ಜಿಐ ಟ್ಯಾಗ್ ನೊಂದಿಗೆ 'ಗಜನಿ ಕಗ್ಗ'ವನ್ನು ಸಂರಕ್ಷಿಸಬೇಕು: ಜೀವವೈವಿಧ್ಯ ಮಂಡಳಿಯಿಂದ ಕೇಂದ್ರಕ್ಕೆ ಪತ್ರ 

ಈ ಗಜನಿ ಯುದ್ಧ ಮಾಡಲು ಹೋಗುತ್ತಿಲ್ಲ. ಬದಲಾಗಿ ಅದನ್ನು ರಕ್ಷಿಸಬೇಕಾಗಿದೆ! ಹೆಚ್ಚುತ್ತಿರುವ ಹೈಬ್ರಿಡ್ ಪ್ರಭೇದಗಳು ಮತ್ತು ಜಲಚರಗಳಿಂದಾಗಿ ಮರೆತು ಕಳೆದುಹೋಗುತ್ತಿರುವ ಭತ್ತದ ಪ್ರಭೇದವಾದ ಗಜಾನಿ ಕಗ್ಗ ಬೆಳೆಯನ್ನು ಸಂರಕ್ಷಿಸಬೇಕಾಗಿದೆ. ಕೇಂದ್ರ ಸರ್ಕಾರವು ಇದಕ್ಕೆ ಭೌಗೋಳಿಕ ಸೂಚ್ಯಂಕ(ಜಿಐ)ಟ್ಯಾಗ್ ನೀಡಲು ಆಶಿಸುತ್ತಿದ್ದಾರೆ.
ಗಜನಿ ಕಗ್ಗ ಎಂಬ ಭತ್ತದ ಅಪರೂಪದ ಪ್ರಭೇದ
ಗಜನಿ ಕಗ್ಗ ಎಂಬ ಭತ್ತದ ಅಪರೂಪದ ಪ್ರಭೇದ

ಬೆಂಗಳೂರು: ಈ ಗಜನಿ ಯುದ್ಧ ಮಾಡಲು ಹೋಗುತ್ತಿಲ್ಲ. ಬದಲಾಗಿ ಅದನ್ನು ರಕ್ಷಿಸಬೇಕಾಗಿದೆ! ಹೆಚ್ಚುತ್ತಿರುವ ಹೈಬ್ರಿಡ್ ಪ್ರಭೇದಗಳು ಮತ್ತು ಜಲಚರಗಳಿಂದಾಗಿ ಮರೆತು ಕಳೆದುಹೋಗುತ್ತಿರುವ ಭತ್ತದ ಪ್ರಭೇದವಾದ ಗಜಾನಿ ಕಗ್ಗ ಬೆಳೆಯನ್ನು ಸಂರಕ್ಷಿಸಬೇಕಾಗಿದೆ. ಕೇಂದ್ರ ಸರ್ಕಾರವು ಇದಕ್ಕೆ ಭೌಗೋಳಿಕ ಸೂಚ್ಯಂಕ(ಜಿಐ)ಟ್ಯಾಗ್ ನೀಡಲು ಆಶಿಸುತ್ತಿದ್ದಾರೆ.

ಪ್ರಸ್ತುತ ಸ್ಥಳೀಯ ರೈತರು ತಮ್ಮ ಅಸೋಸಿಯೇಷನ್ ಗಳ ಮೂಲಕ ಗಜನಿ ಬೆಳೆಯುವ ಪ್ರದೇಶಗಳನ್ನು ಕಾಪಾಡಿಕೊಳ್ಳಲು ನೋಡುತ್ತಿದ್ದಾರೆ. ಕಣ್ಮರೆಯಾಗುತ್ತಿರುವ ಈ ಭತ್ತದ ಪ್ರಭೇದವನ್ನು ಬೆಳೆದು ಸಂರಕ್ಷಿಸಲು ರೈತರು ಸರ್ಕಾರವನ್ನು ಬೀಜವನ್ನು ಒದಗಿಸುವಂತೆ ಕೇಳುತ್ತಿದ್ದಾರೆ.

ಕರ್ನಾಟಕ ಜೀವವೈವಿಧ್ಯ ನಿಗಮ(ಕೆಬಿಬಿ) ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಗಜನಿ ಕಗ್ಗ ಪ್ರಭೇದಕ್ಕೆ ಜಿಐ ಟ್ಯಾಗ್ ನೀಡಬೇಕೆಂದು ಶಿಫಾರಸು ಮಾಡಿದೆ. ಇದನ್ನು ಸದ್ಯ ಉತ್ತರ ಕನ್ನಡದ ಕುಮಟಾ ಜಿಲ್ಲೆಯಲ್ಲಿ ಸಣ್ಣ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಲವಣಯುಕ್ತ-ಸಹಿಷ್ಣು ವಿಧವು ಕರಾವಳಿ ಪ್ರದೇಶಗಳಿಗೆ ವಿಶಿಷ್ಟವಾಗಿದೆ.

ಜೀವವೈವಿಧ್ಯ ನಿಗಮದ ಅಧ್ಯಕ್ಷ ಅನಂತ್ ಹೆಗ್ಡೆ ಅಶಿಸರ, ಈ ವೈವಿಧ್ಯತೆಯ ಅನನ್ಯತೆ ಮತ್ತು ಅದು ಎದುರಿಸುತ್ತಿರುವ ಉಳಿಯುವಿಕೆಯ ಹೋರಾಟದಿಂದಾಗಿ ಮಂಡಳಿ ಈ ನಿರ್ಧಾರವನ್ನು ತೆಗೆದುಕೊಂಡಿತು. ಇದಕ್ಕೆ ರಕ್ಷಣೆ ಮತ್ತು ಮಾನ್ಯತೆ ಬೇಕು, ಈ ಪ್ರದೇಶದ ಕೃಷಿ-ಜೀವವೈವಿಧ್ಯತೆಯಿಂದಾಗಿ ಜಿಐ ಟ್ಯಾಗ್ ನೀಡುವಂತೆ ನಾವು ವಾಣಿಜ್ಯ ಸಚಿವಾಲಯವನ್ನು ಕೇಳಿದ್ದು, ಇದು ಹೆಚ್ಚು ಅಗತ್ಯವಾಗಿದೆ ಎಂದು ಕುಮಟಾದ ತಜ್ಞರು ಹೇಳಿದ್ದಾರೆ ಎಂದು ತಿಳಿಸಿದರು.

ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನೆ ಸಂಸ್ಥೆ (ಎಂಪ್ರಿ) ತನ್ನ ಕೃಷಿ-ವೈವಿಧ್ಯತೆಯ ವರದಿಯಲ್ಲಿ, ಎಂಟು ವರ್ಷಗಳ ಹಿಂದೆ ಭತ್ತದ ವಿಶಿಷ್ಟ ಪ್ರಭೇದಗಳ ಬಗ್ಗೆ ಸಿದ್ಧಪಡಿಸಿದೆ, ಗಜನಿ ಕಗ್ಗವನ್ನು ಪಟ್ಟಿ ಮಾಡಿದೆ, ಅದಕ್ಕೆ ರಕ್ಷಣೆ ಬೇಕು ಎಂದು ಸೂಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com