ಹೆಸರಘಟ್ಟದ 5 ಸಾವಿರ ಎಕರೆ ಹುಲ್ಲುಗಾವಲನ್ನು ಮೀಸಲು ಪ್ರದೇಶ ಎಂದು ಘೋಷಿಸಲು ಅರಣ್ಯ ಇಲಾಖೆಯಿಂದ ಪ್ರಸ್ತಾವನೆ

ಮಾನವನ ವಿಪರೀತ ಚಟುವಟಿಕೆ ಮತ್ತು ವಾಣಿಜ್ಯೀಕರಣಗೊಳ್ಳುವುದರಿಂದ ತಪ್ಪಿಸಲು ಹೆಸರಘಟ್ಟದ ಸುಮಾರು 5 ಸಾವಿರ ಎಕರೆ ಹುಲ್ಲುಗಾವಲು ಪ್ರದೇಶವನ್ನು ರಕ್ಷಿಸಲು ಸರ್ಕಾರದ ಇಲಾಖೆಗಳು ಮುಂದಾಗಿವೆ.
ಹೆಸರಘಟ್ಟದ ಸುತ್ತಮುತ್ತ ಪ್ರದೇಶ
ಹೆಸರಘಟ್ಟದ ಸುತ್ತಮುತ್ತ ಪ್ರದೇಶ

ಬೆಂಗಳೂರು: ಮಾನವನ ವಿಪರೀತ ಚಟುವಟಿಕೆ ಮತ್ತು ವಾಣಿಜ್ಯೀಕರಣಗೊಳ್ಳುವುದರಿಂದ ತಪ್ಪಿಸಲು ಹೆಸರಘಟ್ಟದ ಸುಮಾರು 5 ಸಾವಿರ ಎಕರೆ ಹುಲ್ಲುಗಾವಲು ಪ್ರದೇಶವನ್ನು ರಕ್ಷಿಸಲು ಸರ್ಕಾರದ ಇಲಾಖೆಗಳು ಮುಂದಾಗಿವೆ.

ಕರ್ನಾಟಕ ಅರಣ್ಯ ಇಲಾಖೆ ಮತ್ತು ಪಶುಸಂಗೋಪನಾ ಇಲಾಖೆಗಳು ಒಟ್ಟಾಗಿ ಈ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿವೆ. ಅರಣ್ಯ ಇಲಾಖೆಯ ಮುಖ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್, ಪ್ರಸ್ತಾವನೆಯನ್ನು ವನ್ಯಜೀವಿ ಮಂಡಳಿಯ ಸಭೆಯ ಮುಂದಿಡಲಾಗುವುದು, ಹುಲ್ಲುಗಾವಲಿನಲ್ಲಿ ಬೆಳೆಯುವ ಪ್ರಬೇಧಗಳನ್ನು ಮತ್ತು ಇತರ ಜೀವವೈವಿಧ್ಯವನ್ನು ರಕ್ಷಿಸುವ ಅಗತ್ಯವಿದೆ ಎಂದರು.

ಈಗಿರುವ 5 ಸಾವಿರ ಎಕರೆ ಪ್ರದೇಶದಲ್ಲಿ 2 ಸಾವಿರ ಎಕರೆ ಪ್ರದೇಶ ಪಶುಸಂಗೋಪನಾ ಇಲಾಖೆಗೆ ಮತ್ತು 3 ಸಾವಿರ ಎಕರೆ ಪ್ರದೇಶ ಕರ್ನಾಟಕ ಅರಣ್ಯ ಇಲಾಖೆಗೆ ಸೇರಿದೆ. ಹಲವು ಪಕ್ಷಿಪ್ರೇಮಿಗಳು ಹೆಸರಘಟ್ಟ ಕೆರೆ ಬಳಿ ಪಕ್ಷಿ ವೀಕ್ಷಣೆಗೆ ಬರುತ್ತಾರೆ, ಇದರಿಂದ ಪಕ್ಷಿ ಸಂಕುಲಕ್ಕೆ ಅಪಾಯವಿರುತ್ತದೆ. ಕೇವಲ ಪಕ್ಷಿ ವೀಕ್ಷಣೆಗೆ ಮಾತ್ರ ಬರುವವರಿರುವುದಿಲ್ಲ, ಕೆಲವರು ಪಕ್ಷಿ ಬೇಟೆಯಾಡುತ್ತಾರೆ, ಅವುಗಳಿಗೆ ತೊಂದರೆ ಕೊಡುತ್ತಾರೆ, ಜಾನುವಾರುಗಳಿಗೆ ತೊಂದರೆ ನೀಡುತ್ತಾರೆ, ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಾರೆ, ಇದರಿಂದ ಜೀವ ವೈವಿಧ್ಯಕ್ಕೆ ಅಪಾಯವಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ ಎಂದರು.

ಈ ಪ್ರದೇಶದ ಜೀವವೈವಿಧ್ಯತೆಯ ಮೇಲೆ ಪರಿಣಾಮ ಬೀರುತ್ತಿರುವ ಮಾನವ ಹಸ್ತಕ್ಷೇಪದಿಂದಾಗಿ ಅರಣ್ಯ ಅಧಿಕಾರಿಗಳು ಈ ಪ್ರದೇಶದ ರಕ್ಷಣೆಯ ಬಗ್ಗೆ ವಿಶೇಷವಾಗಿ ಆಸಕ್ತಿ ಹೊಂದಿದ್ದಾರೆ. ಸ್ಥಳೀಯ ಜನರು ಸಣ್ಣ ಪ್ರಾಣಿಗಳು, ಪಕ್ಷಿಗಳು ಮತ್ತು ಸರೀಸೃಪಗಳನ್ನು ಬೇಟೆಯಾಡಿದ ಉದಾಹರಣೆಗಳೂ ಇವೆ. ಹೆಸರಘಟ್ಟ ಸರೋವರವು ಅನೇಕ ವಲಸೆ ಜಾತಿಯ ಪಕ್ಷಿಗಳನ್ನು ಪಡೆಯುತ್ತದೆ, ಅವು ಸ್ಥಳೀಯರಿಂದ ಹೆಚ್ಚುವರಿ ರಕ್ಷಣೆ ಪಡೆಯುತ್ತವೆ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com