ಡಿ.10ರಿಂದ ಮೈಸೂರು-ಮಂಗಳೂರು ನಡುವೆ ಏರ್ ಇಂಡಿಯಾ ವಿಮಾನ ಹಾರಾಟ 

ಏರ್ ಇಂಡಿಯಾ ವಿಮಾನ ಮೈಸೂರು-ಮಂಗಳೂರು ಮಧ್ಯೆ ಡಿ 10ರಿಂದ ಹಾರಾಟ ನಡೆಸಲಿದೆ. ಈ ಮೂಲಕ ಕರಾವಳಿಯವರ ಬಹುದಿನಗಳ ಕನಸು ನನಸಾಗಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು:ಏರ್ ಇಂಡಿಯಾ ವಿಮಾನ ಮೈಸೂರು-ಮಂಗಳೂರು ಮಧ್ಯೆ ಡಿ 10ರಿಂದ ಹಾರಾಟ ನಡೆಸಲಿದೆ. ಈ ಮೂಲಕ ಕರಾವಳಿಯವರ ಬಹುದಿನಗಳ ಕನಸು ನನಸಾಗಲಿದೆ.

ಮೈಸೂರಿನ ಬಳಿಯ ಮಂಡಕಳ್ಳಿ ವಿಮಾನ ನಿಲ್ದಾಣ ಆರಂಭವಾಗಿ 10 ವರ್ಷಗಳ ಬಳಿಕ ಮೈಸೂರಿನಿಂದ ಮಂಗಳೂರಿಗೆ ವಿಮಾನ ಸೇವೆ ಆರಂಭವಾಗಲಿದ್ದು ಏರ್ ಇಂಡಿಯಾ ವಿಮಾನದ ಅಂಗಸಂಸ್ಥೆಯಾದ ಆಲೈನ್ಸ್ ಏರ್ ವಿಮಾನ ಡಿಸೆಂಬರ್ 10ರಂದು ಹಾರಾಟ ನಡೆಸಲಿದೆ.

ಕರಾವಳಿ ಭಾಗದ 60ರಿಂದ 70 ಸಾವಿರ ನಾಗರಿಕರು ಮೈಸೂರಿನಲ್ಲಿ ನೆಲೆಸಿದ್ದಾರೆ. ಮೈಸೂರು ಭಾಗದವರು ಮುಂಬೈಗೆ ಹೋಗಬೇಕೆಂದರೆ ಬೆಂಗಳೂರಿಗೆ ಹೋಗಿ ಹೋಗಬೇಕಾಗಿತ್ತು. ದೂರವಾಗುತ್ತಿದ್ದರಿಂದ ಪ್ರಯಾಣ, ಮೈಸೂರಿನಿಂದ ಮಂಗಳೂರಿಗೆ ನೇರ ವಿಮಾನ ಸಂಚಾರಕ್ಕೆ ಸೌಲಭ್ಯವಿರಬೇಕೆಂದು ಕೇಳುತ್ತಿದ್ದರು.ಕರಾವಳಿ ಭಾಗದ ಹಲವು ಸಂಘ-ಸಂಸ್ಥೆಗಳು ಮನವಿ ಕೂಡ ಮಾಡಿದ್ದವು. ಮೈಸೂರು ಸಂಸದ ಪ್ರತಾಪ ಸಿಂಹ ಕೂಡ ಸಾಕಷ್ಟು ಪ್ರಯತ್ನ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಅಧಿಕ ಬೇಡಿಕೆ ಬಂದಿದ್ದರಿಂದ ಭಾರತೀಯ ವಿಮಾನಯಾನ ಪ್ರಾಧಿಕಾರ ಅಕ್ಟೋಬರ್ 25ರಿಂದ ವಿಮಾನ ಹಾರಾಟ ನಡೆಸುವುದಕ್ಕೆ ಚಿಂತನೆ ನಡೆಸಿತ್ತು. ಆದರೆ ಕಾರಣಾಂತರಗಳಿಂದ ಮುಂದೂಡಲಾಗಿತ್ತು. 

9ಐ-532 ವಿಮಾನ ಡಿಸೆಂಬರ್ 10ರಂದು ಬೆಳಗ್ಗೆ 11.15ಕ್ಕೆ ಮೈಸೂರಿನಿಂದ ಹೊರಟು ಮಂಗಳೂರಿಗೆ 12.15ಕ್ಕೆ ತಲುಪಲಿದೆ. ನಂತರ 9ಐ-533 ವಿಮಾನ ಮಂಗಳೂರಿನಿಂದ 12.40ಕ್ಕೆ ಹೊರಟು ಮೈಸೂರಿಗೆ 1.40ಕ್ಕೆ ಆಗಮಿಸಲಿದೆ. ಬುಧವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಹಾರಾಟ ನಡೆಸಲಿದ್ದು ಟಿಕೆಟ್ ಕಾಯ್ದಿರಿಸಲು ಮತ್ತು ಹೆಚ್ಚಿನ ಮಾಹಿತಿಗೆ www.airindia.in ಗೆ ಲಾಗ್ ಇನ್ ಆಗಬಹುದು ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಆರ್ ಮಂಜುನಾಥ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com