ಕೋವಿಡ್ ರೋಗಿಗಳ ದತ್ತಾಂಶ ಸುರಕ್ಷತೆಗೆ ಕುತ್ತು?: ಸ್ಯಾನಿಟೈಸರ್ ಸಂಸ್ಥೆಗಳ ಬಳಿ ನಿಮ್ಮ ನಂಬರ್!

ಕೋವಿಡ್-19 ರೋಗಿಗಳ ದತ್ತಾಂಶ ಸಾರ್ಜನಿಕವಾಗಿ ಲಭ್ಯವಿದ್ದು, ಸ್ಯಾನಿಟೈಸರ್ ಸಂಸ್ಥೆಗಳು ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಸ್ಪಷ್ಟವಾಗುತ್ತಿದೆ. 
ಕೋವಿಡ್ ಪರೀಕ್ಷೆ
ಕೋವಿಡ್ ಪರೀಕ್ಷೆ

ಬೆಂಗಳೂರು: ಕೋವಿಡ್-19 ರೋಗಿಗಳ ದತ್ತಾಂಶ ಸಾರ್ಜನಿಕವಾಗಿ ಲಭ್ಯವಿದ್ದು, ಸ್ಯಾನಿಟೈಸರ್ ಸಂಸ್ಥೆಗಳು ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಸ್ಪಷ್ಟವಾಗುತ್ತಿದೆ. 

ಯಾವುದೇ ವ್ಯಕ್ತಿಗೆ ಕೊರೋನಾ ಸೋಂಕು ದೃಢಪಡುತ್ತಿದ್ದಂತೆಯೇ ಖಾಸಗಿ ಸ್ಯಾನಿಟೈಸರ್ ಸಂಸ್ಥೆಗಳು ಅವರ ನಂಬರ್ ಗೆ ಕರೆ ಮಾಡಿ ಸ್ಯಾನಿಟೈಸ್ ಸೇವೆಗಳನ್ನು ಪಡೆದುಕೊಳ್ಳುವುದ್ಕಕೆ ಉತ್ತೇಜಿಸುತ್ತಿದ್ದಾರೆ. ಕರೆ, ಎಸ್ಎಂಎಸ್ ಮೂಲಕ ಈ ರೀತಿ ಸ್ಯಾನಿಟೈಸರ್ ಸಂಸ್ಥೆಗಳು ಕೋವಿಡ್-19 ರೋಗಿಗಳಿಗೆ ಕರೆ ಮಾಡುತ್ತಿರುವ ದತ್ತಾಂಶವನ್ನು ಯಾರಿಗೆ ಬೇಕಾದರೂ ಲಭ್ಯವಾಗುವ ಸ್ಥಿತಿಯಲ್ಲಿ ನಿರ್ವಹಣೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. 

ಕೋವಿಡ್-19 ವಾರ್ ರೂಮ್ ನಿಂದಲೇ ದತ್ತಾಂಶ ಬಹಿರಂಗಗೊಳ್ಳುತ್ತಿದೆ ಎಂಬುದು ಮತ್ತಷ್ಟು ಆತಂಕಕಾರಿ ವಿಷಯವಾಗಿದೆ

ಬೆಂಗಳೂರು ಮೂಲದ ಪ್ರೊಗ್ರಾಮರ್ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದು, ರೋಗಿಗಳ ಖಾಸಗಿ ವೈದ್ಯಕೀಯ ದತ್ತಾಂಶ ಹೇಗೆಲ್ಲಾ ಸಾರ್ವಜನಿಕಗೊಂಡಿದೆ, ಅದನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳಬಹುದು ಎಂಬುದನ್ನು ವಿವರಿಸಿದ್ದಾರೆ.

ಕೋರಮಂಗಲದ ನಿವಾಸಿ ಖಾ ರಾವ್ (ಹೆಸರು ಬದಲಾವಣೆಯಾಗಿದೆ) ಕೋವಿಡ್-19 ಸೋಂಕಿಗೆ ಗುರಿಯಾಗಿದ್ದರು. ಸೋಂಕು ದೃಢಪಟ್ಟ ಬೆನ್ನಲ್ಲೇ ಸ್ಯಾನಿಟೈಸೇಷನ್ ಸೇವೆಗಳನ್ನು ಒದಗಿಸುವ ಸಂಸ್ಥೆಯಿಂದ ಕರೆ ಬಂದಿತ್ತು. ಪ್ರಾರಂಭದಲ್ಲಿ ಆಕೆ ಇದು ಬಿಬಿಎಂಪಿ ಪ್ರೊಟೋಕಾಲ್ ಇರಬಹುದೆಂದುಕೊಂಡಿದ್ದರು. ಆದರೆ ತಮ್ಮ ನಂಬರ್ ಹೇಗೆ ಸಿಕ್ಕಿತೆಂಬ ರೇಖಾ ಅವರ ಪ್ರಶ್ನೆಗೆ ಸ್ಯಾನಿಟೈಸರ್ ಸಂಸ್ಥೆಯ ಸಿಬ್ಬಂದಿಗಳ ಬಳಿ ಉತ್ತರ ಇರಲಿಲ್ಲ. ಕೋವಿಡ್-19 ರೋಗಿಗಳಿಗೆ ಐಸೊಲೇಷನ್ ನಲ್ಲಿ ಸಹಾಯ ಮಾಡುವ ಸ್ವಯಂ ಸೇವಕರ ಬಳಿಯೂ ಈ ರೀತಿಯ ಮಾಹಿತಿ ದುರ್ಬಳಕೆ ದೂರು ಬಂದಿವೆ ಎಂಬುದು ಗಮನಾರ್ಹ.

ಈ ರೀತಿಯಾಗಿ ಪಡೆದ ದತ್ತಾಂಶದಿಂದ ಏನನ್ನೂ ಮಾಡಬಹುದಾಗಿದೆ. ಗೌಪ್ಯತೆ ಹಾಗೂ ಖಾಸಗಿತನದ ಉಲ್ಲಂಘನೆಯಾಗುತ್ತಿರುವುದನ್ನು ಬಿಬಿಎಂಪಿ ಆಯುಕ್ತರಿಗೆ ಟ್ವಿಟರ್ ಮೂಲಕ ಗಮನಕ್ಕೆ ತರಲಾಗಿದೆ. ಆದರೂ ಈ ವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಯಾವುದೇ ಸ್ಕ್ಯಾಮರ್ ಈ ದತ್ತಾಂಶವನ್ನು ಪಡೆದು ಯಾವುದೇ ರೀತಿಯ ವಂಚನೆ ಮಾಡಬಹುದು ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರಕಟಿಸಿರುವ ವರದಿಯಿಂದ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com