ಅತಿ ಕಡಿಮೆ ಪ್ರಯಾಣಿಕರು: ಬೆಂಗಳೂರು-ಚೆನ್ನೈ ರೈಲು ಸಂಚಾರ ಸ್ಥಗಿತ! 

ಅತ್ಯಂತ ಹೆಚ್ಚು ಪ್ರಯಾಣಿಕರು ಇರುತ್ತಿದ್ದ ಬೆಂಗಳೂರು-ಚೆನ್ನೈ ನಡುವಿನ ರೈಲಿನಲ್ಲಿ ಇತ್ತೀಚಿನ ದಿನಗಳಲ್ಲಿ ಕೋವಿಡ್-19 ಕಾರಣದಿಂದಾಗಿ ಪ್ರಯಾಣಿಕರು ಕಡಿಮೆಯಾಗಿದ್ದು, ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಅತಿ ಕಡಿಮೆ ಪ್ರಯಾಣಿಕರು: ಬೆಂಗಳೂರು-ಚೆನ್ನೈ ರೈಲು ಸಂಚಾರ ಸ್ಥಗಿತ!
ಅತಿ ಕಡಿಮೆ ಪ್ರಯಾಣಿಕರು: ಬೆಂಗಳೂರು-ಚೆನ್ನೈ ರೈಲು ಸಂಚಾರ ಸ್ಥಗಿತ!

ಬೆಂಗಳೂರು: ಅತ್ಯಂತ ಹೆಚ್ಚು ಪ್ರಯಾಣಿಕರು ಇರುತ್ತಿದ್ದ ಬೆಂಗಳೂರು-ಚೆನ್ನೈ ನಡುವಣ ರೈಲಿನಲ್ಲಿ ಇತ್ತೀಚಿನ ದಿನಗಳಲ್ಲಿ ಕೋವಿಡ್-19 ಕಾರಣದಿಂದಾಗಿ ಪ್ರಯಾಣಿಕರು ಕಡಿಮೆಯಾಗಿದ್ದು, ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಸೂಪರ್ ಫಾಸ್ಟ್ ವಿಶೇಷ ರೈಲನ್ನು ನ.21 ರಿಂದ ಸ್ಥಗಿತಗೊಳಿಸಲಾಗುತ್ತಿದೆ.

ಅ.23 ರಿಂದ ಪ್ರಾರಂಭವಾದ ರೈಲು ನಂಬರ್ 02027/02028 ಮಂಗಳವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳೂ ಕಾರ್ಯನಿರ್ವಹಿಸುತ್ತಿದ್ದವು. ಆದರೆ ಈಗ ಜನ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗುತ್ತಿದೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಎಕೆ ವರ್ಮಾ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

"ಕಳೆದ ಮೂರು-ನಾಲ್ಕು ದಿನಗಳಿಂದ ಕಡಿಮೆ ಜನರು ಸಂಚರಿಸುತ್ತಿದ್ದಾರೆ, ಈ ಕಾರಣದಿಂದಾಗಿ ಸ್ಥಗಿತಗೊಳಿಸಲಾಗುತ್ತಿದೆ ಎಂದು ಎಕೆ ವರ್ಮಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com