ಸೂಪಾ ಹಿನ್ನೀರಿನ 'ಸೂರ್ಯಾಸ್ತ ಪಾಯಿಂಟ್' ತೆರೆಯುವಂತೆ ಹೆಚ್ಚಿದ ಬೇಡಿಕೆ

ಜೋಯಿಡಾದ ಬಾಪೆಲಿ ಕ್ರಾಸ್ ಸರ್ಕಲ್ ನಲ್ಲಿರುವ ಸುಪಾ ಅಣೆಕಟ್ಟು ಹಿನ್ನೀರಿನಲ್ಲಿ ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ ಸೂರ್ಯಾಸ್ತದ ಸ್ಥಳಕ್ಕೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಿದ ನಂತರ ಉತ್ತರ ಕನ್ನಡ ಜಿಲ್ಲೆ ಪ್ರವಾಸೋದ್ಯಮಕ್ಕೆ ಮತ್ತೊಂದು ಹೊಡೆತ ಬಿದ್ದಿದೆ.
ಸೂಪಾ ಜಲಾಶಯ
ಸೂಪಾ ಜಲಾಶಯ

ಹುಬ್ಬಳ್ಳಿ: ಜೋಯಿಡಾದ ಬಾಪೆಲಿ ಕ್ರಾಸ್ ಸರ್ಕಲ್ ನಲ್ಲಿರುವ ಸುಪಾ ಅಣೆಕಟ್ಟು ಹಿನ್ನೀರಿನಲ್ಲಿ ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ ಸೂರ್ಯಾಸ್ತದ ಸ್ಥಳಕ್ಕೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಿದ ನಂತರ ಉತ್ತರ ಕನ್ನಡ ಜಿಲ್ಲೆ ಪ್ರವಾಸೋದ್ಯಮಕ್ಕೆ ಮತ್ತೊಂದು ಹೊಡೆತ ಬಿದ್ದಿದೆ. ಅಣೆಕಟ್ಟು ಸ್ಥಳಕ್ಕೆ ಪ್ರವಾಸಿಗರು ಪ್ರವೇಶಿಸುವುದನ್ನು ಜಿಲ್ಲಾ ಪೊಲೀಸರು ನಿರ್ಬಂಧಿಸಿ ನಿಷೇಧ ಹೇರಿದ್ದಾರೆ.

ಪ್ರವಾಸಿಗರ ಹಿತದೃಷ್ಟಿಯಿಂದ ಜಿಲ್ಲಾಡಳಿತ ಮಧ್ಯ ಪ್ರವೇಶಿಸಬೇಕೆಂದು ಒತ್ತಾಯಿಸಲಾಗಿದೆ, ಲಾಕ್ ಡೌನ್ ನಂತರ ಪ್ರವಾಸೋದ್ಯಮ ಚಟುವಟಿಕೆಗಳು ಸಹಜ ಸ್ಥಿತಿಗೆ ಬರುತ್ತಿದ್ದು, ಪ್ರವಾಸಿಗರು ನಿಧಾನವಾಗಿ  ಹೋಮ್ ಸ್ಟೇ ಮತ್ತು ನೇಚರ್ ಕ್ಯಾಂಪ್ ಗಳತ್ತ ಬರುತ್ತಿದ್ದಾರೆ. 

ದಾಂಡೇಲಿ, ಜೊಯಿಡಾ, ಅಥವಾ ಗಂಡೇಶ್‌ಗುಡಿಗೆ ಭೇಟಿ ನೀಡುವ ಹಲವಾರು ಪ್ರವಾಸಿಗರು ಸುಪಾ ಅಣೆಕಟ್ಟು ಹಿನ್ನೀರಿನ ಸೂರ್ಯಾಸ್ತದ ಸ್ಥಳವನ್ನು ಬಯಸುತ್ತಿದ್ದಾರೆ. 

ಹಗಲಿನಲ್ಲಿ ಪ್ರವಾಸಿಗರು ಉಲವಿ ಮತ್ತು ಗಣೇಶಗುಡಿಯಲ್ಲಿ ವಾಟರ್ ಸ್ಪೋರ್ಟ್ ನಲ್ಲಿ ಕಾಲ ಕಳೆದು ಸಂಜೆ ಅವರು ಸೂರ್ಯಾಸ್ತದ ಸ್ಥಳಕ್ಕೆ ಭೇಟಿ ನೀಡಲು ಬಪೆಲಿ ಕ್ರಾಸ್‌ನಲ್ಲಿ ಸೇರುತ್ತಿದ್ದರು.

ಆದರೆ ಸದ್ಯ ನಿರ್ಭಂದ ಹೇರಿರುವ ಕಾರಣ ಹೋಮ್ ಸ್ಟೇ ಮಾಲೀಕರು ಮಾಜಿ ಸಚಿವ ಆರ್ ವಿ ದೇಶಪಾಂಡೆ ಅವರನ್ನು ಭೇಟಿ ಮಾಡಿ ಮಧ್ಯ ಪ್ರವೇಶಿಸುವಂತೆ ಕೋರಲು ನಿರ್ಧರಿಸಿದ್ದಾರೆ.

 ಪ್ರವಾಸಿಗರಿಗೆ ಸೂರ್ಯಾಸ್ತದ ಸ್ಥಳಕ್ಕೆ ಭೇಟಿ ನೀಡಲು ಅವಕಾಶ ನೀಡುವಂತೆ ಕೋರಿ ಅವರು ಕೆಪಿಸಿಎಲ್‌ಗೆ ನಿಯೋಗವನ್ನು ಕರೆದೊಯ್ಯಲು ಯೋಜಿಸುತ್ತಿದ್ದು. ನಾವು ಅಧಿಕಾರಿಗಳನ್ನು ಭೇಟಿಯಾಗುತ್ತೇವೆ ಎಂದು ಕಾಳಿ ಪ್ರವಾಸೋದ್ಯಮ ಸಂಘದ ಅಧ್ಯಕ್ಷ ಸುನಿಲ್ ದೇಸಾಯಿ ತಿಳಿಸಿದ್ದಾರೆ.

ಅಣೆಕಟ್ಟು ಅಧಿಕಾರಿಗಳಿಂದ ಆದೇಶವಿದೆ ಮತ್ತು ಭಾರತದ ಇತರ ಜಲಾಶಯಗಳಲ್ಲಿ ಮಾಡಿದಂತೆ ಭದ್ರತಾ ಕಾರಣಗಳಿಗಾಗಿ ಪ್ರವಾಸಿಗರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com