ ಆಗಮಿಸಿದ್ದರು,"

ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್: ಇಬ್ಬರ ಬಂಧನ

ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್ ವಿರುದ್ಧದ ದಾಳಿಯಲ್ಲಿ ಸಿಟಿ ಕ್ರೈಂ ಬ್ರಾಂಚ್ (ಸಿಸಿಬಿ) ಇಬ್ಬರು ವ್ಯಕ್ತಿಗಳನ್ನು ಬಂಧಿಸಿ10 ಲಕ್ಷ ರೂ ಮತ್ತು ಐದು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದೆ. 

ಚಾಮರಾಜ್‌ಪೇಟೆ ನಿವಾಸಿಗಳಾದ ಆಕಾಶ್ (31) ಮತ್ತು ಅವರ ಸ್ನೇಹಿತ ನವೀನ್ ದಾನಿ (29) ಎನ್ನುವವರನ್ನು ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿ ಬಂಧಿಸಲಾಗಿದೆ.

ಸುಳಿವು ದೊರೆತ ಹಿನ್ನೆಲೆ ಫೋನ್ ಮೂಲಕ ಗ್ರಾಹಕರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾಗ ಇಬ್ಬರನ್ನು ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಪಂದ್ಯಗಳ ಆನ್‌ಲೈನ್ ಬೆಟ್ಟಿಂಗ್ ಅನ್ನು ನಡೆಸಲು ಅವರು ಎರಡು ಮೊಬೈಲ್ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದರು. ವಿಚಾರಣೆಯ ಸಮಯದಲ್ಲಿ, ಆರೋಪಿಗಳು ಕಳೆದ ವರ್ಷದಿಂದ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದೇವೆ ಎಂದು ಒಪ್ಪಿಕೊಂಡರು ಮತ್ತು ಅವರ ಕೆಲವು ಸಹವರ್ತಿಗಳ ಹೆಸರುಗಳನ್ನು ಸಹ ಬಹಿರಂಗಪಡಿಸಿದರು. ಇತರ ಆರೋಪಿಗಳನ್ನು ಬಂಧಿಸಲು ಪ್ರಯತ್ನ ನಡೆಯುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com